ವಿವಿ ಸರ್ವರ್ ಹ್ಯಾಕ್

0
253

ಬೆಂಗಳೂರು ಪ್ರತಿನಿಧಿ ವರದಿ
ಜಯನಗರದಲ್ಲಿರುವ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಿಗಳ ವಿಶ್ವವಿದ್ಯಾಲಯದ ಎಕ್ಸಾಮ್ ಸರ್ವರ್ ಹ್ಯಾಕ್ ಆಗಿದೆ. ವೆಬ್ ಸೈಟ್ ಮಾಡಿರುವ ದುಷ್ಕರ್ಮಿಗಳು ಮೆಸೇಜ್ ಕಳುಹಿಸಿದ್ದಾರೆ.
 
 
ಸರ್ವರ್ ಸರಿಹೋಗಬೇಕಾದರೆ ನಮ್ಮನ್ನು ಸಂಪರ್ಕಿಸಿ ಎಂದು ವಿವಿ ವೆಬ್ ಸೈಟ್ ನಲ್ಲಿ ಹ್ಯಾಕರ್ಸ್ ಸಂದೇಶ ರವಾನಿಸಿದ್ದಾರೆ.
ಈ ಬಗ್ಗೆ ವಿವಿ ಸೈಬರ್ ಕ್ರೈಮ್ ವಿಭಾಗಕ್ಕೆ ದೂರು ನೀಡಲಾಗಿದೆ. ನ್ಯಾಷನಲ್ ಇನ್ಫಾಮೆಟಿಕ್ ಸೆಂಟರ್ (ಎನ್ ಐಸಿ) ನಿರ್ವಹಣೆಯಲ್ಲಿದ್ದ ವಿವಿಯ ಎಕ್ಸಾಮ್ ಸರ್ವರ್ ಹ್ಯಾಕ್ ಆಗಿದೆ. ಸದ್ಯ ಪರ್ಯಾಯ ವೆಬ್ ಸೈಟ್ ವ್ಯವಸ್ಥೆ ಮಾಡಲು ವಿವಿ ಸಿದ್ಧತೆ ಮಾಡಿಕೊಂಡಿದೆ.

LEAVE A REPLY

Please enter your comment!
Please enter your name here