ವಿವಾಹಕ್ಕೆ 2.5ಲಕ್ಷ ಡ್ರಾ ಮಾಡಲು ಅವಕಾಶ

0
461

ನವದೆಹಲಿ ಪ್ರತಿನಿಧಿ ವರದಿ
500, 1000ದ ಹಳೇನೋಟು ನಿಷೇಧದ ನಂತರ ಜನರ ಸಮಸ್ಯೆ ಬಗೆಹರಿಸಲು ಮತ್ತೊಂದು ಕ್ರಮ ಕೈಗೊಳ್ಳಲಾಗಿದೆ. 500ರೂ., 1000ರೂ, ನೋಟು ಚಲಾವಣೆ ನಿಷೇಧ ಹಿನ್ನೆಲೆಯಲ್ಲಿ ವಿವಾಹ ಸಮಾರಂಭಕ್ಕೆ ಮದುವೆ ಮಾಡುವವರು ಒಂದೇ ಬಾರಿಗೆ 2.5ರೂ. ಲಕ್ಷ ಡ್ರಾ ಮಾಡಬಹುದಾಗಿದೆ ಎಂದು ಆರ್ಥಿಕ ಸಚಿವಾಲಯದ ಕಾರ್ಯದರ್ಶಿ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.
 
 
 
ನವದೆಹಲಿಯಲ್ಲಿ ನಡೆದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಕಾರ್ಯದರ್ಶಿ ಶಕ್ತಿಕಾಂತ್ ದಾಸ್ ಅವರು, ಮದುವೆಗಾಗಿ ಹಣ ಡ್ರಾ ಮಾಡಲು ಕೆವೈಸಿ ಅನಿವಾರ್ಯವಾಗಿದೆ. ಯಾವುದೇ ಒಂದು ಖಾತೆಯಿಂದ ಎರಡೂವರೆ ಲಕ್ಷ ಡ್ರಾ ಮಾಡಲು ಅವಕಾಶ ನೀಡಲಾಗಿದೆ. ವಧು-ವರರ, ತಂದೆ-ತಾಯಿ, ಸಹೋದರ-ಸಹೋದರಿ ಖಾತೆಯಿಂದ ಹಣ ಡ್ರಾ ಮಾಡಬಹುದು ಎಂದಿದ್ದಾರೆ.
 
 
 
ಹಾಗೆಯೇ ರೈತರು, ಕೃಷಿಕರು 1 ವಾರದಲ್ಲಿ 25 ಸಾವಿರ ರೂಪಾಯಿವರೆಗೆ ಡ್ರಾ ಮಾಡಬಹುದು. ಬೆಳೆಸಾಲ ಖಾತೆಗೆ ಬಂದ ಹಣವನ್ನು ವಾರಕ್ಕೆ 25 ಸಾವಿರದವರೆಗೆ ಡ್ರಾ ಮಾಡಬಹುದು. ಹಣ ಪಡೆಯುವ ರೈತ ತನ್ನದೇ ಖಾತೆಗೆ, ಸಾಲದ ಹಣ ಬಂದದ್ದನ್ನ ಮಾತ್ರ ಪಡೆಯಬಹುದು ಎಂದು ತಿಳಿಸಿದ್ದಾರೆ.
ಎಕ್ಸ್ ಚೇಂಚ್ ಲಿಟ್ ಬದಲಾವಣೆ:
ಹಳೇನೋಟು ಕೊಟ್ಟು ಹೊಸ ನೋಟು ಪಡೆಯುವ ವಿನಿಮಯದ ಲಿಮಿಟ್ ನ್ನು ಬದಲಾವಣೆ ಮಾಡಲಾಗಿದೆ. ನಾಳೆಯಿಂದ ಒಬ್ಬ ವ್ಯಕ್ತಿಗೆ ಒಂದು ದಿನ ಬ್ಯಾಂಕ್ ಗಳಲ್ಲಿ ಗರಿಷ್ಠ 2000ರೂ. ಮಾತ್ರ ಬದಲಾವಣೆಗೆ ಅವಕಾಶ ನೀಡಲಾಗಿದೆ. ಹಳೆಯ ನೋಟು ಬದಲಾವಣೆ 4500ರೂ.ನಿಂದ 2000 ರೂಪಾಯಿಗೆ ಖಡಿತಗೊಳಿಸಲಾಗಿದೆ ಎಂದು ಶಕ್ತಿಕಾಂತ್ ದಾಸ್ ಗೋಷ್ಠಿಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here