ವಿವಿಧ ಸಾಧಕರಿಗೆ ಪದ್ಮ ಪ್ರಶಸ್ತಿ

0
510

ರಾಷ್ಟ್ರೀಯ ಪ್ರತಿನಿಧಿ ವರದಿ
ಗಣರಾಜ್ಯೋತ್ಸವ ದಿನದಂದು ಶ್ರೇಷ್ಠ ಸಾಧಕರಿಗೆ ನೀಡಲಾಗುವ ಪದ್ಮ ಪ್ರಶಸ್ತಿಗಳ ಪಟ್ಟಿ ಪ್ರಕಟವಾಗಿದೆ.ಭಾರತ ರತ್ನ ಎಂಬುದ ದೇಶದ ಅತ್ಯುಚ್ಚ ನಾಗರಿಕ ಪ್ರಶಸ್ತಿಯಾಗಿದೆ. ಪದ್ಮವಿಭೂಷಣ, ಪದ್ಮಭೂಷಣ ಹಾಗೂ ಪದ್ಮಶ್ರೀ ಪ್ರಶಸ್ತಿಗಳು ನಂತರದ ಸ್ಥಾನ ಹೊಂದಿವೆ. ವಿವಿಧ ಪದ್ಮ ಪ್ರಶಸ್ತಿಗಳಿಗೆ ಶಿಫಾರಸು ಮಾಡಲಾಗಿದ್ದ 1,730 ಜನರ ಪೈಕಿ ಕೇಂದ್ರ ಸರಕಾರ 150 ಮಂದಿಯನ್ನು ಶಾರ್ಟ್’ಲಿಸ್ಟ್ ಮಾಡಿತ್ತು. ಈಗ, ಇವರಲ್ಲಿ 89 ಮಂದಿಗೆ ಪದ್ಮಪ್ರಶಸ್ತಿ ನೀಡಲು ಸರಕಾರ ನಿರ್ಧರಿಸಿದೆ.
 
