ವಿಫಲವಾದ ನಗರ ಪ್ರದಕ್ಷಿಣೆ

0
436

 
ನಮ್ಮ ಪ್ರತಿನಿಧಿ ವರದಿ
ಉತ್ತಮ ಅವಕಾಶವಿದ್ದರೂ ಇಲ್ಲಿ ಸಕ್ಸಸ್ ಆಗಿಲ್ಲ `ಸಿಟಿ ಟೂರ್’
 
ಬೆಂಗಳೂರು, ಮೈಸೂರು ಮಾದರಿಯಲ್ಲಿ ಕರಾವಳಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಶುರು ಮಾಡಿದ ಎಸಿ ಸಿಟಿ ಟೂರ್ ಬಸ್ ಈಗ ಮೂಲೆಗುಂಪಾಗಿದೆ. ಹೌದು. ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಆರಂಭಿಸಿದ ಮಂಗಳೂರು ನಗರ ಪ್ರದಕ್ಷಿಣೆ ಸೌಲಭ್ಯ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ.
 
 
 
ನಗರ ಪ್ರದಕ್ಷಿಣೆಗಾಗಿ ಮೈಸೂರಿನಿಂದ ತರಿಸಿದ ಬಸ್, ಸದ್ಯ ಮಂಗಳೂರಿನ ಪ್ರವಾಸಿ ತಾಣಗಳನ್ನು ಪ್ರದರ್ಶಿಸುವ ಬದಲು ನಗರದ ಸರ್ಕಿಟ್ ಹೌಸ್ ನಲ್ಲಿ ಉಪಯೋಗ ಶೂನ್ಯಸ್ಥಿತಿಯಲ್ಲಿದೆ. ಸಿಟಿ ಟೂರ್ ಸೌಲಭ್ಯಕ್ಕೆ ಏ.17ರಂದು ಚಾಲನೆ ದೊರೆತ್ತಿದ್ದು, ಕೇವಲ ಎಂಟು ಟ್ರಿಪ್ ನಲ್ಲೇ ಈ ಸೌಲಭ್ಯ ಅಂತ್ಯವಾಗಿದ್ದು ದುರಂತ.
 
 
ಸಿಟಿ ಬಸ್ ಬಗ್ಗೆ…
ಸಿಟಿ ಬಸ್ ಏ.17ರಿಂದ ಮೇ.10ರವರೆಗೆ ಕೇವಲ ಎಂಟು ಟ್ರಿಪ್ ಮಾಡಿದೆ. ಈ ಟ್ರಿಪ್ ನಲ್ಲಿ ಪ್ರಯಾಣಿಕರ ಸಂಖ್ಯೆಯೂ ಬಹಳ ಕಡಿಮೆಯಾಗಿತ್ತು. ಈ ಬಸ್ ನಲ್ಲಿ ಕರಾವಳಿ ಪ್ರದಕ್ಷಿಣೆ ಮಾಡಬೇಕಾದರೆ ನಿಗಧಿತ ದರ ಪಾವತಿಸಬೇಕು. ಎಸಿ ಬಸ್ ನಲ್ಲಿ ನಗರ ಪ್ರದಕ್ಷಿಣೆಗೆ ಮಾಡಲು ಮುಂಗಡ ಬುಕ್ಕಿಂಗ್ ಸೌಲಭ್ಯ ಕೂಡ ಇತ್ತು.
 
 
 
8 ದಿನಗಳ ಟ್ರಪ್ ವಿವರ:
ಏ.23 ಪ್ರಥಮ ಟ್ರಿಪ್ ಆಗಿದ್ದು, ಕೇವಲ 17 ಸೀಟ್ ಮಾತ್ರ ಇತ್ತು. ಏ. 24ರಂದು 39 ಸೀಟ್, ಏ.26ರಂದು 14 ಸೀಟ್, ಏ.30ರಂದು 2 ಸೀಟ್, ಮೇ.1ಕ್ಕೆ 1ಸೀಟು, ಮೇ.3ಕ್ಕೆ 14 ಸೀಟ್, ಮೇ.5ಕ್ಕೆ 21 ಸೀಟು, ಮೇ10ಕ್ಕೆ 6 ಸೀಟ್ ಗಳು ಮಾತ್ರ ಇತ್ತು. ಹೀಗೆ ಕೇವಲ 120 ಮಂದಿ ಮಾತ್ರ ಈ ಸೌಲಭ್ಯದ ಪ್ರಯೋಜನ ಪಡೆದಿದ್ದಾರೆ. ಅಲ್ಲದೆ ಸಿಟಿ ಟೂರ್ ಬಸ್ ನಲ್ಲಿ ದಿನಕ್ಕೆ ಕನಿಷ್ಠ 10 ಜನ ಇದ್ದರೆ ಮಾತ್ರ ಬಸ್ ಸೌಲಭ್ಯ ದೊರೆಯುತ್ತದೆ.
 
 
 
ಸಿಟಿ ಟೂರ್ ಪ್ಯಾಕೇಜ್ ಹೇಗಿತ್ತು?
ಸಿಟಿ ಟೂರ್ ಬಸ್ ಬೆಳಗ್ಗೆ 8 ಗಂಟೆಗೆ ಲಾಲ್ ಬಾಗ್ ನಿಂದ ಹೊರಟು ಕುದ್ರೋಳಿ ಗೋಕರ್ಣನಾಧೇಶ‍್ವರ ದೇವಸ್ಥಾನ- ಮಂಗಳಾದೇವಿ ದೇವಸ‍್ಥಾನ- ಸೈಂಟ್ ಅಲೋಶಿಯಸ್ ಚಾಪೆಲ್, ಪಿಲಿಕುಲ ನಿಸರ್ಗಧಾಮ ತಲುಪುತ್ತದೆ. ಮಧ್ಯಾಹ್ನ ಊಟದ ನಂತರ ತಣ್ಣೀರು ಬಾವಿ ಟ್ರೀ ಪಾರ್ಕ್, ಪಣಂಬೂರು ಬೀಜ್ ತೆರಳಿ ಸಂಜೆ 7 ಗಂಟೆಗೆ ಮತ್ತೆ ಲಾಲ್ ಬಾಗ್ ನಲ್ಲಿ ಕೊನೆಗೊಳ್ಳುತ್ತಿತ್ತು.

LEAVE A REPLY

Please enter your comment!
Please enter your name here