ವಿಶ್ವಾಸಮತ ಯಾಚನೆ ಅಂತ್ಯ: ನಾಳೆ ಫಲಿತಾಂಶ

0
284

ರಾಷ್ಟ್ರೀಯ ಪ್ರತಿನಿಧಿ ವರದಿ
ಉತ್ತರಾಖಂಡ್ ವಿಧಾನಸಭೆಯಲ್ಲಿ ಬಲಾಬಲ ಪರೀಕ್ಷೆಯಲ್ಲಿ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಸುಪ್ರೀಂಕೋರ್ಟ್ ಉಸ್ತುವಾರಿಯಲ್ಲಿ ವಿಶ್ವಾಸಮತಯಾಚನೆ ನಡೆದಿತ್ತು.
 
 
 
ಶಾಸಕರು ವಿಧಾನಸಭೆಯಿಂದ ಹೊರಗಡೆ ತೆರಳಿದ್ಧಾರೆ. ಮುಚ್ಚಿದ ಲಕೋಟೆಯಲ್ಲಿ ಮತಗಳು ಭದ್ರವಾಗಿದೆ. ಸೀಲ್ ಆಗಿರುವ ಲಕೋಟೆಯಲ್ಲಿ ಫಲಿತಾಂಶ ಸುಪ್ರೀಂಕೋರ್ಟ್ ಗೆ ಸಲ್ಲಿಕೆಯಾಗಲಿದೆ.
 
 
 
ನಾಳೆ ಸುಪ್ರೀಂಕೋರ್ಟ್ ಫಲಿತಾಂಶವನ್ನು ಪ್ರಕಟ ಮಾಡಲಿದೆ. ಹರೀಶ್ ರಾವತ್ ಪರ 34 ಮತ, ಬಿಜೆಪಿ 28 ಮತ ಚಲಾವಣೆಯಾಗಿದ್ದು, ಕಾಂಗ್ರೆಸ್ ಗೆಲುವಿನ ಬಗ್ಗೆ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

LEAVE A REPLY

Please enter your comment!
Please enter your name here