ವಿಮಾನ ಹೈಜಾಕ್

0
229

 
ಬ್ರೇಕಿಂಗ್ ನ್ಯೂಸ್
ಈಜಿಪ್ಟ್ ರಾಜಧಾನಿ ಕೈರೋಗೆ ತೆರಳುತ್ತಿದ್ದ ವಿಮಾನ ಹೈಜಾಕ್ ಆಗಿದೆ. ಈಜಿಪ್ಟ್ ಗೆ ಸೇರಿದ ವಿಮಾನ ಅಲೆಗ್ಸಾಂಡ್ರಿಯಾದಿಂದ ಕೈರೋದತ್ತ ತೆರಳುತ್ತಿತ್ತು.
ಹೈಜಾಕ್ ಆದ MS-181 ವಿಮಾನದಲ್ಲಿ 60 ಜನ ಪ್ರಯಾಣಿಸುತ್ತಿದ್ದರು. ಸದ್ಯ ವಿಮಾನ ಸೈಪ್ರಸ್ ಏರ್ ಪೋರ್ಟ್ ನಲ್ಲಿ ಲ್ಯಾಂಡ್ ಆಗಿದೆ. ಶಸ್ತ್ರಸಜ್ಜಿತ ವ್ಯಕ್ತಿಗಳು ವಿಮಾನದಲ್ಲಿ ಇರುವ ಬಗ್ಗೆ ಮಾಹಿತಿ ಇದೆ.
 
igft flight
 
ಈಜಿಪ್ಟ್ ವಿಮಾನದಲ್ಲಿ ಬಾಂಬ್ ಇರುವ ಕುರಿತು ಶಂಕೆಯಿದೆ. ಬಾಂಬ್ ನಿಷ್ಕ್ರಿಯದಳ ಸೈಪ್ರಸ್ ಏರ್ ಪೋರ್ಟ್ ಗೆ ತೆರಳಿದೆ.
ಅಪಹರಣಕಾರರು ರಾಜಕೀಯ ಆಶ್ರಯದ ಬೇಡಿಕೆ ಇಟ್ಟಿದ್ದಾರೆ. ಅಪಹರಣಕಾರರು ಬಲವಂತವಾಗಿ ಲ್ಯಾಂಡಿಂಗ್ ಮಾಡಿಸಿದ್ಧಾರೆ. ವಿಮಾನದಲ್ಲಿ 10 ಅಮೆರಿಕನ್, 8 ಬ್ರಿಟಿಷ್ ನಾಗರಿಕರು ಸೇರಿ 55 ಪ್ರಯಾಣಿಕರು, 5 ಸಿಬ್ಬಂದಿಗಳು ಇದ್ದಾರೆ ಎಂದು ಈಜಿಪ್ಟ್ ಸರ್ಕಾರ ಮಾಹಿತಿ ನೀಡಿದೆ.
 
 
 
 
ವಿಮಾನದೊಳಗಿದ್ದ ಬಹುತೇಕ ಪ್ರಯಾಣಿಕರನ್ನು ಬಿಡುಗಡೆ ಮಾಡಲಾಗಿದೆ. ಸಿಬ್ಬಂದಿ ವರ್ಗ ಮತ್ತು 5 ವಿದೇಶಿಯರನ್ನು ಬಿಟ್ಟು ಉಳಿದವರನ್ನು ಬಿಡುಗಡೆ ಮಾಡಲಾಗಿದೆ.
 
 
ಹೈಜಾಕರ್ ಷರತ್ತು:
ವಿಮಾನದತ್ತ ಪೊಲೀಸರು ಬಾರದಂತೆ ಹೈಜಾಕರ್ ಷರತ್ತು ಮಾಡಿದ್ದಾರೆ. ವಿಮಾನದತ್ತ ಬಂದರೆ ವಿಮಾನ ಸ್ಫೋಟಿಸುವುದಾಗಿ ಬೆದರಿಕೆಯೊಡ್ಡಿದ್ದಾರೆ. ಈಜಿಪ್ಟ್ ಮೂಲದ ಪ್ರಯಾಣಿಕನೇ ಹೈಜಾಕ್ ಮಾಡಿರುವ ಶಂಕೆಯಿದೆ.
 
 
ಹೈಜಾಕರ್ ಗುರುತು ಪತ್ತೆ
ಇಬ್ರಾಹಿಂ ಸಮಾಹ ಎಂಬಾತನಿಂದ ವಿಮಾನ ಅಪಹರಣವಾಗಿದೆ. ಈಜಿಪ್ಟ್ ಸರ್ಕಾರಿ ಮಾಧ್ಯಮದಿಂದ ಹೈಜಾಕರ್ ಗುರುತು ಪತ್ತೆಯಾಗಿದೆ.

LEAVE A REPLY

Please enter your comment!
Please enter your name here