ವೇದಿಕೆ ಮತ್ತು ಸಭೆಯ ವಿನ್ಯಾಸ

0
217

 
ಕಾರ್ಯಕ್ರಮ ಸಂಘಟನೆ: ಮುಂದುವರಿದ ಭಾಗ
ಶಿಕ್ಷಣ ಚಿಂತನೆ: ಅರವಿಂದ ಚೊಕ್ಕಾಡಿ
ವೇದಿಕೆ ಮತ್ತು ಸಭೆಯ ವಿನ್ಯಾಸಗಳು ಕಾರ್ಯಕ್ರಮದ ಮೇಲೆ ಸಾಕಷ್ಟು ಪರಿಣಾಮವನ್ನು ಬೀರುತ್ತವೆ. ಇದು ಹೇಗಿರಬೇಕೆಂದು ನೋಡೋಣ:

 • ವೇದಿಕೆಯ ಮೇಲಿರುವವರಿಗೆ ಸಭೆಯು ಸ್ಪಷ್ಟವಾಗಿ ಕಾಣುವ ಅಂತರದಲ್ಲಿ ವೇದಿಕೆಯಲ್ಲಿ ಆಸನದ ವ್ಯವಸ್ಥೆಯನ್ನು ಮಾಡಬೇಕು.
 • ವೇದಿಕೆಯ ಮೇಲೆ ಬಹಳ ಮಂದಿ ಅತಿಥಿಗಳು ಇರುವಾಗ ಆಯಾ ಆಸನದಲ್ಲಿ ಅವರವರ ಹೆಸರುಗಳನ್ನು ಬರೆದ ಚೀಟಿಯನ್ನು ಆಸನವು ಡ್ಯಾಮೇಜ್ ಆಗದಂತೆ ಹಚ್ಚಬೇಕು ಅಥವಾ ಮುಂಭಾಗದಲ್ಲಿ ಇರಿಸಬೇಕು.
 • ವೇದಿಕೆಯನ್ನು ಸ್ವಚ್ಛವಾಗಿಯೂ ಅಚ್ಚಕಟ್ಟಾಗಿಯೂ ಇಡಬೇಕು. ಕಾರ್ಯಕ್ರಮದ ಗಾಂಭಿರ್ಯವು ಕೆಡದಂತೆ ಅಲಂಕಾರವನ್ನು ಮಾಡಬಹುದು.
 • ಮೈಕ್ ಸೆಟ್ಟಿಂಗ್ ನ ವಿಷಯದಲ್ಲಿ ಬಹಳಷ್ಟು ವೇದಿಕೆಗಳು ಅಸಮರ್ಪಕ ವಿನ್ಯಾಸವನ್ನು ಹೊಂದಿರುತ್ತವೆ. ಬಹುತೇಕ ಕಾರ್ಯಕ್ರಮಗಳಲ್ಲಿ ಸೌಂಡ್ ಬಾಕ್ಸ್ ಗಳು ಸಭೆಯ ಕಡೆಗೆ ಮುಖ ಮಾಡಿರುತ್ತವೆ. ಆಗ ವೇದಿಕೆಯಲ್ಲಿದ್ದವರಿಗೆ ಕೇಳಿಸುವುದು ಸಭೆಯ ಕಡೆಗೆ ಹೋದ ಧ್ವನಿ ಪ್ರತಿಧ್ವನಿಯಾಗಿ ಬಂದದ್ದು ಮಾತ್ರ. ಆಗ ಮಾತುಗಳು ಸ್ಪಷ್ಟವಾಗುವುದಿಲ್ಲ. ಆದ್ದರಿಂದ ಮೈಕ್ ಸೆಟ್ಟಿಂಗ್ ಮಾಡುವಾಗ ಒಂದು ಸೌಂಡ್ ಬಾಕ್ಸನ್ನು ವೇದಿಕೆಯ ಒಳಭಾಗಕ್ಕೆ ಮುಖ ಮಾಡಿ ಇರಿಸಬೇಕು.
  ಬೇದಿಕೆಯ ಮೇಲಿರುವ ಅತಿಥಿಗಳಿಗೆ ಕುಡಿಯುವ ನೀರನ್ನು ಇರಿಸಿರಬೇಕು.
 • ಪ್ರತಿಯೊಬ್ಬ ಅತಿಥಿಗೂ ಆತನ ಎದುರಿಗೆ ಒಂದೊಂದು ಆಮಂತ್ರಣ ಪತ್ರಿಕೆ ಮತ್ತು ಕಾರ್ಯಕ್ರಮ ಪಟ್ಟಿಯನ್ನು ಇರಿಸಬೇಕು.
