ನಮ್ಮ ಪ್ರತಿನಿಧಿ ವರದಿ
ತುಳುನಾಡಿನಲ್ಲಿ ವಿಷುವಿಗೆ ಹೆಚ್ಚಿನ ಪ್ರಾಮುಖ್ಯತೆ. ವಿಷುವನ್ನು ಹೊಸವರುಷದ ಆರಂಭವೆಂದೇ ಆಚರಿಸಲಾಗುತ್ತದೆ. ವಿಷುವಿನ ಬೆನ್ನಲ್ಲೇ ತುಳುನಾಡಿನ ಹಲವೆಡೆ ಮಳೆಯಾಗಿದೆ. ಸಮೃದ್ಧಿಯ ಸಂಕೇತವೋ ಎಂಬಂತೆ ಮಳೆಯಾಗಮನವಾಗಿದೆ.
ಶುಕ್ರವಾರ ರಾತ್ರಿ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆಗಳಲ್ಲಿ ಉತ್ತಮ ಮಳೆಯಾಗಿದೆ. ತಡರಾತ್ರಿ ಸಿಡಿಲು ಗುಡುಗಿನ ಆರ್ಭಟದೊಂದಿಗೆ ಮಳೆ ಬಿದ್ದಿದೆ. ಮೊದಲ ಮಳೆಗೆ ಇಂದಬೆಟ್ಟು ಶಾಂತಿನಗರದಲ್ಲಿ ಜಗದೀಶ್ ನಾಯ್ಕ ಎಂಬವರು ಮೃತಪಟ್ಟಿದ್ದಾರೆ.
ಅವರ ತಾಯಿ, ಅಣ್ಣನಿಗೂ ತೀವ್ರ ಗಾಯಗಳಾಗಿವೆ. ಹಲವು ಕಡೆಗಳಲ್ಲಿ ಗಾಳಿಯ ತೀರ್ವತೆಯೂ ಇತ್ತು. ಬಿಸಿಲ ಝಳದಿಂದ ಬಳಲಿಹೋಗಿದ್ದ ಇಳೆಗೆ ತುಸು ತಂಪು ಉಂಟಾಗಿದ್ದಂತೂ ಸತ್ಯ.