'ವ್ಯವಸ್ಥಿತ ಆಹಾರ ಪದ್ಧತಿಯ ಕೊರತೆಯಿಂದ ರಕ್ತಹೀನತೆ'

0
224

ವರದಿ: ಪೂರ್ವ ಕರಿಯನೆಲ
ವ್ಯವಸ್ಥಿತ ಆಹಾರ ಕ್ರಮದ ಕೊರತೆಯ ಕಾರಣಕ್ಕಾಗಿ ಅನೇಕರು ರಕ್ತಹೀನತೆಯ ದೌರ್ಬಲ್ಯದಿಂದ ಬಳಲಬೇಕಾಗುತ್ತದೆ ಎಂದು ಎಟಿಆರ್ ಐಎಮ್ಇಡಿ ವ್ಯವಸ್ಥಾಪಕ ನಿರ್ದೇಶಕ ಡಾ.ಹೃಷಿಕೇಶ್ ಅಭಿಪ್ರಾಯಪಟ್ಟರು.
 
ಉಜಿರೆ ಎಸ್ ಡಿ ಎಂ ಪದವಿ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ರಾಷ್ಟ್ರೀಯ ಸೇವಾ ಯೋಜನೆ “ರಕ್ತಹೀನತೆ” ಕುರಿತು ಆಯೋಜಿಸಿದ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
 
 
ಮನುಷ್ಯನ ದೇಹದಲ್ಲಿ ಕಬ್ಬಿಣದ ಅಂಶದ ವ್ಯತ್ಯಯದಿಂದ ರಕ್ತಹೀನತೆ ಉಂಟಾಗುತ್ತದೆ. ಶೇ.74ರಷ್ಟು ಜನರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಕೇವಲ ಫಾಸ್ಟ್ ಫುಡ್ ಕಲ್ಚರ್ ನ ತಿನಿಸುಗಳಿಗಷ್ಟೇ ಆದ್ಯತೆ ನೀಡಿ ಪೋಷಕಾಂಶವಿರುವ ಆಹಾರ ಕ್ರಮದಿಂದ ದೂರವಾಗುವುದರಿಂದ ರಕ್ತಹೀನತೆಯ ಸಮಸ್ಯೆ ಉಲ್ಬಣಗೊಳ್ಳುತ್ತದೆ ಎಂದರು.
 
 
ರಕ್ತಹೀನತೆಯಿಂದಾಗಿ ತಲೆಕೂದಲು ಉದುರುತ್ತದೆ. ಅಲರ್ಜಿ ಸಂಬಂಧಿತ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ತಾಯಿಯಿಂದ ಮಗುವಿಗೆ ರಕ್ತಹೀನತೆಯ ನ್ಯೂನತೆ ದಾಟುವ ಸಾಧ್ಯತೆಗಳೂ ಇರುತ್ತವೆ ಎಂದು ತಿಳಿಸಿದರು.
 
 
ದಿನನಿತ್ಯದ ವ್ಯಾಯಾಮದಿಂದ ಆರೋಗ್ಯದ ಸಮತೋಲನವನ್ನು ಕಾಯ್ದುಕೊಳ್ಳಬಹುದು. ಅಲ್ಲದೇ, ರಕ್ತಹೀನತೆಯಂತಹ ಸಮಸ್ಯೆಗಳಿಂದಲೂ ವಿಮುಕ್ತರಾಗಬಹುದು ಎಂದು ಸಲಹೆ ನೀಡಿದರು.
 
 
ಕಾರ್ಯಕ್ರಮದಲ್ಲಿ ಎಸ್.ಡಿ.ಎಮ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ಎಸ್ ಮೋಹನ್ ನಾರಾಯಣ, ಪ್ರಸೂತಿ ತಜ್ಙೆ ಡಾ.ಸುವರ್ಣ ಲತಾ, ಎಟಿಆರ್ ಐಎಮ್ಇಡಿ ವ್ಯವಸ್ಥಾಪಕ ಡಾ.ಹೃಷಿಕೇಶ್, ಎಸ್ಡಿಎಮ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೆಶಕ ಮನ್ಮಥ್ಕುಮಾರ್, ಎಸ್ಡಿಎಮ್ನ ಲ್ಯಾಬ್ ಮೇಲ್ವಿಚಾರಕ ಎಸ್.ಎಸ್.ಭಟ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here