ವೃತ್ತಿ ಮಾರ್ಗದರ್ಶನ

0
409

ಶಿಕ್ಷಣ ಚಿಂತನೆ: ಅರವಿಂದ ಚೊಕ್ಕಾಡಿ
ಹದಿಹರೆಯದವರಿಗೆ ವೃತ್ತಿ ಮಾರ್ಗದರ್ಶನದ ಅಗತ್ಯವಿರುತ್ತದೆ. ವೃತ್ತಿ ಮಾರ್ಗದರ್ಶನವೆಂದರೆ ಕೇವಲ ಮಾಹಿತಿಯಿಲ್ಲ. ವಿದ್ಯಾರ್ಥಿಗಳ ಆಸಕ್ತಿಗನುಗುಣವಾಗಿ ವೃತ್ತಿಯನ್ನು ಗಳಿಸಿಕೊಳ್ಳುವ ಸಾಮರ್ಥ್ಯವನ್ನು ಅಭಿವೃದ್ಧಿ ಪಡಿಸಿಕೊಳ್ಳುವುದೂ ಆಗಿರುತ್ತದೆ. ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ನಡೆಸುವ ವೃತ್ತಿಯ ಚಿಂತನೆಗಳಿಗೆ ಸೂಕ್ತ ಸಲಹೆಯನ್ನು ಪಡೆಯಬೇಕು. ವೃತ್ತಿ ಮಾರ್ಗದರ್ಶಿ ಸಾಹಿತ್ಯವನ್ನು ಓದಬೇಕು.
 
 
ಬಹುಮುಖಿ ಚಿಂತನೆ
ಒಂದೇ ವಿಚಾರವನ್ನು ಬೇರೆ ಬೇರೆ ರೀತಿಯಲ್ಲಿ ಯೋಚಿಸಬೇಕು. ಒಂದೇ ವಿಚಾರಕ್ಕಿಂತ ಬೇರೆ ಬೇರೆ ಸಾಧ್ಯತೆಗಳ ಬಗ್ಗೆ ಚಿಂತಿಸಬೇಕು. ಆದರಿಂದ ಸಹನಶೀಲತೆಯ ಶಕ್ತಿ ಜಾಸ್ತಿಯಾಗುತ್ತದೆ.
 
 
ತಂಡ ಮನೋಭಾವನೆಯ ಉತ್ತಮೀಕರಣ
ವ್ಯಕ್ತಿಗತವಾಗಿ ಎಲ್ಲರೂ ಒಳ್ಳೆಯವರೇ. ಆದರೆ ಒಂದು ಗುಂಪಿನಲ್ಲಿ ಸೇರಿ ಹೋದಾಗ ತಂಡ ಮನೋಭಾವನೆಯು ವ್ಯಕ್ತಿಯನ್ನು ತಪ್ಪು ನಡವಳಿಕೆಗೆ ಇಳಿಸಿಬಿಡುತ್ತದೆ. ಇದಕ್ಕಿರುವ ಒಳ್ಳೆಯ ದಾರಿಯೆಂದರೆ ಇಡೀ ತಂಡವನ್ನೇ ಸದುದ್ದೇಶದ ತಂಡವಾಗಿ ರೂಪಿಸಿವುದು. ಶಾಲೆಗಳಲ್ಲಿ ವಿವಿಧ ಸಂಘಗಳನ್ನು ಮಾಡಿಕೊಂಡು ಒಳ್ಳೆಯ ಚಟುವಟಿಕೆಗಳನ್ನು ನಡೆಸುವುದರಿಂದ ತಂಡ ಮನೋಭಾವನೆಯು ಉತ್ತಮಗೊಳ್ಳಲು ಸಹಾಯವಾಗುತ್ತದೆ.
 
