ವಿಶ್ವವಿದ್ಯಾನಿಲಯ ಕಾಲೇಜು: ಯುನಿಫೆಸ್ಟ್ – 2017

0
177

ಮಂಗಳೂರು ಪ್ರತಿನಿಧಿ ವರದಿ
ಇಂದಿನ ವಿದ್ಯಾರ್ಥಿಗಳೇ ಮುಂದಿನ ಭವ್ಯ ಭಾರತದ ರೂವಾರಿಗಳು. ಭಾರತದ ಮುಂದಿನ ಕನಸನ್ನು ನನಸು ಮಾಡುವಂತಹ ವಿದ್ಯಾರ್ಥಿ ಸಮೂಹ ನಿರ್ಮಾಣವಾಗಬೇಕಾಗಿದೆ ಎಂದು ಕ್ಯಾಂಪ್ಕೋ ಸಂಸ್ಥೆಯ ಅಧ್ಯಕ್ಷರಾದ ಸತೀಶ್ಚಂದ್ರ ಇವರು ಹೇಳಿದರು.
 
 
ಇತ್ತೀಚೆಗೆ ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ಅತಿತರಂಥಿ ಶೀರ್ಷಿಕೆಯಡಿಯಲ್ಲಿ ನಡೆದ ಯುನಿಫೆಸ್ಟ್ – 2017 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
 
 
ಈ ಕಾರ್ಯಕ್ರಮವನ್ನು ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಸ್ನಾತಕೋತ್ತರ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ 16 ಕಾಲೇಜುಗಳು ಭಾಗವಹಿಸಿದ್ದು ಬೆಸ್ಟ್ ಮ್ಯಾನೇಜರ್, ಮಾರ್ಕೆಟಿಂಗ್, ಹ್ಯೂಮನ್ ರಿಸೋಸರ್್, ಫೈನಾನ್ಸ್, ಹಾಗೂ ಕ್ವಿಜ್ ಸ್ಪರ್ಧೆಗಳನ್ನು ನಡೆಸಲಾಯಿತು.
 
 
ಸಮಾರೋಪ ಸಮಾರಂಭದಲ್ಲಿ ಎಕ್ಪರ್ಟೈಸ್ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕರಾದ ಮಹಮ್ಮದ್ ಅಶ್ರಫ್ ಕರ್ನಿರೆ ಮುಖ್ಯ ಅತಿಥಿಯಾಗಿದ್ದರು. ಕಾಲೇಜು ಪ್ರಾಂಶುಪಾಲರಾದ ಡಾ. ಉದಯ ಕುಮಾರ್ ಇರ್ವತ್ತೂರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ಸಂಯೋಜಕರಾದ ಡಾ. ಎ. ಸಿದ್ಧಿಕ್ ಪ್ರಸ್ತಾವನೆಗೈದರು. ಸಂಘಟಕರಾದ ದೀಕ್ಷಾ ಶೆಟ್ಟಿ, ವಿದ್ಯಾರ್ಥಿ ಸಂಘಟಕರಾದ ಪ್ರವೀಣ್ ಕುಮಾರ್, ಕುಮಾರಿ. ಮ್ಯೂರಲ್ ಉಪಸ್ಥಿತರಿದ್ದರು.
 
 
 
ಮಂಗಳೂರು ವಿಶ್ವವಿದ್ಯಾನಿಲಯ ಚಾಂಪಿಯನ್: ಸ್ಪರ್ಧೆಯಲ್ಲಿ ಸ್ನಾತಕೋತ್ತರ ವಿಭಾಗ, ಮಂಗಳೂರು ವಿಶ್ವವಿದ್ಯಾನಿಲಯ ಚಾಂಪಿಯನ್ ಶಿಪ್ ಪಡೆದರೆ, ಕೆನರಾ ಕಾಲೇಜು ದ್ವಿತೀಯ ಸ್ಥಾನ ಗಳಿಸಿದೆ.

LEAVE A REPLY

Please enter your comment!
Please enter your name here