‘ವೇಶ್ಯೆಯ ಮನೆಯಲ್ಲಿ ಜ್ಞಾನಿಯಾದವ.

0
2575

ರಾತ್ರಿ ಸುಮಾರು ಹತ್ತು ಗಂಟೆಯ ಸಮಯ , ನಗರದಿಂದ ಆಚೆಯ ಸಣ್ಣ ಬೀದಿಯೊಂದರ ಹಳೆಯ ಮನೆ ,ಸೂಟು ಧರಿಸಿದ ಕಟ್ಟುಮಸ್ತಾದ ವ್ಯಕ್ತಿಯೊಬ್ಬ ದುಬಾರಿ ಕಾರಿನಿಂದಿಳಿದು ಸುತ್ತಮುತ್ತ ತಿರುಗಿ ಜೇಬಿನಿಂದ ಸಿಗರೇಟ್ ಒಂದನ್ನು ತೆಗೆದು ಹಚ್ಚಿ ನಿಧಾನವಾಗಿ ಹೊಗೆಯನ್ನು ಬಿಟ್ಟು ಮನೆಯೊಳಗೆ ನಡೆದ , ಕಿರ್ ಎಂದು ಬಾಗಿಲು ಮಾಡಿದ ಸದ್ದಿಗೆ ಸ್ನಾನದ ಮನೆಯಿಂದ ಮಧುರ ಧ್ವನಿಯ ಪ್ರತ್ಯುತ್ತರ , ಐದು ನಿಮಿಷ ಇರಿ ಬರುತ್ತೇನೆ ,ಇನ್ನೇನು ಸ್ನಾನ ಮುಗೀತು. ಇವಳ್ಯಾರಪ್ಪ ರಾತ್ರಿ 10 ಗಂಟೇಲಿ ಸ್ನಾನ ಮಾಡ್ತಿದ್ದಾಳೆ ಅಂದು ಕೊಂಡು ಕೂತ ಆತ .ಸ್ನಾನ ಮುಗಿಸಿ ಸಂಪೂರ್ಣ ಸಿದ್ಧಳಾಗಿ ಬಂದಳಾಕೆ.ಏನು ಈ ವೇಳೆಯಲ್ಲಿ ಸ್ನಾನ , ಎಂಬ ಅವನ ಪ್ರಶ್ನೆಗೆ ಆಕೆಯಿಂದ ನೇರವಾದ ಉತ್ತರ ಬಂತು ,ಸ್ವಲ್ಪ ಹೊತ್ತಿಗೆ ಮುಂಚೆ ಒಬ್ಬ ಹೊರಟ ಇಲ್ಲಿಂದ ಅದೇ ಅವಸ್ಥೆನಲ್ಲಿದ್ರೆ ನೀನೀಗ ಪಕ್ಕದಲ್ಲಿ ಕೂತ್ಕೋತಿದ್ಯ .ಅವಳ ಆ ಉತ್ತರಕ್ಕೆ ಅರೆಕ್ಷಣ ದಂಗಾಗಿದ್ದ ಅವನು.ಅಷ್ಟರಲ್ಲಿ ಎರಡು ಗಾಜಿನ ಲೋಟಗಳಲ್ಲಿ ಎರಡೆರಡು ಐಸ್ಕ್ಯೂಬ್ ಸೇರಿಸಿ ವಿಸ್ಕಿ ತಂದಿಟ್ಟಳವಳು.ಆಫೀಸಿನಿಂದ ನೇರವಾಗಿಯೇ ಅವಳಲ್ಲಿಗೆ ದಣಿದು ಬಂದಿದ್ದವನು ಥಟ್ಟನೆ ಕುಡಿಯಲಾರಂಭಿಸಿದ.ಅವಳು ಸಹ ಒಂದೊಂದೇ ಗುಟುಕು ಕುಡಿಯತೊಡಗಿದಳು.