ವಿಮಾನ ಪತನ: 16 ಸಾವು

0
293

ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಕರ್ಗಿಸ್ತಾನದಲ್ಲಿ ವಿಮಾನ ಪತನವಾಗಿದೆ. ಇಂದು ಬೆಳಗ್ಗೆ ಟರ್ಕಿಯ ಬೋಯಿಂಗ್ 747 ಕಾರ್ಗೋ ವಿಮಾನ ಕರ್ಗಿಸ್ತಾನದ ಬಿಶ್ಕೇಕ್ ವಿಮಾನ ನಿಲ್ದಾಣದ ಸಮೀಪ ಪತನವಾಗಿದ್ದು, ಸ್ಥಳದಲ್ಲೇ 16 ಪ್ರಯಾಣಿಕರು ದುರ್ಮರಣ ಹೊಂದಿದ್ದಾರೆ.
 
 
 
ಜನವಸತಿ ಪ್ರದೇಶದಲ್ಲಿ ವಿಮಾನ ಪತನವಾದ ಹಿನ್ನೆಲೆಯಲ್ಲಿ ಹಲವು ಮನೆಗಳು ಜಖಂಗೊಂಡಿದ್ದು, 32 ಮಂದಿ ಸಾವನ್ನಪ್ಪಿದ್ದು, ಹಲವರಿಗೆ ಗಾಯಗಳಾಗಿವೆ.
 
 
 
ವಿಮಾನ ದಟ್ಟವಾದ ಮಂಜಿನ ವಾತಾವರಣದಲ್ಲಿ ಇಳಿಯಲು ಪ್ರಯತ್ನಿಸಿದ ವೇಳೆ ಜನವಸತಿ ಪ್ರದೇಶದಲ್ಲಿ ಅಪ್ಪಳಿಸಿ ಬಿದ್ದಿದ್ದು ಹಲವಾರು ಮನೆಗಳು ನಾಶವಾಗಿವೆ. ವಿಮಾನ ಹಾಂಗಾಂಗ್ ನಿಂದ ಇಸ್ತಾನ್ ಬುಲ್ ಗೆ ತೆರಳುತ್ತಿತ್ತು.

LEAVE A REPLY

Please enter your comment!
Please enter your name here