 
ಈ ಬಾರಿಯ ಪದ್ಮ ಪ್ರಶಸ್ತಿಗಳ ಸಂಭವನೀಯ ಪಟ್ಟಿ:
ಪದ್ಮವಿಭೂಷಣ ಪ್ರಶಸ್ತಿ:
* ಶರದ್ ಪವಾರ್, ಎನ್’ಸಿಪಿ ಮುಖ್ಯಸ್ಥ
* ಮುರಳಿ ಮನೋಹರ್ ಜೋಷಿ, ಬಿಜೆಪಿ ಹಿರಿಯ ಮುಖಂಡ
* ಕೆಜೆ ಜೇಸುದಾಸ್, ಗಾಯಕ
* ಪ್ರೊ. ಯು.ರಾಮಚಂದ್ರರಾವ್, ವಿಜ್ಞಾನಿ
* ದಿವಂಗತ ಮುಫ್ತಿ ಮೊಹಮ್ಮದ್ ಸಯೀದ್, ಮಾಜಿ ಜಮ್ಮು-ಕಾಶ್ಮೀರ ಸಿಎಂ
* ದಿವಂಗತ ಪಿಎ ಸಾಂಗ್ಮ, ಮಾಜಿ ಲೋಕಸಭಾ ಸ್ಪೀಕರ್ ಹಾಗೂ ಕಾಂಗ್ರೆಸ್ ಮುಖಂಡ
* ದಿವಂಗತ ಸುಂದರ್ ಲಾಲ್ ಪಾಟ್ವಾ, ಮಾಜಿ ಮ.ಪ್ರ. ಸಿಎಂ
ಪದ್ಮಭೂಷಣ ಪ್ರಶಸ್ತಿ:
* ವಿಶ್ವಮೋಹನ್ ಭಟ್, ಶಾಸ್ತ್ರೀಯ ಸಂಗೀತಗಾರ
* ಪ್ರೊ. ದೇವಿ ಪ್ರಸಾದ್ ದ್ವಿವೇದಿ, ಸಾಹಿತಿ
* ತೆಹೆಮ್’ಟಾನ್ ಉಡವಾಡಿಯಾ, ವೈದ್ಯಕೀಯ ಕ್ಷೇತ್ರ
* ರತ್ನ ಸುಂದರ್ ಮಹಾರಾಜ್, ಆದ್ಯಾತ್ಮ
* ಸ್ವಾಮಿ ನಿರಂಜನಾನಂದ ಸರಸ್ವತಿ, ಯೋಗಸಾಧಕರು
* ಹೆಚ್.ಆರ್.ಹೆಚ್. ಮಹಾ ಚಕ್ರಿ ಸಿರಿಂಧೋರ್ನ್ (ವಿದೇಶ)
* ದಿವಂಗತ ಚೋ.ರಾಮಸ್ವಾಮಿ (ಸಾಹಿತ್ಯ ಮತ್ತು ಪತ್ರಿಕೋದ್ಯಮ)
ಪದ್ಮಪ್ರಶಸ್ತಿ:
*ವಿರಾಟ್ ಕೊಹ್ಲಿ, ಕ್ರಿಕೆಟ್ ಆಟಗಾರ
* ದೀಪಾ ಮಲಿಕ್, ಪ್ಯಾರಾಲಿಂಪಿಕ್ಸ್ ಪದಕ ವಿಜೇತೆ
* ದೀಪಾ ಕರ್ಮಾಕರ್, ಜಿಮ್ನಾಸ್ಟ್ ಪಟು
* ವಿಕಾಸ್ ಗೌಡ, ಶಾಟ್’ಪುಟ್-ಡಿಸ್ಕಸ್ ಥ್ರೋ ಆಟಗಾರ
* ಪಿಆರ್ ಶ್ರೀಜೇಶ್, ಹಾಕಿ ಗೋಲ್’ಕೀಪರ್
* ಡಾ. ಸುನೀತಿ ಸೋಲೋಮನ್, ಏಡ್ಸ್ ಸಂಶೋಧಕ
* ಭಾವನಾ ಸೋಮಯಾ, ಸಿನಿಮಾ ಪತ್ರಕರ್ತೆ
* ಅನುರಾಧಾ ಪೊದ್ವಾಲ್, ಗಾಯಕಿ
* ಸಾಕ್ಷಿ ಮಲಿಕ್, ಒಲಿಂಪಿಕ್ ಪದಕ ವಿಜೇತೆ ಕುಸ್ತಿ ಆಟಗಾರ್ತಿ
* ಸಂಜೀವ್ ಕಪೂರ್, ಬಾಣಸಿಗ ತಜ್ಞ
* ಡಾ. ನರೇಂದ್ರ ಕೊಹ್ಲಿ, ಸಾಹಿತಿ
* ಕರೀಮುಲ್ ಹಕ್, ಸಾಮಾಜಿಕ ಕಾರ್ಯಕರ್ತ
* ಪ್ರೊ.ಹರಕಿಶನ್ ಸಿಂಗ್, ವೈದ್ಯಕೀಯ ಕ್ಷೇತ್ರ
* ಅರುಣಾ ಮೊಹಾಂತಿ, ಕಲಾವಿದರು
* ಟಿಕೆ ಮೂರ್ತಿ, ಕಲಾವಿದರು
* ಸುಬ್ರೊತೋ ದಾಸ್, ವೈದ್ಯಕೀಯ ಕ್ಷೇತ್ರ
* ಕೈಲಾಷ್ ಖೇರ್, ಗಾಯಕ
* ಅರುಣ್ ಕುಮಾರ್ ಶರ್ಮಾ, ಭೂಗರ್ಭಶಾಸ್ತ್ರಜ್ಞ
* ಲಕ್ಷ್ಮೀ ವಿಶ್ವನಾಥನ್, ನರ್ತಕಿ
* ಬಸಂತಿ ಬಿಶ್ತ್, ಜಾನಪದ ಕಲಾವಿದೆ
* ಮೀನಾಕ್ಷಿ ಅಮ್ಮ, ಆತ್ಮರಕ್ಷಣೆ ಪಟು
* ಮರಿಯಪ್ಪನ್ ತಂಗವೇಲು, ಕ್ರೀಡಾಪಟು
* ಭಾರತಿ ವಿಷ್ಣುವರ್ಧನ್, ನಟಿ
* ಪ್ರೊ. ಜಿ.ವೆಂಕಟಸುಬ್ಬಯ್ಯ, ನಿಘಂಟು ತಜ್ಞ
* ಸುಕ್ರಿ ಬೊಮ್ಮಗೌಡ, ಜಾನಪದ ಗಾಯಕ
* ಗಿರೀಶ್ ಭಾರದ್ವಜ್, ಸಾಮಾಜಿಕ ಕಾರ್ಯಕರ್ತ
ಪ್ರಶಸ್ತಿ ಪಡೆದ ಕನ್ನಡಿಗರು
* ಪ್ರೊ. ಯುಆರ್ ರಾವ್, ವಿಜ್ಞಾನಿ – ಪದ್ಮವಿಭೂಷಣ
* ವಿಕಾಸ್ ಗೌಡ, ಕ್ರೀಡಾಪಟು – ಪದ್ಮಶ್ರೀ
* ಭಾರತಿ ವಿಷ್ಣುವರ್ಧನ್, ನಟಿ – ಪದ್ಮಶ್ರೀ
* ಪ್ರೊ. ಜಿ.ವೆಂಕಟಸುಬ್ಬಯ್ಯ, ನಿಘಂಟು ತಜ್ಞ – ಪದ್ಮಶ್ರೀ
* ಸುಕ್ರಿ ಬೊಮ್ಮಗೌಡ, ಜಾನಪದ ಗಾಯಕ – ಪದ್ಮಶ್ರೀ
* ಶೇಖರ್ ನಾಯಕ್, ಅಂಧರ ಕ್ರಿಕೆಟ್ – ಪದ್ಮಶ್ರೀ
* ಗಿರೀಶ್ ಭಾರದ್ವಜ್, ಸಾಮಾಜಿ ಕಾರ್ಯಕರ್ತ – ಪದ್ಮಶ್ರೀ
ಮೇಲಿನ ಪದ್ಮಶ್ರೀ ಪ್ರಶಸ್ತಿಗಳ ಪಟ್ಟಿ ಅಪೂರ್ಣವಾಗಿದೆ. ಒಟ್ಟು 75 ಮಂದಿಗೆ ಪದ್ಮಶ್ರೀ ಪ್ರಶಸ್ತಿ ಸಂದಾಯವಾಗಲಿದ್ದು, ಅವರ ಪೈಕಿ 26 ಜನರ ಹೆಸರು ಮೇಲಿನ ಪಟ್ಟಿಯಲ್ಲಿದೆ. ಇನ್ನು, ಏಳೆಂಟು ಕನ್ನಡಿಗರಿಗಷ್ಟೇ ಈ ಬಾರಿ ಪದ್ಮಪ್ರಶಸ್ತಿಗಳು ಲಭಿಸಿವೆ.

LEAVE A REPLY

Please enter your comment!
Please enter your name here