ವಿಮೆ ಆಸೆಗೆ ಸ್ವಂತ ಅಂಗಡಿಗೆ ಬೆಂಕಿ ಇಟ್ಟ

0
143

ಬೆಂಗಳೂರು ಪ್ರತಿನಿಧಿ ವರದಿ
ಬೆಂಗಳೂರಿನ ಚಿಕ್ಕಪೇಟೆಯಲ್ಲಿ ನಡೆದ ಅಗ್ನಿ ಅವಘಡ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಅಂಗಡಿ ಮಾಲೀಕನೇ ಇನ್ಶೂರೆನ್ಸ್ ಹಣಕ್ಕಾಗಿ ಅಂಗಡಿಗೆ ಬೆಂಕಿ ಹಚ್ಚಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ.
 
 
ಇದರಿಂದ ಎಲೆಕ್ಟ್ರಿಕ್ ಶಾಪ್ ಮಾಲೀಕ ನರೇಂದ್ರ ಲಾಲ್ ಚೌಧರಿಯನ್ನು ಚಿಕ್ಕಪೇಟೆ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮಾಲೀಕ ತನ್ನ ಸ್ನೇಹಿತರಿಂದ ತನ್ನದೇ ಅಂಗಡಿಗೆ ಬೆಂಕಿ ಹಚ್ಚಿಸಿದ್ದಾನೆ. ದುರಂತದಲ್ಲಿ ಮಾಲೀಕ ನರೇಂದ್ರನ ಸ್ನೇಹಿತ ಸಜೀವ ದಹನವಾಗಿದ್ದಾನೆ. ಸಜೀವದಹನವಾದ ಗಜೇಂದ್ರ(27) ಟ್ಯಾಕ್ಸಿ ಚಾಲಕನಾಗಿದ್ದ. ಗಜೇಂದ್ರನ ಜೊತೆಗೆ ಬಂದಿದ್ದ ಅರುಣ್ ಕುಮಾರ್ ಗೆ ಗಾಯಗಳಾಗಿದೆ. ಗಜೇಂದ್ರ, ಅರುಣ್ ಕುಮಾರ್, ನರೇಂದ್ರ ಲಾಲ್ ಸ್ನೇಹಿತರಾಗಿದ್ದರು.
 
 
ಗೆಳೆಯ ಮಾತನಂತೆ ಸ್ನೇಹಿತರಿಬ್ಬರು ಮಾಯಾ ಎಲೆಕ್ಟ್ರಿಕಲ್ ಅಂಗಡಿಗೆ ಬೆಂಕಿ ಹಚ್ಚಿದ್ದರು. ಯುಪಿಎಸ್ ಶಾರ್ಟ್ ಸರ್ಕ್ಯೂಟ್ ಆಗುವಂತೆ ಪ್ಲ್ಯಾನ್ ಮಾಡಿದ್ದರು. ಗಜೇಂದ್ರ ಮತ್ತು ಅರುಣ್ ಕುಮಾರ್ ಯುಪಿಎಸ್ ಗೆ ರಾಂಗ್ ಕನೆಕ್ಷನ್ ನೀಡಿದ್ದರು. ಈ ವೇಳೆ ಯುಪಿಎಸ್ ಬ್ಲ್ಯಾಸ್ಟ್ ಆಗಿ ಇಡೀ ಅಂಗಡಿಗೆ ಬೆಂಕಿ ತಗುಲಿದೆ. ಗಜೇಂದ್ರ ಸಜೀವ ದಹನವಾಗಿದ್ದು, ಅರುಣ್ ಕುಮಾರ್ ಗೆ ಗಾಯಗಳಾಗಿವೆ. ಮೃತ ಗಜೇಂದ್ರ ಮೂಲತಃ ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲೂಕಿನ ಐಕನಹಳ್ಳಿ ಗ್ರಾಮದ ನಿವಾಸಿಯಾಗಿದ್ದಾನೆ.

LEAVE A REPLY

Please enter your comment!
Please enter your name here