ವಿಶೇಷ ಯೋಗ ಶಿಬಿರ

0
269

 
ವರದಿ: ಹರ್ಷ ರಾವ್
ವಿಶ್ವ ಯೋಗ ದಿನಾಚರಣೆಯ ಪ್ರಯುಕ್ತ ಬುಧವಾರ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ.) ಮಧುಮೇಹ ನಿಯಂತ್ರಣಕ್ಕಾಗಿ ಹತ್ತು ದಿನಗಳ ವಿಶೇಷ ಯೋಗ ಶಿಬಿರವನ್ನು ಆಯೋಜಿಸಿದೆ.
 
 
ಸಂಜೆ 6 ಗಂಟೆಗೆ ಪ್ರಾರಂಭಗೊಂಡ ಈ ಕಾರ್ಯಕ್ರಮವನ್ನು ಸುಭ್ರಹ್ಮಣ್ಯ ಪಿ.ಎಸ್. ಮಾಲಕರು ಇಂಡಿಯನ್ ಸ್ಟೀಲ್ಸ್ ಹಾಗೂ ಯೋಗ ಗುರುಗಳಾದ ಜಯರಾಮ್ ರವರು ಉದ್ಘಾಟಿಸಿದರು. ಸುಮಾರು 50 ಕ್ಕೂ ಮಿಕ್ಕಿ ಯೋಗಾಸಕ್ತರು ಪಾಲ್ಗೊಂಡಿದ್ದರು .
 
 
ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕೋಶಾಧಿಕಾರಿ ರವೀಂದ್ರ ಪಿ., ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಸಂಚಾಲಕ ರಾಧಾಕೃಷ್ಣ ಭಕ್ತ, ವಕೀಲರುಗಳು, ಉಪನ್ಯಾಸಕರುಗಳು ಹಾಗೂ ಸಿಬ್ಬಂದಿವರ್ಗದವರು ಹಾಜರಿದ್ದರು.
 
 
ಈ ಯೋಗ ಶಿಬಿರವು 22.06.2016 ರಂದು ಪ್ರಾರಂಭಗೊಂಡು 1.07.2016 ರಂದು ಕೊನೆಗೊಳ್ಳಲಿದೆ. ಸಂಜೆ 6 ಗಂಟೆಗೆ ಪ್ರಾರಂಭವಾಗಿ 7.30 ಗೆ ಸಮಾಪನಗೊಳ್ಳುತ್ತದೆ. ಸ್ಥಳದಲ್ಲೇ ರಕ್ತ ಪರೀಕ್ಷೆಯನ್ನು ಮಾಡಲಾಗುವುದು, ಹಾಗೂ ಯೋಗದ ಲಾಭ ಪಡೆಯಲು ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.

LEAVE A REPLY

Please enter your comment!
Please enter your name here