ವಿಮಾ ಯೋಜನೆ ವ್ಯಾಪ್ತಿ ಬದಲು

0
544

 
ಬೆಂಗಳೂರು ಪ್ರತಿನಿಧಿ ವರದಿ
ರಾಷ್ಟ್ರೀಯ ಸ್ವಾಸ್ಥ್ಯ ವಿಮಾ ಯೋಜನೆಯ ವ್ಯಾಪ್ತಿಯನ್ನು ಬದಲು ಮಾಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು ಟಿ ಖಾದರ್ ಹೇಳಿದ್ದಾರೆ.
 
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾರ್ಮಿಕ ಇಲಾಖೆಯ ವ್ಯಾಪ್ತಿಯಲ್ಲಿದ್ದ ಬಿಮಾ ಯೋಜನೆ ಅಡಿಯಲ್ಲಿ 1516 ಕಾಲೆಗಳಿಗೆ ಚಿಕಿತ್ಸೆ ನೀಡಲಾಗುವುದು. 806 ಆಸ್ಪತ್ರೆಗಳಲ್ಲಿ ಬಿಪಿಎಲ್ ಕಾರ್ಡುದಾರರಿಗೆ ನಗದು ರಹಿತ ಚಿಕಿತ್ಸೆ ಸೌಲಭ್ಯ ದೊರೆಯಲಿದೆ.
 
ಬಿಪಿಎಲ್ ಹೊರತುಪಡಿಸಿ ನರೇಗಾ ವ್ಯಾಪ್ತಿ ಕಾರ್ಮಿಕರಾದ ಬೀದಿ ಬದಿಯಲ್ಲಿನ ವ್ಯಾಪಾರಿಗಳು, ಚಿಂದಿ ಆಯುವವರು, ಎಲ್ಲಾ ನೈರ್ಮಲ್ಯ ಕಾರ್ಮಿಕರು, ಆಟೋ ಚಾಲಕರು, ರೈಲ್ವೆ ಕೂಲಿ ಕಾರ್ಮಿಕರು, ಬೀಡಿ ಫ್ಯಾಕ್ಟರಿ ಕಾರ್ಮಿಕರು, ನೇಕಾರರಿಗೂ ಸಹ ಯೋಜನೆಯಡಿ ಚಿಕಿತ್ಸೆ ಸೌಲಭ್ಯವಿದೆ.
ಶೇ.40ರಷ್ಟು ಅನುದಾನವನ್ನು ರಾಜ್ಯ ಸರ್ಕಾರ ನೀಡಲಿದ್ದು, ಉಳಿದ 60ರಷ್ಟು ಹಣವನ್ನು ಕೇಂದ್ರ ಸರ್ಕಾರ ನೀಡಲಿದೆ ಎಂದು ಸಚಿವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here