ವಿಶ್ವ ಪರಿಸರ ದಿನಾಚರಣೆ

0
220

 
ಉಡುಪಿ ಪ್ರತಿನಿಧಿ ವರದಿ
ಜಾಗತಿಕ ಪರಿಸರ ದಿನಾಚರಣೆಯ ಮುನ್ನಾದಿನದಂದು ಶಿವಳ್ಳಿ ಕೈಗಾರಿಕ ಪ್ರದೇಶದಲ್ಲಿರುವ ಮುನಿಯಾಲು ಆಯುರ್ವೇದ ಸಂಸ್ಥೆಯು ಪರಿಸರ ಕಾಳಜಿಯ ಉದ್ದೇಶದಿಂದ ಕೈಗಾರಿಕ ಪ್ರದೇಶದಲ್ಲಿರುವ ಸುಮಾರು 50 ಕ್ಕೂ ಮಿಕ್ಕಿ ಸಂಸ್ಥೆಗಳಿಗೆ ತಮ್ಮ ಪರಿಸರದಲ್ಲಿ ನೆಡೆಲು ವಿವಿಧ ಬಹುಉಪಯೋಗಿ ಔಷಧೀಯ ಸಸ್ಯಗಳನ್ನು ಜೂ. 3 ರಂದು ವಿತರಣೆ ಮಾಡಿ ಅವುಗಳನ್ನು ನೆಡುವಂತೆ ಪ್ರೋತ್ಸಾಹಿಸಲಾಯಿತು. ಹಾಗೂ ಸಂಸ್ಥೆಯ ವತಿಯಿಂದ ಜೂ.6 ರಂದು ನಮ್ಮ ಸಂಸ್ಥೆಯು ಪರಿಸರದಲ್ಲಿ ಸುಮಾರು 10 ಕ್ಕೂ ಹೆಚ್ಚು ಗಿಡಗಳನ್ನು ನೆಡಲಾಯಿತು.
 
 
 
ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ಡಾ. ಸತ್ಯನಾರಾಯಣ ಬಿ., ಸಂಸ್ಥೆಯ ನಿರ್ದೇಶಕರಾದ ತಾರಾನಾಥ್ ಶೆಟ್ಟಿ, ಉಪಪ್ರಾಂಶುಪಾಲರಾದ ಡಾ. ದಿನೇಶ್ ನಾಯಕರು, ಹಾಗೂ ದ್ರವ್ಯಗುಣ ವಿಭಾಗದ ಡಾ. ಚಂದ್ರಕಾಂತ್ ಭಟ್ ಮತ್ತು ಎನ್. ಎಸ್. ಎಸ್ ಘಟಕದ ಡಾ. ಪ್ರದೀಪ್ ಇ. ಕೆ. ಹಾಗೂ ಎಲ್ಲಾ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here