ವೈಕುಂಠ ಏಕಾದಶಿ ಆಚರಣೆ, ಉಪವಾಸದ ಮಹತ್ವ:-

0
692

ಆಧ್ಯಾತ್ಮಿಕ ನಂಬಿಕೆಗಳ ಪ್ರಕಾರ ಈ ದಿನದಂದು ಉಪವಾಸವನ್ನು ಕೈಗೊಳ್ಳುವವರು ತಿಂಗಳಿನಲ್ಲಿ ಬರುವ 23 ಏಕಾದಶಿ ಉಪವಾಸವನ್ನು ಕೈಗೊಂಡಂತೆ ಎಂದಾಗಿದೆ. ಇಂದಿಲ್ಲಿ ಈ ದಿನದ ಮಹತ್ವವನ್ನು ನಾವು ತಿಳಿದುಕೊಳ್ಳಲಿದ್ದು ಏಕಾದಶಿ ಉಪವಾಸದ ವಿಶೇಷತೆಯನ್ನು ಅರಿತುಕೊಳ್ಳೋಣ…..
ಮಹತ್ವ ಪದ್ಮ ಪುರಾಣದಲ್ಲಿ ಏಕಾದಶಿಯ ಮಹತ್ವವನ್ನು ತಿಳಿಸಲಾಗಿದೆ. ಭಗವಾನ್ ವಿಷ್ಣುವು ಸ್ತ್ರೀ ಶಕ್ತಿ ಏಕಾದಶಿಯ ರೂಪವನ್ನು ಹೊಂದಿ ಈ ದಿನ ಮುರಾನ್ ಎಂಬ ಅಸುರನನ್ನು ವಧಿಸಿದ್ದರು ಎಂದು ಹೇಳಲಾಗಿದೆ. ಏಕಾದಶಿಯಿಂದ ಸಂಪ್ರೀತಗೊಂಡ ದೇವರು ಈ ದಿನ ಉಪವಾಸವನ್ನು ಕೈಗೊಳ್ಳುವವರು ಮರಣದ ನಂತರ ವೈಕುಂಠವನ್ನು ತಲುಪುತ್ತಾರೆ ಎಂದು ವರವನ್ನು ನೀಡುತ್ತಾರೆ
ವೈಕುಂಠದ ದ್ವಾರ ತೆರೆಯುವುದು ನಂಬಿಕೆಗಳ ಪ್ರಕಾರ, ಭಗವದ್ಗೀತೆಯನ್ನು ಓದುವವರು ಮತ್ತು ಅದನ್ನು ಪಾಲಿಸುವವರಿಗೆ ವೈಕುಂಠದ ದ್ವಾರ ತೆರೆಯುತ್ತದೆ. ಧ್ಯಾನ, ಭಕ್ತಿ ಮತ್ತು ಕರ್ಮದಲ್ಲಿ ತಮ್ಮನ್ನು ತೊಡಗಿಸಿಕೊಂಡವರಿಗೆ ವೈಕುಂಠದ ಬಾಗಿಲನ್ನು ತೆರೆಯುವುದು ಸುಲಭವಾಗಿದೆ. ವೈಕುಂಠ ಏಕಾದಶಿಯನ್ನು ನೀವು ಪೂರ್ಣ ನಿಷ್ಟೆಯಿಂದ ಪಾಲಿಸಿದಲ್ಲಿ, ವೈಕುಂಠದ ಬಾಗಿಲು ನಿಮಗೆ ತೆರೆಯುತ್ತದೆ ಎಂಬುದಾಗಿ ಹಿಂದೂ ನಂಬಿಕೆಗಳಲ್ಲಿದೆ.,

ಗಿರೀಶ್ ಮೈಸೂರು ..

LEAVE A REPLY

Please enter your comment!
Please enter your name here