ವಿಶ್ವವನ್ನೇ ನಡುಗಿಸುತ್ತಿದೆ ಕೊರೊನಾ

0
345

ಕೊರೊನಾ ಕರಿಛಾಯೆ
ಕೊರೊನಾ ಎಂಬ ಪದ ಇಡೀ ವಿಶ್ವವನ್ನೆ ಬೆಚ್ಚಬೀಳಿಸಿದೆ. ಹಲವು ಕಾಯಿಲೆಗಳಾದ ರಾಷ್ಟ್ರವಾದ ಚೀನಾದಲ್ಲೇ ಜನ್ಮ ತಾಳಿದ ಕೊರೊನಾ ಇಡೀ ವಿಶ್ವವನ್ನೇ ವ್ಯಾಪಿಸಿದೆ.
ಈ ವೈರಸ್ ಚೀನಾ ದೇಶದ ವುಹಾನ್ ನಗರದಲ್ಲಿ ಕಾಣಿಸಿಕೊಂಡಿದೆ. ಈ ವೈರಸ್ ಈಗಾಗಲೇ ಮೂವತ್ತು ಹೆಚ್ಚು ರಾಷ್ಟ್ರಗಳಲ್ಲಿ ಹಬ್ಬಿದ್ದು, ಐನ್ನೂರಕ್ಕೂ ಹೆಚ್ಚು ಮಂದಿಸಾವನ್ನಪ್ಪಿದ್ದಾರೆ.

ಏನಿದು ಕೊರೊನಾ ವೈರಸ್:
ಕೊರೊನಾ ಎಂಬುವುದು ಸಾಮಾನ್ಯ ವೈರಸ್ ಗಳ ಗುಂಪಾಗಿದೆ. ವೈರಸ್ ಗಳ ಮೇಲ್ಮೈಯಲ್ಲಿ ಕಿರೀಟದಂತಹ ವಿನ್ಯಾಸವಿರುವ ಕಾರಣ ಈ ವೈರಸ್ ಗೆ ಕೊರೊನಾ ಎಂದು ಹೆಸರಿಡಲಾಗಿದೆ. ಕೊರೊನಾ ವೈರಸ್ ಸೋಂಕಾಣು ಆಗಿದ್ದು ಪ್ರಾಣಿಗಳಲ್ಲಿ ಎನ್ನಲಾಗಿದೆ.
ಕೆಲವು ವೈರಸ್ ಗಳು ಪ್ರಾಣಿಗಳ ಮೇಲೆ ಮಾತ್ರ ಪರಿಣಾಮ ಬೀರುತ್ತದೆ. ಇನ್ನೂ ಕೆಲವು ವೈರಸ್ ಗಳು ಮನುಷ್ಯರ ಮೇಲೂ ತನ್ನ ಅಧಿಕಾರವನ್ನು ಸಾಧಿಸುತ್ತದೆ.
ಇದು ಪ್ರಾರಂಭದಲ್ಲಿ ಶೀತಂತದ ಲಘು ಪ್ರಮಾಣದಿಂದ ಪ್ರಾರಂಭವಾಗಿ ಬಳಿಕ ಮಾಧ್ಯಮ ಪ್ರಮಾದ ಮೇಲ್ಭಾಗದ ಶ್ವಾಸಕೋಶದ ಸೋಂಕನ್ನು ಉಂಟುಮಾಡುತ್ತದೆ. ಕೆಲವೊಮ್ಮೆ ತೀವ್ರ ರೀತಿಯ ನ್ಯುಮೋನಿಯಾ ಮತ್ತು ಬ್ರಾಂಕೈಟಿಸ್ ಉಂಟುಮಾಡುತ್ತದೆ. ಕೊರೊನಾ ವೈರಸ್ ಹಲವು ವಿಧಗಳಿದ್ದು, ಇದುವರೆಗ ಆರು ಬಗೆಯ ಕೊರೊನಾವೈರಸ್ ಗಳನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಇದರಲ್ಲಿ ಮೆಸರ್್ ಮತ್ತು ಸಾಸರ್್ ವೈರಸ್ ಸೇರಿಕೊಂಡಿದೆ.

