ವಿವೇಕಾನಂದ ವಸತಿ ನಿಲಯಗಳಲ್ಲಿ ಓಣಂ ಹಬ್ಬ ಆಚರಣೆ

0
413

ವರದಿ: ಹರ್ಷಾ ರಾವ್
ವಿವೇಕಾನಂದ ವಸತಿ ನಿಲಯದಲ್ಲಿ ದಿನಾಂಕ 11-09-2016 ರಂದು ನೆರೆಯ ಕೇರಳ ರಾಜ್ಯದ ಸಂಸ್ಕೃತಿಯ ಪ್ರತೀಕವಾದ ಓಣಂ ಹಬ್ಬದ ಸಂದರ್ಭದಲ್ಲಿ ಬಲಿ ಚಕ್ರವರ್ತಿಯನ್ನು ಹೂಗಳಿಂದ ಸ್ವಾಗತಿಸಿದರು.
 
 
 
ಇದನ್ನು ಕೇರಳೀಯರು ಪೂಕ್ಕಳಂ ಎನ್ನುತ್ತಾರೆ. ಈ ಹಬ್ಬವನ್ನು ವಿವೇಕಾನಂದ ವಸತಿ ನಿಲಯಗಳಲ್ಲಿ ಆಚರಿಸಲಾಯಿತು. ಮುಖ್ಯ ನಿಲಯ ಪಾಲಕರಾದ ಡಾ|| ಶ್ರೀಧರ್ ನಾಯಕ್ ಓಣಂ ಹಬ್ಬದ ಶುಭಾಶಯಗಳನ್ನು ಕೋರುತ್ತಾ ,ಇಂಥಹ ಆಚರಣೆಗಳು ಇಂದಿಗೂ ಯುವಪೀಳಿಗೆ ಮುಂದುವರೆಸುತ್ತಾ ಬಂದರೆ ಮತ್ತೊಮ್ಮೆ ನಮ್ಮ ಮಾಸಿಹೋಗಬಹುದಾದ ಆಚರಣೆಗಳು ಮರುಕಳಿಸಲು ಸಹಾಯವಾಗುತ್ತವೆ ಹಾಗೂ ಭಾರತದ ಭವ್ಯ ಪರಂಪರೆ ಎಷ್ಟೋ ಜನರಿಗೆ ತಿಳಿದಿಲ್ಲ ಇವನ್ನೆಲ್ಲ ಹಿಂದೊಮ್ಮೆ ಆಚರಿಸುತ್ತಿದ್ದ ನಾವೇ ಪುನಃ ಚೇತನಗೊಂಡು ಇದನ್ನು ಮನವರಿಕೆ ಮಾಡಬೇಕಾದ ಪರಿಸ್ಥಿತಿಯಲ್ಲಿ ಇಂಥಹ ಆಚರಣೆಗಳು ಪೂರಕವೆಂದರು.
 
 
 
ಕಾರ್ಯಕ್ರಮದ ಸಂದರ್ಭದಲ್ಲಿ ನಿಲಯ ಪಾಲಕಿ ಮೀನಾಕ್ಷಿ ಮಾತಾಜಿ , ನಿಲಯ ಪಾಲಕರುಗಳಾದ ಹರೀಶ್ ರಾವ್, ಗೋವಿಂದರಾಜ್ ಶರ್ಮ ಹಾಗೂ ನಿಲದ ಎಲ್ಲಾ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.ವಿದ್ಯಾರ್ಥಿನಿಯರು ಓಣಂ ಗೀತೆಯನ್ನು ಹಾಡಿದರು.

LEAVE A REPLY

Please enter your comment!
Please enter your name here