ಉದ್ಯೋಗರಾಜ್ಯವಾರ್ತೆ

ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಉದ್ಯೋಗ ವಾರ್ತೆ
ಪ್ರತಿಭಾವಂತ ಕಾನೂನು ಪದವೀಧರರಿಗೆ, ಕಾನೂನು ವೃತ್ತಿಗೆ ಸೇರ್ಪಡೆ, ಕಾನೂನು ತಕರಾರು ಅರ್ಜಿಗಳ ವಿವಿಧ ರೂಪಗಳು, ಕಾನೂನಿನ ವಿವಿಧ ಶಾಖೆಗಳು ಮತ್ತು ನ್ಯಾಯಾಲಯದ ಕಾರ್ಯವಿಧಾನಗಳ ಪರಿಚಯ ಮಾಡಿಕೊಡುವ ಸಲುವಾಗಿ ಹಾಗೂ ನವ ಕಾನೂನು ಪದವೀಧರರಿಗೆ ಉತ್ತೇಜನ ನೀಡುವ ಸಲುವಾಗಿ, ಕಾನೂನು ಪದವಿ (ಕನಿಷ್ಠ ಶೇ 50 ಅಂಕಗಳು) ಹೊಂದಿರುವಂತಹ ಆಸಕ್ತ ಅಭ್ಯರ್ಥಿಗಳಿಂದ 29 ಲಾ ಕ್ಲರ್ಕ್ ಮತ್ತು ರೀಸರ್ಚ್ ಅಸಿಸ್ಟೆಂಟ್ಸ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
 
ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ದಿನಾಂಕ: 01-01-2014 ರಂದು ಅಥವಾ ನಂತರ ಕರ್ನಾಟಕ ಸ್ಟೇಟ್ ಬಾರ್ ಕೌನ್ಸಿಲ್‍ನಲ್ಲಿ ನೊಂದಾಯಿಸಿರಬೇಕು ಮತ್ತು ಅರ್ಜಿದಾರರ ವಯಸ್ಸು ಅರ್ಜಿ ಸಲ್ಲಿಸುವ ಕೊನೆಯ ದಿನದಂದು 30 ವರ್ಷಗಳನ್ನು ಮೀರಿರಬಾರದು. ಭರ್ತಿ ಮಾಡಿರುವ ಅರ್ಜಿಗಳನ್ನು ಸ್ವೀಕರಿಸಲು ಕೊನೆಯ ದಿನಾಂಕ 30ನೇ ಏಪ್ರಿಲ್ 2016. ಸವಿಸ್ತಾರವಾದ ಅಧಿಸೂಚನೆಗೆ www.karnatakajudiciary.kar.nic.in ಗೆ ಭೇಟಿ ನೀಡಿ ಎಂದು ರಾಜ್ಯ ಉಚ್ಛ ನ್ಯಾಯಾಲಯದ ಮಹಾವಿಲೇಖನಾಧಿಕಾರಿಗಳಾದ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹ ತಿಳಿಸಿದ್ದಾರೆ.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here