ನಾವೇನೋ ನಮ್ಮದೇ ತಲೆನೋವಿನಲ್ಲಿ ಕೆಲಸಗಳಲ್ಲಿ ತಲೆಕೆಟ್ಟು ಕುಡಿತೀವಿ, ನಿಂಗೇನ್ ಚಟನಾ ಇದು ಎಂದ ಆತ ಕುಹುಕದಿಂದ, ಅದಕ್ಕವಳು ನಿಂಗೆ ಬರೀತಲೆಗೆ ಕೆಲ್ಸ , ನಂಗೆ ಇಡೀ ದೇಹಕ್ಕೇ ಕೆಲ್ಸ .ನಿನ್ ತಲೆನೋವಿಗಿಂತ ನನ್ನ ದೇಹದ ಹಾಗೂ ಮನಸಿನ ನೋವು ತುಂಬಾ ದೊಡ್ಡದು , ಅದು ಕಡಿಮೆ ಆಗೋದಿಲ್ಲ ಆದ್ರೆ ಏನೋ ಸಮಾಧಾನಕ್ಕೆ ,ಕ್ಷಣಿಕ ನಿರಾಳಕ್ಕೆ ಕುಡಿತೀನಿ.ಇದೆಲ್ಲ ನಿಮ್ಗೆಲ್ಲಿ ಅರ್ಥ ಆಗತ್ತೆ .ಬಂದ್ನ ಕೆಲ್ಸ ಮುಗ್ಸುದ್ನ ಅಂತ ಹೋಗ್ತಾ ಇರ್ತೀರ.ಮತ್ತೆ ನಮ್ಮನ್ನ ನೋಡೋದು ಇನ್ನೊಂದ್ಸಲ ಇಲ್ಲಿಗೆ ಬಂದಾಗಲೇ . ಅಲ್ಲಿವರೆಗೂ ಸತ್ತಿದಿವ ಬದ್ಕಿದಿವ ಅಂತ ಯಾರೂ ಯೋಚ್ಸಲ್ಲ.ನಮ್ಮ ಹಿಂಸೆ , ಗೋಳು ,ಯಾತನೆ ಯಾರ್ ಕೇಳ್ತಾರೆ , ನಿಮ್ಗೆ ಬೇಕಾಗಿರೋದು ಮಾಂಸ ತುಂಬಿರೋ ಈ ಹಸಿಯಾದ ದೇಹ ಅಷ್ಟೇ ತಾನೇ , ಕೇಳ್ಬಿಟ್ಟ ದೊಡ್ಡದಾಗಿ ಚಟನಾ ಅಂತ ಎಂದು ಒಂದೇ ಉಸಿರಿಗೆ ಉಸುರಿದಳವಳು.

ಅಯ್ಯೋ ಇದೊಳ್ಳೆ ಚೆನ್ನಾಗಿ ಹೇಳ್ದ್ಯಲ್ಲ ದುಡ್ಡುಕೊಡಲ್ವ ಹಾಗೆ ಏನ್ ಮಲ್ಕೊತಿರ ಅಂತ ಅವನು ತೀಕ್ಷ್ಣವಾಗಿಯೇ ಅಂದ.ನೀನು ದುಡ್ಡು ಕೊಡೋದು ನಿನ್ನ ಕಾಮನೆಗಳನ್ನ ತೀರಿಸ್ಕೊಳೋಕೆ , ನೀನ್ ಅನುಭವಿಸೋ ನನ್ನ ದೇಹಕ್ಕೆ ಅಷ್ಟೇ , ಹೆಣ್ಣು ಮನಃಪೂರ್ತಿಯಾಗಿ ಒಪ್ಪಿ ಸಹಕರಿಸಿದಾಗ ಮಾತ್ರ ನಿಜವಾದ ಸಮ್ಮಿಲನ ಆಗೋದು .ಇದು ಹೊಟ್ಟೆಪಾಡಿಗೆ ಮಾಡ್ತಿರೋ ಮಾಂಸದ ಧಂದೆ ಅಷ್ಟೇ , ಮನಸ್ಸಿನಿಂದಲ್ಲ .ಇದು ನಂಗೆ ಅನಿವಾರ್ಯ , ನಿನ್ನಂಥ ಗಂಡಸರಿಗೆ ಕಾಮದಾಟ.ನಮ್ ಕಷ್ಟ ನಿಮ್ಮಂಥಹವರಿಗೆ ಎಲ್ ಅರ್ಥ ಆಗತ್ತೆ.
