ವಿಶ್ವ ಆರೋಗ್ಯ ದಿನ

0
297

ಉಡುಪಿ ಪ್ರತಿನಿಧಿ ವರದಿ
ವೈಯಕ್ತಿಕ ಆರೋಗ್ಯದ ರಕ್ಷಣೆಗೆ ಒತ್ತು ಕೊಡುವ ಜೊತೆಗೆ ಆರೋಗ್ಯವಂತ ಸಮಾಜ ನಿರ್ಮಿಸುವಲ್ಲಿ ಪ್ರತಿಯೊಬ್ಬರೂ ತಮ್ಮ ಕೊಡುಗೆ ನೀಡಬೇಕು ಎಂದು ಕೇಂದ್ರ ಸರಕಾರದ ಆಯುಷ್ ಇಲಾಖೆಯ ಯೋಗ ಸಮಿತಿ ಸದಸ್ಯ ಡಾ ತನ್ಮಯ್ ಗೋಸ್ವಾಮಿ ಹೇಳಿದರು.
 
 
ಅವರು ತೆಂಕನಿಡಿಯೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗ, ತೆಂಕನಿಡಿಯೂರು ಗ್ರಾಮ ಪಂಚಾಯತ್ ಹಾಗೂ ಸ್ವಚ್ಛ ಭಾರತ್ ಫ್ರೆಂಡ್ಸ್ ಆಶ್ರಯದಲ್ಲಿ ಎಪ್ರಿಲ್ 7 ರಂದು ನಡೆದ ವಿಶ್ವ ಆರೋಗ್ಯ ದಿನದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
 
ತೆಂಕನಿಡಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷ ಜಯಕುಮಾರ್ ಬೆಳ್ಕಲೆ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಂಶುಪಾಲ ಪ್ರೊ ಬಾಲಕ್ರಷ್ಣ ಹೆಗ್ಡೆ ಅಧ್ಯಕ್ಷತೆ ವಹಿಸಿದರು. ಡಾ ದುಗ್ಗಪ್ಪ ಕಜೆಕಾರ್ ಪ್ರಾಸ್ಥಾವಿಕ ಮಾತನಾಡಿ, ದರ್ಶನಿ ನಿರೂಪಿಸಿದರು. ಪ್ರೊ ರಾಘವ ನಾಯ್ಕ್, ನಾಗರಾಜ್, ಗಣೇಶ್ ನಾಯಕ್, ಮತ್ತಿತ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here