ವೃತ್ತಿ-ನೀತಿ-ಪ್ರೀತಿ!

0
377

ಮಸೂರ ಅಂಕಣ: ಆರ್ ಎಂ ಶರ್ಮ
ವೃತ್ತಿ ಕೆಲಸ-ಮೇಲಿಲ್ಲ-ಕೀಳಿಲ್ಲ-ಕೇವಲ ಅದರಲ್ಲಿ ಇಷ್ಟ-ನಿಷ್ಟೆ ಇದಷ್ಟೇ ಸುಸ್ಪಷ್ಟ ಮತ್ತೇನಿಲ್ಲ ಅದಕ್ಕಿಂತ ಹೆಚ್ಚಿನದು.
ಕೆಲಸ-ಕಾಯಕ-ದೈವ-ದೃಷ್ಟ-ಅದೃಷ್ಟ ಅದಕ್ಕೆ ಹತ್ತಿದ-ಹತ್ತಿಸಿದ-ಹೊತ್ತಿಸಿದ ವೈಭವಗಳು ಅನೇಕ.
ವೈಭವಗಳು ಸಂಭ್ರಮವಾದಾಗ ಮೇರಿನ ಸಂಗತಿ-ಪರಮಸಂಗಾತಿ.
ಭಗವದ್ಗೀತೆಯಲ್ಲಿ ಪರಾತ್ಪರದ ಮಾತು-
“ಕಮ೯ಣ್ಯೇವ ಅಧಿಕಾರಸ್ತೇ”
ಇಂಗ್ಲೀಶ್ ನಲ್ಲಿ-“ವಕ್೯ ಈಸ್ ವಶಿ೯ಪ್”
ಕನ್ನಡದಲ್ಲಿ-“ಕಾಯಕವೇ ಕೈಲಾಸ”
ಒಟ್ಟಿನಲ್ಲಿ ತಾತ್ಪಯ೯-ಸ್ವಯಂ ವೇದ್ಯ.
ಕೇಶಕ್ಕೆ ಕತ್ತರಿ- “ಕೇಶ ವಿನ್ಯಾಸ”,
– “ಕ್ಷೌರ-ಭದ್ರಾಕರಣ-ಮುಂಡನ-ವಪನ”,
ಇಲ್ಲಿ ಸಂಸ್ಕೃತದ ಅಮರಕವಿಯ “ಅಮರಕೋಶದ ಉಲ್ಲೇಖ ಅತ್ಯಗತ್ಯವಿದೆ-
“ಕ್ಷೌರಂತು ಭದ್ರಾಕರಣಂ ಮುಂಡನಂ ವಪನಂ ತಥಾ”-
ಇವೆಲ್ಲ ಆ ಒಂದು ಪದಕ್ಕೆ ಸಮಾನಾಥ೯ನೀಡುವ ಅನ್ಯ ಪದಗಳು.
-“ಆಯುಷ್ಕಮ೯”,
-“ಹಜಾಮತ್”,
-“ಹೇರ್ ಕಟ್ಟಿಂಗ್,ಹೇರ್ ಡ್ರೆಸ್ಸಿಂಗ್”,
ಹೆಸರು ಏನಿದ್ದರೇನು -ಫಲಶೃತಿ-ಕೂದಲಿನ ವ್ಯವಹಾರ-ವ್ಯಾಪಾರ-ಅದಕ್ಕೆ ದರ-
ತದನಂತರದೂ ಸತ್ಯವೇ- ಕಮಿ೯ಗೆ ಅಧರಕ್ಕೂ -ಉದರಕ್ಕೂ-ಆಧಾರ.
ಅದಕ್ಕೆ ಕೆಲಸಗಾರನಿಂದ “ಆಭಾರ”-ಇದೇ -ಜೀವಾಳ ಎಲ್ಲಾ.
ಈಗ ವಿನ್ಯಾಸಕ್ಕೆ-ಮಾರುಹೋಗದೇ-ಮರುಳಾಗದೇ-ಮರಳಿ- ಮರಳಿ ಹೋಗುವಂತೆ ಮಾಡಿತು-ಮಾಡಿಸಿತು ಸೈ ಎನಿಸಿಕೊಂಡಿತು.