ಅದಕ್ಕೆ ಆತ , ಏನು ,ಏನ್ ಕಷ್ಟ ನಿಮ್ಗೆ 10 ನಿಮಿಷದ್ ಸುಖಕ್ಕೆ ಸಾವಿರಾರು ರೂಪಾಯಿ ಸುರ್ಯೋರ್ ನಾವು , ನಿಮ್ಗೇನ್ ಕಷ್ಟ ದುಡ್ಡಿಗೆ ದುಡ್ಡು ಸುಖಕ್ಕೆ ಸುಖ ಡಬ್ಬಲ್ ಧಮಕಾ ನಿಮ್ಗೆ ಕಷ್ಟ ಅಂತೆ .
ಅದಕ್ಕವಳು ವ್ಯಂಗ್ಯವಾಗಿಯೇ ನಗುತ್ತ ಹುಸಿಕೋಪದಿಂದಲೇ ಉತ್ತರಿಸಿದಳು , ಸುಖ ಅಂತೆ ಸುಖ , ಸುಖ ನಿಮ್ಗೆ ಅಷ್ಟೇ ಹೊಟ್ಟೆಪಾಡು ಈ ಕೆಲ್ಸ ನಿಯತಿಂದ ಮಾಡ್ತೀನಿ , ಇನ್ನು ದುಡ್ಡು ರಾತ್ರಿ ಪೂರ್ತಿ ನಿಮ್ಗಳ ಹೆಂಡ್ತಿರ್ಗಿಂತ ಹೆಚ್ಚಾಗಿ ಅನುಭವಿಸ್ತೀರಲ್ಲ ಇಷ್ಟ ಬಂದಹಾಗೆ ಅದಕ್ಕಾಯ್ತು ನಿನ್ ದುಡ್ಡು , ನಿನ್ ಕೊಡೊ ಬೆಲೆ ದೇಹಕ್ಕೆ ಮನಸಿಗಲ್ಲ .ಒಂದು ರಾತ್ರಿ , ಕೆಲವು ಸಾವಿರಗಳು ಅನ್ನೋದಷ್ಟೇ ನಿಮ್ಗೆ ಕಾಣೋದು , ಹೆಣ್ಣಿನ ಮನಸ್ಸಿನ ಸೂಕ್ಷ್ಮಮತೆಗಳು , ಅವಳ ಅಂತರಾಳ , ಅವಳ ಭಾವನೆ , ಮಾನಸಿಕ ತುಮುಲಗಳು , ಸಂವೇದನೆಯ ತುಡಿತಗಳು , ಆಸೆ , ಕನಸು , ನೋವು ಅದ್ರ ಜೊತೆಗೆ ತಿಂಗಳ ಕೊನೆಯಲ್ಲಿ ಅನುಭವಿಸೋ ಯಾತನೆ ಯಾರ್ ಕೇಳ್ತಾರೆ ಇಲ್ಲಿಗ್ ಬರೋರು.ಎಲ್ಲ ತಿಳ್ಕೊಂಡಿರೋ ಬುದ್ದಿವಂತರೆ , ವಿದ್ಯಾವಂತರೆ ತಪ್ಪು ಹಾದಿ ತುಳಿದು , ಹೆಣ್ಣಿನ ಮೇಲೆ ದೌರ್ಜನ್ಯ ಮಾಡ್ತಿದಾರೆ ,ಇನ್ನು ಕಾಮದ ದಾಸರಾದವರ್ಗೆ ಎಲ್ ಅರ್ಥ ಆಗತ್ತೆ.