ಇದರಿಂದ ಎಚ್ಚರದಿಂದಿರಿ:
ಕೊರೊನಾ ವೈರಸ್ ಎಂಬುದು ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಸಾಂಕ್ರಾಮಿಕ ರೋಗವಾಗಿದೆ. ಇದರಿಂದ ನಾವು ರೋಗ ಹರಡದಂತೆ ಜಾಗ್ರತೆ ವಹಿಸಬೇಕಾಗುತ್ತದೆ.
ಶೀನು ಮತ್ತು ಕೆಮ್ಮಿನಿಂದ ದೂರವಿರಬೇಕು.
ಕೆಮ್ಮುವಾಗ ಮತ್ತು ಶೀನುವಾಗ ಬಾಯಿಗೆ ಕರವಸ್ತ್ರ ಅಡ್ಡಹಿಡಿಯುವ ಮೂಲಕ ಮತ್ತು ಕೈಗಳನ್ನು ಆಗಾಗ ತೊಳೆಯುವ ಮೂಲಕ ಸರಳ ನೈರ್ಮಲ್ಯವನ್ನು ಅಭ್ಯಾಸ ಮಾಡಿಕೊಳ್ಳಬೇಕು.
ಅನಾರೋಗ್ಯದಿಂದಿರುವ ಅಥವಾ ಕೆಮ್ಮು ಮತ್ತು ನೆಗಡಿ ಇತ್ಯಾದಿ, ಅನಾರೋಗ್ಯದ ಲಕ್ಷಣಗಳನ್ನು ಹೊಂದಿರುವ ಜನರೊಂದಿಗೆ ನಿಕಟ ಸಂಪರ್ಕ ಹೊಂದಬೇಡಿ.
ಪ್ರಾಣಿಗಳ ನೇರ ಸಂಪರ್ಕವನ್ನು ಹಾಗೂ ಬೇಯಿಸದ/ಕಚ್ಚಾ ಮಾಂಸ ಸೇವನೆಯನ್ನು ಮಾಡಬೇಡಿ.
ಸಾಕಷ್ಟು ನೀರು ಕುಡಿಯಬೇಕು.
ಧೂಮಪಾನ ಮಾಡಬಾರದು
ಹೆಚ್ಚು ಜನ ಸಂದಣಿ ಇರುವ ಕಡೆ ಓಡಾಡಬಾರದು
ಮಲದ ಮೂಲಕವೂ ಹರಡಬಹುದು

ಯಾರಿಗೆ ಕೊರೊನಾ ಬರಬಹುದು…
ಈ ವೈರಸ್ ಸಣ್ಣ ಮಗುನಿಂದ ಹಿಡಿದು ಹಿರಿಯರವರೆಗೂ ಬರುತ್ತದೆ. ಆದರೆ ದುರ್ಬಲ ಪ್ರತಿರೋಧಕ ವ್ಯವಸ್ಥೆ ಹೊಂದಿರುವ ಶಿಶುಗಳಿಗೆ, ಸಣ್ಣ ಮಕ್ಕಳಿಗೆ ಹಾಗೂ ವೃದ್ಧರಿಗೆ ಬೇಗನೆ ಹರಡಿ, ಜೀವಕ್ಕೆ ಅಪಾಯ ತರುತ್ತದೆ.
ಇದರ ಲಕ್ಷಣಗಳು:
ಅತಿಯಾದ ಜ್ವರ
ಮೂಗು ಸೋರುವುದು
ತಲೆನೋವು
ಕೆಮ್ಮು
ಗಂಟುನೋವು
ತಲೆಸುತ್ತು
ಸಂಪೂರ್ಣವಾಗಿ ಅನಾರೋಗ್ಯ
ಈ ವೈರಸ್ ಮನುಷ್ಯನ ದೇಹದಲ್ಲಿ ತೀವ್ರವಾದಾಗ ಬ್ರಾಂಕೈಟಿಸ್ ಅಥವಾ ನ್ಯುಮೋನಿಯಾ ಆಗಿ ಪರಿವರ್ತನೆ ಆಗುತ್ತದೆ. ಇದರಿಂದ ದೇಹದಲ್ಲಿ ಕಫದೊಂದಿಗೆ ಕೆಮ್ಮು, ಉಸಿರುಕಟ್ಟುವಿಕೆ, ಎದೆನೋವು, ಉಸಿರಾಟದ ವೇಳೆ ಬಿಗಿ ಹಿಡಿತ ಇರುತ್ತದೆ.

