ವಿಮಾನ ಪತನ

0
370

 
ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಕೊಲಂಬಿಯಾದಲ್ಲಿ ಬ್ರೆಜಿಲ್ ವಿಮಾನ ಪತನವಾಗಿದೆ. ಫುಟ್ಬಾಲ್ ಆಟಗಾರರನ್ನು ಕರೆದೊಯ್ಯುತ್ತಿದ್ದ ವಿಮಾನ ಪತನವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ವಿಮಾನದಲ್ಲಿ ಪುಟ್ಬಾಲ್ ಆಟಗಾರರು ಸೇರಿ 81 ಜನರು ಪ್ರಯಾಣಿಸುತ್ತಿದ್ದರು.
 
 
 
ಮಾನ ಮೆಡೆಲ್ಲಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಪತನಗೊಂಡ ವಿಮಾನದಲ್ಲಿ 72 ಜನ ಪ್ರಯಾಣಿಕರು ಹಾಗೂ 9 ಸಿಬ್ಬಂದಿಗಳು ಪ್ರಯಾಣಿಸುತ್ತಿದ್ದರು. ಘಟನೆಯಲ್ಲಿ 10 ಜನರಿಗೆ ಗಾಯಗಳಾಗಿದ್ದು, 20ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
 
 
ಅಪಘಾತವಾದ ವಿಮಾನ ಬ್ರೆಜಿಲ್ ನಿಂದ ಕೊಲಂಬಿಯಾಕ್ಕೆ ತೆರಳುತ್ತಿತ್ತು.
ಬ್ರೆಜಿಲ್ಲಿನ ಚಾಪೆಕೊಯಿನ್ಸೆ ಫುಟ್ಬಾಲ್ ತಂಡ ಹಾಗೂ ಅಟ್ಲೆಟಿಕೋ ನ್ಯಾಷಿನಲ್ ನಡುವೆ ಕೋಪಾ ಸುಡಾಮೆರಿಕಾ ಫೈನಲ್ ಪಂದ್ಯ ಮೆಡೆಲ್ಲಿನ್ ನಲ್ಲಿ ನಿಗದಿಯಾಗಿತ್ತು.

LEAVE A REPLY

Please enter your comment!
Please enter your name here