ವೈದ್ಯಕೀಯ ಪ್ರಕೋಷ್ಠದ ಸಭೆ

0
357

ಮಂಗಳೂರು ಪ್ರತಿನಿಧಿ ವರದಿ
ಭಾರತೀಯ ಜನತಾ ಪಾರ್ಟಿ ವೈದ್ಯಕೀಯ ಪ್ರಕೋಷ್ಠದ ಸಭೆಯು ರಾಜ್ಯ ಸಹಸಂಚಾಲಕರಾದ ಡಾ|ಅಣ್ಣಯ್ಯ ಕುಲಾಲ್ ನೇತೃತ್ವದಲ್ಲಿ ಜಿಲ್ಲಾ ಬಿಜೆಪಿ ಕಚೇರಿ, ಮಂಗಳೂರಿನಲ್ಲಿ ನಡೆಯಿತು. ಈ ಸಭೆಯಲ್ಲಿ ಡಾ|ರಾಘವೇಂದ್ರ ಭಟ್ ಇವರನ್ನು ವೈದ್ಯಕೀಯ ಪ್ರಕೋಷ್ಠದ ಜಿಲ್ಲಾ ಸಂಚಾಲಕರಾಗಿ ಹಾಗೂ ಡಾ|ಹರೀಶ್ ಶೆಟ್ಟಿ, ಡಾ|ಸುಕೇಶ್ ಶೆಟ್ಟಿ, ಡಾ|ನಿಶಾಂಕ್ ಎಸ್.ಶೆಟ್ಟಿಗಾರ್ ಸಹಸಂಚಾಲಕರನ್ನಾಗಿ ಭಾನುವಾರ ಆಯ್ಕೆ ಮಾಡಲಾಯಿತು.
 
ಈ ಕಾರ್ಯಕಮದಲ್ಲಿ ಡಾ. ರಮೇಶ್ ಭಟ್, ಡಾ.ಪ್ರವೀಣ್ ನಾಯಕ್, ಡಾ|ರಾಜೇಶ್ ಭಟ್, ಡಾ| ರಾಘವೇಂದ್ರ ಪ್ರಸಾದ್, ಡಾ|ಅನಂತ್ ಪ್ರಸಾದ್ ರಾವ್, ಡಾ|ಬಾಲಕೃಷ್ಣ ಕುಮಾರ್, ಡಾ|ಸತೀಶ್ ರಾವ್, ಪಕೋಷ್ಠದ ಪ್ರಭಾರಿ ಸಂಜಯ ಪ್ರಭು, ಮಾಜಿ ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ಬಾಲಕೃಷ್ಣ ಪಾಲನ್ ಹಾಗೂ ರತ್ನಾಕರ ಎಂ.ವಿ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here