ಇದಕ್ಕೆ ನಾಯಕರೂ-ನಾವಿಕರೂ-ಕಾರಣಿಕರೂ ಎಲ್ಲರೂ ಯಾವಾಗಲೂ –
ತಲೆಕೊಡಬೇಕು-ತಲೆಬಾಗಬೇಕು-ಇಲ್ಲಿ ಸಲ್ಲದು ತಲೆಹರಟೆ.
-“ಶಿರಸಾ ಪಾಲಯಾಮಿ”. ಇದೇ ಇಲ್ಲಿಯ ಸತ್ಯ-ನಿತ್ಯ-ಪಥ್ಯ.
ಅದೇ ಈ ಗಾಥೆಯ ಆಂತಯ೯-ಐಶ್ವಯ೯.
ಈ ಯಶೋಗಾಥೆಗೆ ಕಾರಣಿಕ-ಕಾರಣ-ಭದ್ರಾಕರಣದ ರುವಾರಿ- ಡಾ. ಕೆ.ಶಿವರಾಮ ಭಂಡಾರಿ ಇವರ ಬಗೆಗೆ ಮೊದ ಮೊದಲು ನುಡಿದವರು ಆದುಡಿತವನ್ನು ಕೀಳಾಗಿ ನೋಡಿ ಅದು ಮೇಲಕ್ಕೆ ಏರಿ-ಮೇರುಸಂಗತಿಯಾದಾಗ-ಸಂಗಾತಿತನಕ್ಕೆ ಹಾತೊರೆದುದೂ ಸತ್ಯವೇ.
ಈಗ ಕಣ್ಣುಬಿಟ್ಟು ನೋಡಿ ಜಯಕ್ಕೆ ಕಣ್ ಕಣ್ ಬಿಟ್ಟರು.
ಅದಕ್ಕೇ ಕವಿ ಹಾಡಿದ
-“ಇದು ಎಂಥಾ ಲೋಕವಯ್ಯಾ”-ಎಂತ. ಅಲ್ಲದೆ
ಸದರಿ ಕೇಶಕತ೯ನ-ಅದಕ್ಕೆ ಮೌಲ್ಯಮಾಪನ-ವಾಮನ ತ್ರಿವಿಕ್ರಮನಾದಂತೆ ಎತ್ತರಕ್ಕೆ-ಉತ್ತರೋತ್ತರ ಅಭಿವೃದ್ಧಿಗೆ ಹರಿಕಾರವಾಯಿತು.
ಹಾಹಾಕಾರ-ಅಹಂಕಾರ-ಅಪಸ್ವರ ಈಗೆಲ್ಲ ದಿವ್ಯಮೌನ.
ಸನ್ಮಾನ-ಮಾನ-ದೇದೀಪ್ಯಮಾನ-ಅದೇ ಸಧ್ಯದ ವಿದ್ಯಮಾನ.
ಈ ಪ್ರಶಸ್ತಿಗೆ ಭಾಜನರಾದವರು-ದಕ್ಷಿಣಕನ್ನಡದ ನೆಲದ ಮೂಲಜನ-ಶ್ರೀ ಶಿವರಾಮ ಕೆ ಭಂಡಾರಿ ಅತ್ತೂರು (ಕಾಕ೯ಳ) ಎಂತಸುದ್ದಿ ಮಾಡಿದ್ದೇ ಅಲ್ಲದೆ-
ಜಾಗತಿಕಮಟ್ಟದಲ್ಲಿ ಮನ್ನಣೆ-ಪ್ರಶಸ್ತಿ ಪಡೆದು ಮೆರೆದರು.
ಇವರು ಈ ಸಾಧನೆಗೆ ಯುರೋಪಿಯನ್ ಕಾಂಟಿನೆಂಟಲ್ ಊನಿವಸಿ೯ಟಿಯ-“ಡಾಕ್ಟರೇಟ್”-ಸನ್ನದು-ಪದವಿಯನ್ನು ಸಂಭಂದಪಟ್ಟ ಅಧಿಕಾರಿಗಳಿಂದ ಬ್ಯಾಂಕಾಕ್ ನಗರದಲ್ಲಿ ಪಡೆದರು.
