ಮೂಡುಬಿದಿರೆ: ಹೌದು… ಅದು ಬರೋಬ್ಬರಿ 136ಅಡಿ… ಶಿವಲಿಂಗಾ ಕೃತಿಯಲ್ಲಿರುವ, ಶಿವದೇವಾಲಯದಲ್ಲಿ ಮಹಾ ಮೃತ್ಯುಂಜಯ ದೇವರ ಪ್ರತಿಷ್ಠೆ ನಡೆಯುತ್ತಿದೆ. ಭಾರತದ ಎರಡನೇ ಮಹಾ ಮೃತ್ಯುಂಜಯ ದೇವರ ಪ್ರತಿಷ್ಠೆ ಇದಾಗಿರುತ್ತದೆ, ಮಧ್ಯಪ್ರದೇಶದಲ್ಲಿ ರೇವಾದಲ್ಲಿ, ಪ್ರಾಚೀನ ಮಹಾಮೃತ್ಯುಂಜಯ ದೇವಾಲಯ ಈ ತನಕವಿತ್ತು, ಅಸ್ಸಾಮಿನ ನವಗಾಂವ್ ಜಿಲ್ಲೆಯ ನರಸಿಂಹ ಕ್ಷೇತ್ರದಲ್ಲಿ ಈ ದೇವಾಲಯವು ರಚಿಸಲ್ಪಟ್ಟಿದೆ, ಪುರಾಣೇತಿಹಾಸ ದಲ್ಲಿ ಹಿರಣ್ಯಕಶಿಪು ತಪಸ್ಸು ಮಾಡಿರುವ ಸ್ಥಳವೆಂದು ಪ್ರತೀತಿ ಇರುವ ಈ ಜಾಗದಲ್ಲಿ ಭೃಗು ಗಿರಿ ಮಹಾರಾಜ್ ಎಂಬ ಸಂತರು ದೀರ್ಘಕಾಲ ತಪಸ್ಸನುಷ್ಠಾನ ಮಾಡುವಾಗ , ಪ್ರಾಚೀನ ಶಿವಲಿಂಗ ಇಲ್ಲಿ ಭೂಗತ ವಾಗಿರುವುದು, ಗೋಚರಿಸಿ, ಇವರು ನೂತನ ಶಿವಲಿಂಗವನ್ನು ಚಿಕ್ಕ ಗುಡಿಯಲ್ಲಿ ಪ್ರತಿಷ್ಠಾಪಿಸಿದರು , ಅವರ ಸಂಕಲ್ಪದಂತೆ ಈಗ ಬೃಹದಾಕಾರದ ದೇವಾಲಯವನ್ನು ಅವರ ಶಿಷ್ಯರು ನಿರ್ಮಿಸಿರುತ್ತಾರೆ. ಅಸ್ಸಾಂ ಸರಕಾರದ ವತಿಯಿಂದ ಮುಜರಾಯಿ ಮತ್ತು ಪ್ರವಾಸೋದ್ಯಮ ಇಲಾಖೆಯ ಸಹಯೋಗದಿಂದ ಉಳಿದಂತಹ ಎಲ್ಲಾ ವ್ಯವಸ್ಥೆಗಳು ನಡೆಯುತ್ತಿದೆ. ಅಸ್ಸಾಮಿನ ವಿತ್ತ ಸಚಿವರು, ಈಶಾನ್ಯ ಭಾರತದ NDA ಅಧ್ಯಕ್ಷರು ಆಗಿರುವ ಶ್ರೀ ಹಿಮ೦ತ ಬಿಸ್ವಾ ಶರ್ಮರವರು ಅಧ್ಯಕ್ಷರಾಗಿರುವ ಸಮಿತಿ ಪ್ರತಿಷ್ಠಾಪನಾ ಕಾರ್ಯ ನೆರವೇರಿಸುತ್ತದೆ.
ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಿಯ ಪ್ರಧಾನ ಅರ್ಚಕರಾದ ಶ್ರೀ ಡಾ. ಕೆ.ಎನ್. ನರಸಿಂಹ ಅಡಿಗ ರ
ಕೇರಳದ ಕಾಸರಗೋಡು ಜಿಲ್ಲೆಯ ಗೋಕುಲಂ ಗೋಶಾಲೆಯ ಪೂಚಕ್ಕಾಡು ಶ್ರೀ ವಿಷ್ಣು ಪ್ರಸಾದ್ ಹೆಬ್ಬಾರರ ನೇತೃತ್ವದಲ್ಲಿ ಪರಂಪರಾ ವಿದ್ಯಾಪೀಠದ 250 ವೈದಿಕ ವಿದ್ವಾಂಸರು, ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಕರ್ನಾಟಕದ 200, ಗೋವಾ, ತಮಿಳುನಾಡು, ಕೇರಳದ ವೈದಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಅದಲ್ಲದೇ ವಾರಣಾಸಿ, ಒರಿಸ್ಸಾ, ಬಂಗಾಳ, ಹರಿದ್ವಾರ, ಅಸ್ಸಾಂ ಸೇರಿದಂತೆ 250 ಇತರ ವೈದಿಕರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಈ ಕಾರ್ಯಕ್ರಮವು ಫೆಬ್ರವರಿ 22 ರಿಂದ ಮಾರ್ಚ್ 3ರ ತನಕ ನಡೆಯುತ್ತದೆ. ಈ ಕಾರ್ಯಕ್ರಮದಲ್ಲಿ 108 ಕಾಯಿ ಗಣಹೋಮ , ಶತಚಂಡಿ ಹವನ, ದಶಲಕ್ಷ ಮೃತ್ಯುಂಜಯ ಮಂತ್ರ ಜಪ ಹಾಗೂ ಹವನ, ಸಹಸ್ರ ಕಲಶಾಭಿಷೇಕ ಮಹಾರುದ್ರ ಮತ್ತು ಚತುರ್ವೇದ ಪಾರಾಯಣ ಇತ್ಯಾದಿಗಳು ಪ್ರತಿಷ್ಠಾಂಗವಾಗಿ ನಡೆಯುತ್ತದೆ.
ಈ ಕಾರ್ಯಕ್ರಮದಲ್ಲಿ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಿಯ ಪ್ರಧಾನ ಅರ್ಚಕರಾದ ಡಾ. ಕೆ.ಎನ್. ನರಸಿಂಹ ಅಡಿಗರವರು ಶತಚಂಡಿ ಹವನ ನೆರವೇರಿಸುತ್ತಾರೆ. ಪ್ರತಿಷ್ಠೆ ಯಲ್ಲಿ ತಿರುವನಂತಪುರದ ಅನಂತ ಶಯನ ದೇವಾಲಯದ ಪ್ರಧಾನ ಅರ್ಚಕರ ಪುತ್ರರಾದ, ಬ್ರಹ್ಮ ಶ್ರೀ ಶ್ರೀ ವಿನೀತ ಪಟ್ಟೇರಿ ಯವರು ಪ್ರತಿಷ್ಟಾಂಗಕರ್ಮಗಳನ್ನು ನೆರವೇರಿಸುತ್ತಾರೆ. ಈಶಾನ್ಯ ಭಾರತದ ತೀರ್ಥಕ್ಷೇತ್ರ ಹಾಗೂ ಪ್ರವಾಸಿ ತಾಣದಲ್ಲಿ, ಈ ಕ್ಷೇತ್ರವು ಪ್ರಮುಖ ಸ್ಥಾನ ಪಡೆಯಲಿದೆ.