ವಿಮಾನ ಹಾರಾಟದಲ್ಲಿ ವ್ಯತ್ಯಯ

0
503

ಬೆಂಗಳೂರು ಪ್ರತಿನಿಧಿ ವರದಿ
ಕೆಂಪೇಗೌಡ ಏರ್ ಪೋರ್ಟ್ ನಲ್ಲಿ ವಿಮಾನ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ. ಏರ್ ಪೋರ್ಟ್ ನ ಸುತ್ತಮುತ್ತ ದಟ್ಟ ಮಂಜು ಕವಿದ ಹಿನ್ನೆಲೆಯಲ್ಲಿ ವಿಮಾನ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಕೆಂಪೇಗೌಡ ಏರ್ ಪೋರ್ಟ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
 
 
 
 
ಇಂದು ಬೆಳಗ್ಗೆ 5 ಗಂಟೆಯಿಂದಲೂ ವಿಮಾನ ಹಾರಾಟದಲ್ಲಿ ಸಮಸ್ಯೆಯಾಗಿದೆ. ಈವರೆಗೆ 55 ದೇಶಿಯ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ. ಮೂರು ಅಂತಾರಾಷ್ಟ್ರೀಯ ವಿಮಾನಗಳು ಬೇರೆಡೆ ಡೈವರ್ಟ್ ಆಗಿದೆ. ಬೆಂಗಳೂರಿಗೆ ಬರಬೇಕಿದ್ದ ಫ್ಲೈಟ್ ಹೈದ್ರಾಬಾದ್ ಪ್ರಯಾಣ ಮಾಡಿದೆ. ಬ್ರಿಟಿಷ್ ಏರ್ ವೇಸ್ ಫ್ಲೈಟ್ ಸೇರಿ ವಿಮಾನಗಳು ಡೈವರ್ಟ್ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here