ವಿಶೇಷ ಉಪನ್ಯಾಸ

0
157

ವರದಿ: ಕಾರ್ತಿಕ್ ಆನಂದ
ವಿವೇಕಾನಂದ ಕಾನೂನು ಮಹಾವಿದ್ಯಾಲಯವು ಇತ್ತೀಚೆಗೆ ಕಾಲೇಜು ಸಭಾಂಗಣದಲ್ಲಿ ತೀರ್ಪು ನೀಡುವ ಕಲೆ ಎಂಬ ವಸ್ತು ವಿಷಯದ ಮೇಲೆ ವಿಶೇಷ ಉಪನ್ಯಾಸವನ್ನು ಏರ್ಪಡಿಸಿತ್ತು.
 
 
ಉಪನ್ಯಾಸ ವನ್ನು ನಡೆಸಿ ಕೊಡಲು, ಗೌರವಾನ್ವಿತ ಚಂದ್ರಶೇಖರ ಉಪ್ಪಳಿಗೆ , ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಧೀಶರು, ಬಂಟ್ವಾಳ ಇವರು ಆಗಮಿಸಿದ್ದರು. ಅಧ್ಯಕ್ಷ ಸ್ತಾನವನ್ನು ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಕೃಷ್ಣಮೂರ್ತಿ ಕೆ.ಜಿ. ವಹಿಸಿದ್ದರು.
 
 
ಕಾರ್ಯಕ್ರಮದಲ್ಲಿ ಅತಿಥಿಗಳು ಮಾತನಾಡುತ್ತಾ ನ್ಯಾಯಾಲಯವು ಯಾವುದೇ ಕ್ರಿಮಿನಲ್ ಮತ್ತು ದೀವಾನಿ ವಿಚಾರದಲ್ಲಿ ವಸ್ತುಸ್ಥಿತಿಯನ್ನಾಧರಿಸಿ ತೀರ್ಪನ್ನು ಪ್ರಕಟಿಸುತ್ತದೆ. ಈ ತೆರನಾಗಿ ತೀರ್ಪನ್ನು ನೀಡುವುದೇ ನಿಜವಾದ ನಿರ್ಧಾರ ಕೈಗೊಳ್ಳುವ ಕಲೆ, ಆದರೆ ಇದನ್ನು ನೈತಿಕ ದೃಷ್ಟಿಕೋನದಿಂದ ನೋಡಿದಾಗ ಇದು ತಪ್ಪಾಗಿ ಜನರ ಭಾವನೆಗಳಿಗೆ ವಿರುದ್ಧವೆನಿಸಿದರೂ ಕೂಡಾ ನ್ಯಾಯಿಕ ದೃಷ್ಟಿಕೋನದಲ್ಲಿ ಇದು ಸರಿಯಾದದ್ದು. ಕಾನೂನು ಎಲ್ಲಕ್ಕಿಂತಲೂ ಮಿಗಿಲಾದುದು, ಇದರ ಆಧಾರದಲ್ಲಿ ತೀರ್ಪನ್ನು ನೀಡುತ್ತದೆ, ಆದರೆ ಇಂದು ನ್ಯಾಯಾಲಯವನ್ನೇ ದೂರುತ್ತಿರುವುದು ವಿಷಾದನೀಯ ,ಎಲ್ಲಾ ಸಾಕ್ಷಿ ಪುರಾವೆಗಳನ್ನು ಗಮನಿಸಿಕೊಂಡು , 3 ಅಪರಾಧಿ ಶಿಕ್ಷೆಯಿಂದ ಪಾರಾದರೂ ಓರ್ವ ನಿರಪರಾಧಿಗೆ ಶಿಕ್ಷೆಯಾಗಬಾರದೆಂಬ ತತ್ವವನ್ನನುಸರಿಸಿ ತೀರ್ಮಾನವನ್ನು ನೀಡುತ್ತದೆ , ಯಾರಿಗೆ ನ್ಯಾಯವನ್ನು ಕೇಳುವ/ಪಡೆಯುವ ಹಕ್ಕಿದೆಯೋ ಅವನಿಗೆ ಪರಿಹಾರ ಇದ್ದೇ ಇರುತ್ತದೆಯೆಂದರು. ಕಾನೂನು ವಿದ್ಯಾರ್ಥಿಗಳು ಈ ಕ್ರಮಗಳ ಬಗೆಗೆ ನ್ಯಾಯಾಲಯಕ್ಕೆ ಬಂದು ಪ್ರಕರಣಗಳನ್ನು ಪೂರ್ಣ ಆಲಿಸಿದರೆ ಮಾತ್ರ ನಿರ್ಧಾರ ಹೇಗೆ ತೆಗೆದುಕೊಳ್ಳಲಾಗುತ್ತದೆಯೆಂದರು.
 
 
ತದನಂತರ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ತೊಡಗಿಕೊಂಡರು. ಬಳಿಕ ಪ್ರಾಂಶುಪಾರಾದ ಕೃಷ್ಣಮೂರ್ತಿ ಕೆ.ಜಿ. ಮಾತನಾಡಿ ನಿರ್ಧಾರಗಳನ್ನು ಪರಿಸ್ಥಿತಿಗೆ ಸಂಬಂಧ ಪಟ್ಟಹಾಗೆ ನೀಡಬೇಕಾಗುತ್ತದೆ. ಹೀಗಾಗಿ ಪರಿಣತಿ ಮುಖ್ಯ ಇವರು ಎಲ್ಲಾ ವಿಷಯಗಳಲ್ಲಿ ಸಂಪೂರ್ಣ ತಿಳಿದವರಲ್ಲರಾಗಿಲ್ಲದಿದ್ದರೂ ಕೂಡಾ ಎಲ್ಲಾ ಬಗೆಯ ವ್ಯಾಜ್ಯೆ ಗಳ ಸ್ವರೂಪದ ಬಗೆಗಿನ ತಿಳುವಳಿಕೆ ಹೊಂದಿರುತ್ತಾರೆಂದು ಹೇಳುತ್ತಾ ಅತಿಥಿಗಳಿಗೆ ಧನ್ಯವಾದವನ್ನರ್ಪಿಸಿದರು. ನೆನಪಿನ ಕಾಣಿಕೆಯನ್ನಿತ್ತು ಗೌರವಿಸಲಾಯಿತು. ಸಹನಾ ಮತ್ತು ಪ್ರಜ್ಞಾ ಪ್ರಾರ್ಥಿಸಿ , ಶಾಶ್ವತ್ ಕೆ. ಕಾರ್ಯಕ್ರಮವನ್ನು ಸಂಪನ್ನಿಸಿದರು.

LEAVE A REPLY

Please enter your comment!
Please enter your name here