ಇವರು ಈ ಉದ್ಯಮಕ್ಕೆ ಮುಂಬಯಿ ಯ ಮಹಾನಗರದಲ್ಲಿ ೧೨ ಸಂಖ್ಯೆಯಲ್ಲಿ ಮಳಿಗೆಗಳನ್ನು ತೆರೆದಿದ್ದಾರೆ.
ಈಗಈ ಉದ್ಯಮಕ್ಕೆ ಹೊಸಹೆಸರು-“ಶಿವಾಸ್ ಹೇರ್ ದಿಸೈನರ್ಸ್ ಪ್ರೈವೇಟ್ ಲಿಮಿಟೆಡ್”-ಎಂತ.
ಆಯ೯ವಾಕ್ ಹೇಳುತ್ತದೆ-“ಸೊತ್ಸಾಹಾನಾಂ ನರಾಣಾಂ ನಾಸ್ತಿ ಅಸಾಧ್ಯಃ!
– “ಉದ್ಯೋಗ ಪುರುಷ ಸಿಹಂ ಉಪೈತಿ ಲಕ್ಶ್ಮೀ”
ವೃತ್ತಿಯಲ್ಲಿ ನೀತಿ-ಪ್ರೀತಿ ಅದೇ ರೀತಿಯಾದರೆ ಭಗವಂತನೂ ಮೆಚ್ಚುತ್ತಾನೆ ಎನ್ನುವುದಕ್ಕೆ ಇದು ಸಾಕ್ಷಿಯಾಗಲಿಲ್ಲವೇ?
ಜನಮನ್ನಣೆಗೆ ಪ್ರತೀಕವಾಗಿ-೧೨ ಮಳಿಗೆಗಳು-ಕಿರೀಟಕ್ಕೆ ಮತ್ತೂ ಅಲಂಕಾರ-ಖ್ಯಾತಿಯ ಉತ್ತುಂಗಕಕ್ಕೆ.
ಡಾಕ್ಟರೇಟ್ ಪದವಿ-ಮಹತಿಗೆ ಮಾನ್ಯತೆ-ಇದು ಅನನ್ಯ-ಅನ್ಯೋನ್ಯ-ಸವ೯ಮಾನ್ಯ.
ಇವರ ಖ್ಯಾತಿಗೆ ಜೋಡಿಸಿದ ಇನ್ನೋದು ಆಣಿಮುತ್ತು-ಈಗಷ್ಟೇ ಮುಕ್ತಾಯಗೊಂಡ ಅಮೇರಿಕದ “ಅಕ್ಕ ಕನ್ನಡ ಸಮ್ಮೇಳನಕ್ಕೆ-ವಿಶೇಷ ಆಹ್ವಾನಿತರಾಗಿದ್ದುದು”.
ಕತ್ತರಿಯ ಓಡಾಟಕ್ಕೆ-ಕೈ.
ಕೈ ಚಮತ್ಕಾರಕ್ಕೆ ಸೈ ಎಂದರ್ ಜಗದ ಜನ.
ಸೈ ಹಾಯ್ ಆಯಿತು.
ಹಾಯ್ ಹೋಯ್ ಆಯಿತು.
ಪದವಿಗೆ ವಿದ್ವತ್.
ವಿದ್ವತ್ ಗೆ ನೈಪುಣ್ಯತೆ.
ನೈಪುಣ್ಯತೆಗೆ ಧನ್ಯತೆ.
ಧನ್ಯತೆಗೆ ಮಾನ್ಯತೆ.
ಕೇಶ-ಕ್ಲೇಶವಲ್ಲ-ಕುಶಲ-ಸಫಲ.
ಫಲಪ್ರಾಪ್ತಿ ಸಂತೃಪ್ತಿ.
ವೃತ್ತಿಯಲ್ಲಿ ತೃಪ್ತಿ-ಸುಖದ ಜೋಳಿಗೆ ಭತಿ೯.
“ಮಾಗಾ೯ರಬ್ಧಾಃ ಸವ೯ಯತ್ನಾಃ ಫಲಂತಿ”
ಇದೇ ಇಲ್ಲಿ ನೀತಿಯ ಸಾನ್ನಿಧ್ಯ-ಸಾಮಿಪ್ಯ.
ಆರ್.ಎಂ.ಶಮ೯
[email protected]

LEAVE A REPLY

Please enter your comment!
Please enter your name here