ವೇಶ್ಯೆ ಮಗಳು ಅಂತ ನನ್ನು ಅದೇ ರೀತಿ ನೋಡುದ್ರೆ ಹೊರತು , ನನ್ನ ಅವರಲ್ಲಿ ಒಬ್ಬಳು ಅನ್ಕೊಂಡಿದ್ರೆ ನಾನು ಈ ಕೆಲ್ಸ ಮಾಡ್ತಿರ್ಲಿಲ್ಲ .ಅಲ್ಪ ಸ್ವಲ್ಪ ಓದಿದ್ದ ನಾನು ಕೆಲಸಕ್ಕೆ ಸೇರುದ್ರೇ ಅಲ್ಲೂ ಇದೆ . ಆಫೀಸ್ ಕೆಲ್ಸ ಅಲ್ಲ ಅಂತ ಅವ್ನು ಕರ್ದಾಗೆಲ್ಲ ಮಂಚ ಹತ್ಬೇಕು , ದುಡಿಲ್ದೆ ಆತರ ಮಾಡೋಕಿಂತ ಅದನ್ನೇ ವೃತ್ತಿ ಮಾಡ್ಕೊಂಡೆ ಹೊಟ್ಟೆಗೆ ಅನ್ನ ಹುಡ್ಕೊಂಡೆ.ನಾನೇನೋ ಇದೆ ಕೆಲ್ಸ ಮಾಡೋಳು ಮಿಕ್ಕ ಎಲ್ಲ ಹೆಣ್ಮಕಳನ್ನ ಯಾಕ್ರೋ ಅದೇ ರೀತಿ ನೋಡ್ತೀರ . ಹೆಣ್ಣು ನಿಮ್ ಆಟದ ವಸ್ತುನಾ. ನನ್ನ ದೇಹ ನಿಮ್ಗಳ ಮುಂದೆ ನಗ್ನ ,ಆದ್ರೆ ನಿಮ್ಗಳ ಮನಸ್ಸು ,ಆಲೋಚನೆ ಎಲ್ಲ ನಗ್ನ .ನೋಡೋ ಪ್ರತಿ ನೋಟದಲ್ಲೂ ನಗ್ನತೆ ಬಯಸೋದನ್ನ ಬಿಟ್ಟು ಒಳ್ಳೆ ದೃಷ್ಟಿಯಿಂದ ಹೆಣ್ಣನ್ನ ನೋಡಿ ಗೌವರವಿಸಿ . ಎಲ್ಲ ಹೆಣ್ಣಿನ ತರಹ ನಂಗೂ ಒಳ್ಳೆ ಬದುಕು ಕಟ್ಟಿಕೊಳ್ಳೋ ಆಸೆ , ಮನೆ ಮಕ್ಳು ಎವೆಲ್ಲವನ್ನ ಸವಿಯೋ ಬಯಕೆ ಆದ್ರೆ ನನಗಂತೂ ಆ ಭಾಗ್ಯ ಇಲ್ಲ. ಎಂದು ಬೇಸರದ ನಿಟ್ಟುಸಿರು ಬಿಟ್ಟಳು.ಇಷ್ಟೆಲ್ಲ ಕೇಳಿದವನು ಒಂದೂ ಮಾತನಾಡದೆ ದೀಪವನ್ನು ಆರಸಿ ಮಂಚದ ಮೇಲುರುಳಿದ.ಮನಸ್ಸಿನ್ನಲ್ಲಿದ್ದ ಭಾರ ಸ್ವಲ್ಪ ಹಗುರಾದಂತಾಗಿತ್ತು ಅವಳಿಗೆ .ವೃತ್ತಿ ನಿಷ್ಠೆಯಂತೆ ಅಣಿಯಾಗಿ ಅವನ ತೋಳತೆಕ್ಕೆಗೆ ಉರುಳಿದಳು.ಮರುದಿನ ಸ್ವಲ್ಪ ತಡವಾಗಿ ಎದ್ದವಳಿಗೆ ಟೇಬಲ್ ನ ಮೇಲೆ ದುಡ್ಡಿನ ಜೊತೆ ಒಂದು ಪತ್ರ ಕಂಡಿತು. ಪಕ್ಕದಲ್ಲಿ ಅವನಿರಲಿಲ್ಲ .
