ವಿಶೇಷ ಮಾಹಿತಿ ಕಾರ್ಯಕ್ರಮ

0
385

 
ವರದಿ: ಸುನೀಲ್ ಬೇಕಲ್
ಶ್ರೀ ಧ.ಮಂ.ಆಂ.ಮಾಧ್ಯಮ ಶಾಲೆ, ಧರ್ಮಸ್ಥಳ ದಲ್ಲಿ ಮೇ 26 ರಂದು ಶಾಲಾ ಆರಂಭಪೂರ್ವದಲ್ಲಿ ವಿಶೇಷ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳಲಾಯಿತು.
 
 
 
ಸಂಪನ್ಮೂಲ ವ್ಯಕ್ತಿಗಳಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವಿರೇಂದ್ರ ಹೆಗ್ಗಡೆಯವರ ಪುತ್ರಿ ಶ್ರದ್ಧಾ ಅಮಿತ್ರವರು ಆಗಮಿಸಿ ಶಿಕ್ಷಕ ವೃಂದವನ್ನು ಉದ್ದೇಶಿಸಿ ಆಧುನಿಕ ಶಿಕ್ಷಣ ಕ್ಷೇತ್ರದಲ್ಲಿ ಆಗಬೇಕಾದ ಬದಲಾವಣೆಗಳ ಕುರಿತಂತೆ ತಮ್ಮ ವಿಶಿಷ್ಟ ಯೋಚನೆ ಹಾಗೂ ಯೋಜನೆಗಳನ್ನು ಅಭಿವ್ಯಕ್ತಗೊಳಿಸಿದರು. ಮುಖ್ಯವಾಗಿ ಪ್ಲಾಸ್ಟಿಕ್ ನಿರ್ಮೂಲನೆ, ತ್ಯಾಜ್ಯ ವಿಲೇವಾರಿ, ಪರಿಸರ ಸಂರಕ್ಷಣೆ ಇತ್ಯಾದಿಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅನುಭವ ಹಾಗೂ ಆಟದ ಮೂಲಕ ವಿಶೇಷ ಜ್ಞಾನವನ್ನು ನೀಡುವ ಕಲೆಯನ್ನು ತಿಳಿಯಪಡಿಸಿದರು.
 
 
 
ಈ ಸಂದರ್ಭದಲ್ಲಿ ಉಡುಪಿಯ ಪ್ರಸನ್ನ ಕುಮಾರ್ ಉಪಸ್ಥಿತರಿದ್ದು ತಮ್ಮ ಅನುಭವ ಹಾಗೂ ವಿಶೇಷ ಜ್ಞಾನವನ್ನು ಶಿಕ್ಷಕವೃಂದದವರೊಂದಿಗೆ ಹಂಚಿಕೊಂಡರು. ಸಹಶಿಕ್ಷಕಿಯವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಈ ಕಾರ್ಯಕ್ರಮವನ್ನು ಸಹ ಶಿಕ್ಷಕಿ ಆಶಾ ನಿರೂಪಿಸಿದರು. ಮುಖ್ಯ ಶಿಕ್ಷಕಿ ಪರಿಮಳ ಎಂ.ವಿ ಸ್ವಾಗತಿಸಿದರು. ಶಿಕ್ಷಕ ವೃಂದದವರೆಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಂಡರು.

LEAVE A REPLY

Please enter your comment!
Please enter your name here