ಶಂಕರಮೂರ್ತಿಗೆ ರಾಜ್ಯಪಾಲ ಹುದ್ದೆ ಸಾಧ್ಯತೆ?

0
443

ರಾಷ್ಟ್ರೀಯ ಪ್ರತಿನಿಧಿ ವರದಿ
ಶೀಘ್ರವೇ ವಿಧಾನಪರಿಷತ್ ಸಭಾಪತಿ ಡಿ ಹೆಚ್ ಶಂಕರಮೂರ್ತಿಗೆ ರಾಜ್ಯಪಾಲ ಹುದ್ದೆ ಲಭಿಸುವ ಸಾಧ್ಯತೆ ಇದೆ. ಈ ಬಗ್ಗೆ ಡಿ ಹೆಚ್ ಶಂಕರಮೂರ್ತಿ ಅವರು ಗುರುವಾರ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಜತೆ ಚರ್ಚಿಸಿದ್ದರು.
 
 
 
ಈ ಚರ್ಚೆಯ ಪ್ರಕಾರ ಡಿ ಹೆಚ್ ಶಂಕರಮೂರ್ತಿ ರಾಜ್ಯಪಾಲರಾಗುವ ಸಾಧ್ಯತೆ ಇದೆ. ಆಂಧ್ರಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ ಹುದ್ದೆ ಖಾಲಿ ಹಿನ್ನೆಲೆಯಲ್ಲಿ ಡಿ ಹೆಚ್ ಶಂಕರಮೂರ್ತಿಗೆ ರಾಜ್ಯಪಾಲ ಹುದ್ದೆ ಸಿಗಲಿದೆ. ಮೂರು ರಾಜ್ಯಗಳ ಪೈಕಿ ಒಂದು ರಾಜ್ಯಕ್ಕೆ ನೇಮಕಾತಿಯಾಗುವ ಬಗ್ಗೆ ಕೇಂದ್ರ ಗೃಹ ಇಲಾಖೆಯಿಂದ ಶಿಫಾರಸು ಸಾಧ್ಯತೆ ಇದೆ.
 
 
 
ದಕ್ಷಿಣ ಭಾರತದ ರಾಜ್ಯಗಳಿಗೇ ನೇಮಿಸಿ ಎಂದು ಡಿ ಹೆಚ್ ಶಂಕರಮೂರ್ತಿಗ ಅವರು ರಾಜನಾಥ್ ಸಿಂಗ್ ಗೆ ಮನವಿ ಮಾಡಿದ್ದಾರೆ. ತಮಿಳುನಾಡು ರಾಜ್ಯಪಾಲ ಹುದ್ದೆಗೆ ನೇಮಕಾತಿ ವಿಚಾರದಲ್ಲಿ ತಮಿಳುನಾಡಿನ ದಿವಂಗತ ಸಿಎಂ ಜಯಲಲಿತಾ ಅವರು ಡಿ ಎಹ್ ಶಂಕರಮೂರ್ತಿ ನೇಮಕಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಈ ಹಿಂದೆ ಕೇಂದ್ರ ಸರ್ಕಾರಕ್ಕೆ ಅಮ್ಮ ಅಭಿಪ್ರಾಯ ತಿಳಿಸಿದ್ದರು.
 
ಯಾವ ಕಾರಣಕ್ಕೂ ತಮಿಳುನಾಡಿಗೆ ಕನ್ನಡಿಗ ರಾಜ್ಯಪಾಲ ಬೇಡವೆಂದು ಅಮ್ಮಾ ಮನವಿ ಮಾಡಿದ್ದರು. ಕರ್ನಾಟಕ-ತಮಿಳುನಾಡು ಮಧ್ಯೆ ಹಲವು ವೈರುಧ್ಯಗಳಿವೆ. ಆದ್ದರಿಂದ ಕನ್ನಡಿಗರನ್ನು ರಾಜ್ಯಪಾಲರನ್ನಾಗಿ ನೇಮಿಸಬೇಡಿ ಎಂದು ಅಮ್ಮಾ ಸ್ಪಷ್ಟವಾಗಿ ಕೇಂದ್ರ ಸರ್ಕಾರಕ್ಕೆ ತಿಳಿಸಿದ್ದರು.

LEAVE A REPLY

Please enter your comment!
Please enter your name here