ಈ ವೈರಸ್ ನೂರಾರು ಮಂದಿಯ ದೇಹದಲ್ಲಿ ಮನೆಮಾಡಿದೆ. ಇದರಿಂದ ಪ್ರತಿದಿನ ಸಾವಿನ ಸಂಖ್ಯೆ ಏರುತ್ತಲೇ ಇದೆ.
ಈ ವೈರಸ್ ಮನುಷ್ಯನ ಸಹಿತ ಸಸ್ತನಿಗಳ ಉಸಿರಾಟದ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ ಎನ್ನಲಾಗಿದೆ. ಈ ವೈರಸ್ ನಿಂದಾಗಿ ಮೊದಲು ಸಾಮಾನ್ಯ ಶೀತ, ನ್ಯುಮೋನಿಯಾ ಮತ್ತು ತೀವ್ರ ರೀತಿಯ ಶ್ವಾಸಕೋಶದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಕೊನೆಗೆ ಹೊಟ್ಟೆಯ ಮೇಲೂ ಪರಿಣಾಮ ಬೀರುವುದು.

Advertisement

ವೈರಸ್ ಪರೀಕ್ಷೆಯ ವಿಧಾನ:
ಈ ಕಾಯಿಲೆ ಪತ್ತೆಗೆ ಲ್ಯಾಬ್ ರೋಟರಿಯಲ್ಲಿ ಮಾಲೆಕ್ಯೂಲರ್ ಪರೀಕ್ಷೆಯ ಮೂಲಕ ಸೋಂಕಿನ ಲಕ್ಷಣಗಳನ್ನು ಪತ್ತೆ ಹಚ್ಚಲಾಗುವುದು. ಅಲ್ಲದೆ ಸೆರೊಲಜಿ ಪರೀಕ್ಷೆ ಮೂಲಕ ರೋಗಿಗೆ ಯಾವ ಬಗೆಯ ವೈರಸ್ ದಾಳಿ ಮಾಡಲಾಗಿದೆ ಎಂದು ಪತ್ತೆ ಹಚ್ಚಲಾಗುತ್ತದೆ.
ದೈಹಿಕ ಪರೀಕ್ಷೆಗಳಾದ ರಕ್ತ ಪರೀಕ್ಷೆ, ಕಫ, ಗಂಟಲಿನ ಸ್ವಾಬ್ ನ ಮಾದರಿ, ಹಾಗೂ ವಿವಿಧ ಉಸಿರಾಟದ ಪರೀಕ್ಷೆ ಮಾಡಿಸಬಹುದು

ಚಿಕಿತ್ಸೆ:

ಈ ಭಯಾನಕ ಕಾಯಿಲೆಗೆ ನಿಖರವಾದ ಚಿಕಿತ್ಸೆಯನ್ನು ಕಂಡುಹಿಡಿಯಲಿಲ್ಲ. ಆದರೆ ಕೆಲವೊಂದು ಔಷಧಿಗಳನ್ನು ರೋಗಿಯ ಲಕ್ಷಣ ಆಧಾರಿತ ಚಿಕಿತ್ಸೆ ನೀಡಲಾಗುತ್ತಿದೆ.

LEAVE A REPLY

Please enter your comment!
Please enter your name here