 
ನಮ್ಮನ್ನು ನಾವು ಸ್ವೀಕರಿಸಿಕೊಳ್ಳುವುದು
ನಮ್ಮಲ್ಲಿ ಸಮಸ್ಯೆ, ಇಲ್ಲದಿರಲಿ ಹದಿಹರೆಯದಲ್ಲಿ ನಾನೇಕೋ ಸರಿಯಾಗಿಲ್ಲ, ನನ್ನಲ್ಲೇನೋ ಸರಿಯಲ್ಲ, ಎಂದೆನಿಸಿ ನಮ್ಮನ್ನು ನಾವೇ ನಿರಾಕರಿಸುವ ಪ್ರವೃತ್ತಿ ಇರುತ್ತದೆ. ಈ ಪ್ರವೃತ್ತಿಯನ್ನು ಕೈಬಿಡಬೇಕು. ನಮ್ಮಲ್ಲಿಯೂ ಕೆಲವು ದೋಷಗಳು ಇರಬಹುದು. ಪ್ರತಿಯೊಬ್ಬ ಮನುಷ್ಯರಲ್ಲಿಯೂ ಕೆಲಚು ದೋಷಗಳು ಇರುತ್ತದೆ. ಅದು ಮಾನವ ಸಹಜ ಸ್ಥಿತಿ ಎಂದು ಭಾವಿಸಿ ನಾವು ಯಾವ ರೀತಿಯಲ್ಲೇ ಇದ್ದರೂ ನಮ್ಮನ್ನು ನಾವು ಸ್ವೀಕರಿಸಿಕೊಳ್ಳಬೇಕು. ಆಮೇಲೆ ನಮ್ಮಲ್ಲಿರುವ ಸಾಮರ್ಥ್ಯಗಳ ಸಹಾಯದಿಂದ ನಮ್ಮಲ್ಲಿನ ದೋಷಗಳನ್ನು ಪರಿಹರಿಸಿಕೊಳ್ಳಲು ತೊಡಗಬೇಕು.
 
 
ಉತ್ತಮ ಹವ್ಯಾಸಗಳನ್ನು ಬೆಳೆಯಿಸಿಕೊಳ್ಳುವುದು
ಮಾನಸಿಕ ಒತ್ತಡಗಳನ್ನು ಸೃಜನಶೀಲವಾದ ಕಾರ್ಯಗಳಿಗೆ ಪ್ರೇರಣೆಗಳನ್ನಾಗಿ ಬಳಸಿಕೊಳ್ಳುವುದನ್ನು ಕಲಿಯಬೇಕು. ಸೃಜನಶೀಲ ಚಟುವಟಿಕೆಗಳು, ಕಲೆ, ನಾಟಕ, ಸಂಗೀತ, ಕ್ರೀಡೆ, ಸಾಹಿತ್ಯ ಮುಂತಾದ ಉತ್ತಮ ಹವ್ಯಾಸಗಳಲ್ಲಿ ಯಾವುದಾದರೂ ಕೆಲವನ್ನು ನಮ್ಮ ಹವ್ಯಾಸಗಳನ್ನಾಗಿ ರೂಢಿಸಿಕೊಳ್ಳಬೇಕು.
 
 
ಬೌದ್ಧಿಕ ಸವಾಲುಗಳನ್ನು ಕಂಡುಕೊಳ್ಳುವುದು
ಹದಿಹರೆಯದಲ್ಲಿ ಒತ್ತಡ ಉತ್ಸಾಹಗಳೆರಡೂ ಸಾಮಾನ್ಯ ಮಟ್ಟಕ್ಕಿಂತ ಜಾಸ್ತಿ ಇರುತ್ತದೆ. ಇದರಲ್ಲಿ ಒತ್ತಡಗಳು ಕಡಿಮೆಯಾಗಿ ಉತ್ಸಾಹವು ಹೆಚ್ಚಾಗಬೇಕಾದರೆ ಅದಕ್ಕೆ ತಕ್ಕುದಾದ ಬೌದ್ಧಿಕ ಸವಾಲುಗಳನ್ನು ಕಂಡುಕೊಳ್ಳಬೇಕು. ಕಲಿಕೆಯ ಹೊಸ ಹೊಸ ಸಾಧ್ಯತೆಗಳನ್ನು ಕಂಡುಕೊಳ್ಳಿ. ಆಗ ಬೌದ್ಧಿಕ ಸವಾಲುಗಳು ಸಿಗುತ್ತದೆ. ಅಂತಹ ಸವಾಲುಗಳನ್ನು ನಿರ್ವಹಿಸುವುದರಲ್ಲಿ ಖುಷಿ ಸಿಗುತ್ತದೆ. ಅಲ್ಲದೆ ಅದರಿಂದ ವ್ಯಕ್ತಿತ್ವವು ಹೆಚ್ಚು ಚೆನ್ನಾಗಿ ವಿಕಾಸ ಹೊಂದುತ್ತದೆ.
ಮುಂದುವರಿಯುವುದು
ಅರವಿಂದ ಚೊಕ್ಕಾಡಿ
[email protected]

LEAVE A REPLY

Please enter your comment!
Please enter your name here