ಪತ್ರದಲ್ಲಿ ಹೀಗಿತ್ತು , ಇಂದಿಗೆ ನಿನ್ನ ಈ ವೃತ್ತಿಜೀವನಕ್ಕೆ ತೆರೆಯೆಳೆದು ಬಿಡು. ಇಂದು ನಿನ್ನ ಮನಸ್ಸಿಲ್ಲದ ಮಾಂಸದ ವ್ಯಾಪಾರಕ್ಕೆ ಕೊನೆ.ನನ್ನ ಕೆಂಪನಿಯಲ್ಲಿ ನಿನ್ನ ಅರ್ಹತೆಗೆ ತಕ್ಕ ಕೆಲ್ಸ ಸಿದ್ದವಿದೆ.ಬೇರೆಯ ಕಡೆ ನೀನು ಹೇಳಿದ ಹಾಗೆ ದುಡ್ಡಿಲ್ಲದೆ ನಿನ್ನ ಮೇಲಿನ ಹುದ್ದೆಯವನ ಜೊತೆ ದೇಹಸವೆಸುವುದಲ್ಲ.ನಿನ್ನ ನೇರ ಹಾಗೂ ಮುಕ್ತಮಾತುಗಳು ನನ್ನನ್ನು ಚಕಿತಗೊಳಿಸಿದವು ಹಾಗಾಗಿ ನನ್ನ ಆಪ್ತ ಸಲಹೆಗಾರ್ತಿಯಾಗಿ , ಒಳ್ಳೆಯತನದಿಂದ
ಪ್ರಾಮಾಣಿಕವಾಗಿ ಸಲಹೆಗಳನ್ನು ನೀಡುತ್ತಾ , ನಿಷ್ಠೆಯಿಂದ ಕೆಲಸ ಮಾಡುತ್ತ ನಿನ್ನ ಮುಂದಿನ ಜೀವನವನ್ನು ನೀನು ಯೋಚಿಸಿದಂತೆ ಕಟ್ಟಿಕೊಂಡು ಬಾಳು.ಜೊತೆಗೆ ಒಂದು ಕೋರಿಕೆ ನೆನ್ನೆ ರಾತ್ರಿಯನ್ನು ಮರೆತು ಬಿಡು ಅದು ನನ್ನ ನಿನ್ನ ದೇಹಸಂಪರ್ಕದ ಕೊನೆ.ಇಂದಿನಿಂದ ಮಾನಸಿಕವಾಗಿ ನಿನ್ನೊಡನೆ ಸದಾ ಒಳ್ಳೆಯಗೆಳೆಯನಾಗಿ ನಿನ್ನೊಂದಿಗಿರುವೆ.
‘ಇಂತಿ’
ವೇಶ್ಯೆಯ ಮನೆಯಲ್ಲಿ ಜ್ಞಾನಿಯಾದವ.