 • ಇದಿಷ್ಟು ವೇದಿಕೆಯ ವಿನ್ಯಾಸದ ವಿಚಾರವಾಯಿತು. ಸಭೆಯ ವಿನ್ಯಾಸದ ವಿಚಾರಕ್ಕೆ ಬಂದರೆ ಕಾರ್ಯಕ್ರಮದ ಸ್ವರೂಪ, ಪಾಲ್ಗೊಳ್ಳುವ ಸಭಾಸದರು, ಪಾಲ್ಗೊಳ್ಳುವ ಅತಿಥಿಗಳು ಮುಂತಾದ ಹಿನ್ನೆಲೆಗಳಲ್ಲಿ ಬೇರೆ ಬೇರೆ ವಿನ್ಯಾಸಗಳಿರುತ್ತದೆ. ಉದಾಹರಣೆಗೆ ಒಬ್ಬ ವ್ಯಕ್ತಿ 25-50 ಮಂದಿಯೊಂದಿಗೆ ಸಂವಾದವನ್ನು ನಡೆಸುವುದಾದರೆ ಅರ್ಧಚಂದ್ರಾಕೃತಿಯ ಆಸನ ವಿನ್ಯಾಸವು ಸೂಕ್ತವಾಗಿರುತ್ತದೆ. ಹೀಗೆ ಬೇರೆ ಬೇರೆ ಕಾರ್ಯಕ್ರಮಗಳಿಗೆ ಬೇರೆ ಬೇರೆ ರೀತಿಯ ಆಸನ ವಿನ್ಯಾಸವನ್ನು ಮಾಡಬಹುದು.  ಆದರೆ ಅದೆಲ್ಲವನ್ನೂ ಸಾಮಾನ್ಯೀಕರಿಸಿ ಹೇಳಬಹುದಾದ ಸಂಗತಿಗಳೇನೆಂದರೆ:
 • ಸೂಕ್ತ ಆಸನ ವ್ಯವಸ್ಥೆ ಇರಬೇಕು.
 • ಚಲಿಸಲು ಅನುಕೂಲವಾಗುವಂತೆ ಆಸನಗಳ ಸಾಲಿನ ನಡುವೆ ಅಂತರವಿರಬೇಕು.
 • ಯಾರು ವೇದಿಕೆಗೆ ಬರುವವರು ಇರುತ್ತಾರೋ ಅವರನ್ನು ಸಭೆಯಯ ಮುಂಭಾಗದ ಆಸನದಲ್ಲಿ ಕೂರಿಸಬೇಕು.
 • ಮಾಧ್ಯಮ ಪ್ರತಿನಿಧಿಗಳಿಗೆ ಕಾರ್ಯಕ್ರಮದ ಸೂಕ್ಷ್ಮಗಳು ಹೆಚ್ಚು ಹತ್ತಿರದಿಂದ ಕಾಣುವುದು ಅಪೇಕ್ಷಣೀಯವಾಗಿರುವುದರಿಂದ ವೇದಿಕೆಗೆ ಹತ್ತಿರವಾಗುವಂತೆ ಅವರಿಗೆ ಸಭೆಯಲ್ಲಿ ಪ್ರತ್ಯೇಕ ಆಸನ ವ್ಯವಸ್ಥೆಯನ್ನು ಮಾಡಬೇಕು.
 • ವಾಹನದ ಕರ್ಕಶ ಶಬ್ದಗಳು-ಗಲಾಟೆ-ಗದ್ದಲಗಳೆಲ್ಲ ಇರುವ ಪ್ರದೇಶದಲ್ಲಿ ಸಭೆಯಲ್ಲಿ ಸಂಘಟಿಸಬಾರದು.
 • ಸಭೆಯ ಗಾಂಭೀರ್ಯಕ್ಕೆ ತೊಂದರೆಯಾಗದಂತೆ ಸಭೆಯ ಅಲಂಕಾರವನ್ನು ಮಾಡಬಹುದು.
 • ಸಭೆಯಲ್ಲಿರುವವರಿಗೆ ಸುಲಭವಾಗಿ ಸಿಗುವಂತೆ ಕುಡಿಯುವ ನೀರು ಸಿಗಬೇಕು. ಸ್ವಲ್ಪ ದೂರದಲ್ಲಿ ಶೌಚಾಲಯ ಇರಬೇಕು.

 
ಅರವಿಂದ ಚೊಕ್ಕಾಡಿ
[email protected]

LEAVE A REPLY

Please enter your comment!
Please enter your name here