ವಿರಾಜಪೇಟೆಯಲ್ಲಿ ಮಂಗಲ ಗೋ ಯಾತ್ರಾ ಸಭೆ

0
404

ನಮ್ಮ ಪ್ರತಿನಿಧಿ ವರದಿ
ರಾಸಾಯನಿಕ ಗೊಬ್ಬರಗಳಿಗೆ ಪ್ರೋತ್ಸಾಹ ನೀಡಿದರೆ ಗೋವಂಶದ ನಾಶದ ಜೊತೆಗೆ ಭೂಮಿಯೂ ಸತ್ವವನ್ನು ಕಳೆದುಕೊಳ್ಳುತ್ತದೆ. ಸರ್ಕಾರಗಳು ರಾಸಾಯನಿಕ ಗೊಬ್ಬರಗಳಿಗೆ ಸಬ್ಸಿಡಿ ನೀಡಬೇಡುವ ಬದಲು ದೇಶೀ ಗೋವುಗಳ ಸಂರಕ್ಷಣೆಗೆ ಸಹಕಾರ ನೀಡಬೇಕು ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಸರ್ಕಾರಕ್ಕೆ ಆಗ್ರಹಿಸಿದರು.
 
mata_mangalyatra1
 
ವಿರಾಜಪೇಟೆಯ ತಾಲ್ಲೂಕು ಮೈದಾನದಲ್ಲಿ ನಡೆದ ಮಂಗಲ ಗೋಯಾತ್ರೆಯ ಸುರಭಿ ಸಂತ ಸಂಗಮದಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಕೊಡಗು ಹಾಗೂ ಗೋವು ಭಗವಂತನ ಸೃಷ್ಟಿಯ ಅದ್ಭುತವಾಗಿದ್ದು, ಗೋವು – ಕೊಡಗು ಒಟ್ಟಿಗಿರಬೇಕು. ಬೇರೆಬೇರೆ ಪ್ರದೇಶದಲ್ಲಿ ಇರುವಂತೆ ಇಲ್ಲಿ ನೀರಿನ ಸಮಸ್ಯೆ – ಮೇವಿನ ಸಮಸ್ಯೆ ಇಲ್ಲ, ಇದನ್ನು ಕೊಡಗಿನ ಜನ ಸದುಪಯೋಗ ಪಡಿಸಿಕೊಂಡು ಗೋಸಂರಕ್ಷಣೆಗೆ ಮುಂದಾಗಬೇಕು ಎಂದು ಕರೆನೀಡಿದರು.
 
 
ಮಿಶ್ರತಳಿಗಳಿಂದ ಹುಟ್ಟುವ ಗಂಡು ಕರುಗಳನ್ನು ಏನು ಮಾಡ್ತೀರಿ? ಹೆಣ್ಣು ಕರುಗಳ ಸಂತಾನದ ಅವಧಿ ಮುಗಿದ ಮೇಲೆ ಅದನ್ನೇನು ಮಾಡಲಾಗುತ್ತದೆ? ಗೋವಿಗೆ ಕೃತಕಗರ್ಭಧಾರಣೆ ಮಾಡುವ ನೀವು, ಮನುಷ್ಯರಿಗೂ ಕೃತಕಗರ್ಭಧಾರಣೆ ಮಾಡಲು ಒಪ್ಪುತ್ತಿರೇ? ಎಂದು ಸರ್ಕಾರವನ್ನು ಪ್ರಶ್ನಿಸಿದರು.
 
 
ಗೋಮಾತೆಯ ತ್ಯಾಜ್ಯ ನಮಗೆ ಪೂಜ್ಯ, ಯಾರು ಗೋವನ್ನು ಸಾಕುತ್ತಾರೋ, ಯಾರು ಗೋವನ್ನು ಸಲಹುತ್ತಾರೋ , ಅವರಿಗೆ ಸಮಾಜದಲ್ಲಿ ಅಗ್ರಸ್ಥಾನ ಸಿಗುವಂತಾಗಬೇಕು. ಭಾರತದ ಜೀವವಾದ ಗೋವನ್ನು ರಕ್ಷಣೆಗಾಗಿ‌ ಕೊಡಗಿನ ವೀರತನ, ಶೌರ್ಯತನ ಮೇಲೆದ್ದು ಬರಲಿ ಎಂದು ಆಶಂಸಿದರು.
 