ಅವಳ ಕಣ್ಣಂಚಿನಲ್ಲಿ ನೀರು ತುಂಬಿತ್ತು , ಜೀವನದಲ್ಲಿ ಮೊದಲವ್ಯಕ್ತಿ ತಾನು ಹೇಳಿದ ತನ್ನ ನೋವಿನ ಪಯಣವನ್ನು ಇಷ್ಟು ಗಂಭೀರವಾಗಿ ತೆಗೆದುಕೊಂಡು ಭರವಸೆಯ ದಾರಿ ಕಾಣಿಸಲು ಹೊರಟ್ಟಿದಾನೆ.ಕಣ್ಣಚಿನಲ್ಲಿ ನೀರು ಜಿನುಗುತ್ತಿದ್ದರೂ ಇನ್ನಾದರೂ ಒಳ್ಳೆಯ ಬದುಕು ಕಟ್ಟಿಕೊಳ್ಳಬಲ್ಲೆ ಎಂಬ ಮುಗುಳುನಗೆ ತುಟಿಯಂಚಿನಲ್ಲಿ ಮೂಡಿತ್ತು.ಕೊನೆಗೆ ಅವಳ ಮನದಿ ಉಳಿದ ದ್ವಂದ್ವ ಭಾವವೆಂದರೆ ರಾತ್ರಿ ಅಷ್ಟೆಲ್ಲ ನಾನು ಹೇಳಿದ ಮೇಲೆಯೂ ಏನು ಕೇಳದವನಂತೆ ತನ್ನನ್ನು ಅನುಭವಿಸಿದವನು ಈಗ ಈ ರೀತಿ ಪತ್ರ ಬರೆದು ಹೋಗಿರುವುದು , ಅವನು ಒಳ್ಳೆಯವನೋ ಅಥವಾ ಅವಳಲ್ಲಿಗೆ ಬರುವ ಇತರೆ ಗಂಡಸರಂತೆಯೋ ಎಂದು ಯೋಚಿಸುತ್ತ ಮತ್ತೆ ನಿದ್ರೆಗೆ ಜಾರಿದಳು .ಇಂದು ಅವಳು ಬಯಸಿದ ಬದುಕು ಅವಳದ್ದಾಗಿದೆ. ಬದುಕು ಆ ಸಿರಿವಂತನಿಗೆ ವೇಶ್ಯಯಮನೆಯಲ್ಲಿ ಜ್ಞಾನೋದಯ ಮಾಡಿಸಿತು .ಮಿಕ್ಕೆಲ್ಲ ಸ್ತ್ರೀ ಮೋಹಿಗಳು , ಇದನ್ನು ಬೇಗ ಅರಿತರೆ ಒಳ್ಳೆಯದು , ಹೆಣ್ಣಿಗೆ ಸ್ಥಾನಮಾನ , ಗೌರವಕೊಟ್ಟು ಕಾಯುವವನು ಗಂಡಸೇ ಹೊರತು ಬರಿ ಕಮದಾಹದಿಂದ ನೋಡುವವನ್ನಲ್ಲ.ಇನ್ನಾದರೂ ಬದಲಾಗಿ.

ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೇ ದೇವತಾ:|
ಯತ್ರೈತಾಸ್ತು ನ ಪೂಜ್ಯಂತೆ ಸರ್ವಾಸ್ತತ್ರಾಫಲಾ: ಕ್ರಿಯಾ: ||

ತಾತ್ಪರ್ಯ :- ಎಲ್ಲಿ ಸ್ತ್ರೀಯರು ಗೌರವಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ಸಂತುಷ್ಟರಾಗಿ ನೆಲೆಸಿರುತ್ತಾರೆ . ಸ್ತ್ರೀಯರನ್ನೆಲ್ಲಿ ಅವಮಾನಗೊಳಿಸಲಾಗುತ್ತದೋ ಅಲ್ಲಿ ಮಾಡಿದ ಕಾರ್ಯಗಳೆಲ್ಲವೂ ವ್ಯರ್ಥವಾಗಿ ಯಾವ ಫಲವೂ ದೊರೆಯುವುದಿಲ್ಲ.

:- ನಿತಿನ್ ರಾಮ ಚಂದ್ರ ಭಾರದ್ವಾಜ
ಸೊಂಡೇಕೊಪ್ಪ

LEAVE A REPLY

Please enter your comment!
Please enter your name here