ಶಾಂತಮಲ್ಲಿಕಾರ್ಜುನ ಸ್ವಾಮಿಜಿ, ಕಲಂಚೇರಿ ಮಠ, ಅರಮೇರಿ ಅವರು ಮಾತನಾಡಿ ಜನಸಂಖ್ಯೆ ಬೆಳದಂತೆ ರಾಸಾಯನಿಕದತ್ತ ಮುಖಮಾಡಿ ಜಗತ್ತು ರೋಗಗ್ರಸ್ತವಾಗಿದೆ, ಇದಕ್ಕೆ ಪ್ರತಿಯಾಗಿ ರಾಘವೇಶ್ವರ ಶ್ರೀಗಳ ನೇತೃತ್ವದಲ್ಲಿ ಗೋಆಧಾರಿತ ಜೀವನವನ್ನು ನಿರ್ಮಿಸುವ ಸಲುವಾಗಿ ತೊಡಗಿಸಿಕೊಂಡಿದ್ದಾರೆ.
ಕೇವಲ ಗೋವಿನ ಮೂತ್ರದಲ್ಲಿ‌ ಚಿನ್ನ ಅಲ್ಲ, ಗೋವನ್ನು ಸರಿಯಾಗಿ ಪೋಷಿಸಿದರೆ ನಮ್ಮ ಬದುಕೇ ಚಿನ್ನವಾಗುತ್ತದೆ ಎಂದರು.
 
 
ಪೊನ್ನಂಪೇಟೆ ಶ್ರೀ ರಾಮಕೃಷ್ಣಾಶ್ರಮದ ಧರ್ಮಾತ್ಮಾನಂದಜಿ ಮಹರಾಜ್ ಮಾತನಾಡಿ, ರಷ್ಯ ಇತ್ಯಾದಿ ಹೊರದೇಶಗಳಲ್ಲಿಯೂ ಗೋಮಯದಲ್ಲಿರುವ ಶಕ್ತಿಯನ್ನು ಕಂಡುಕೊಂಡು ಬಳಸುತ್ತಿದ್ದಾರೆ, ಸಗಣಿ ಸಾರಿಸಿದ ಜಾಗದಲ್ಲಿ ಇನಫೆಕ್ಷನ್ ಉಂಟಾಗುವುದಿಲ್ಲ ಎಂದರು.
 
 
ಪೊನ್ನಂಪೇಟೇ ಶ್ರೀ ರಾಮಕೃಷ್ಣಾಶ್ರಮದ ಬೋಧಸ್ವರೂಪಾನಂದಜಿ, ಉತ್ತರ ಕಾಶಿ ಕಪಿಲಾಶ್ರಮದ ಶ್ರೀರಾಮಚಂದ್ರ ಗುರೂಜಿ ಸಭೆಯಲ್ಲಿ ಸಾನ್ನಿಧ್ಯವಹಿಸಿದ್ದರು. ದೇಶೀ ಹಸು ಸಾಕುತ್ತಿರುವವರು ಹಾಗೂ ಸಾವಯವ ಕೃಷಿಕರಾದ ಎಂ.ಕೆ ನಂದ, ರವೀಕಾಂತ್, ಮಾದಪ್ಪ, ದಮಯಂತಿ ಮುಂತಾದವರನ್ನು ರಾಘವೇಶ್ವರಭಾರತೀ ಶ್ರೀಗಳು ಸನ್ಮಾನಿಸಿದರು,
ಗೋವಿನ ಕುರಿತಾಗಿ ಶಾಲೆಗಳಲ್ಲಿ ನಡೆಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರನ್ನು ಪ್ರೋತ್ಸಾಹಿಸಲಾಯಿತು.
ಕಾರ್ಯಕ್ರಮದಲ್ಲಿ ಎಸ್ ವಿ ನರಸಿಂಹನ್, ಶ್ರೀಮತಿ ಕಾಂತಿ ಸತಿಶ್, ರೀನಾ ಪ್ರಕಾಶ್, ಸಿಎ ಈಶ್ವರ ಭಟ್ ಮುಂತಾದವರು ಭಾಗವಹಿಸಿದ್ದರು. ಸಭಾ ಕಾರ್ಯಕ್ರಮಕ್ಕೂ ಮೊದಲು ವಿರಾಜಪೇಟೆಯ ಪ್ರಮುಖ ಮಾರ್ಗಗಳಲ್ಲಿ ಭವ್ಯ ಶೋಭಾಯಾತ್ರೆ ನಡೆಯಿತು.

LEAVE A REPLY

Please enter your comment!
Please enter your name here