ವಿಪಕ್ಷಗಳ ವಿರುದ್ಧ ಪ್ರಧಾನಿ ವಾಗ್ದಾಳಿ

0
274

ರಾಷ್ಟ್ರೀಯ ಪ್ರತಿನಿಧಿ ವರದಿ
ಒರ್ ಒಪಿ ಬಗ್ಗೆ ಕಾಂಗ್ರೆಸ್ ಸುಳ್ಳು ಭರವಸೆಯನ್ನು ನೀಡಿತ್ತು. ಆದರೆ ನಾವು ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
 
 
ಉತ್ತರ ಪ್ರದೇಶದಲ್ಲಿ ವಿಧಾನಸಭಾ ಕ್ಷೇತ್ರಕ್ಕೆ ಚುನಾವಣೆ ಹಿನ್ನೆಲೆಯಲ್ಲಿ ವಾರಣಾಸಿಯಲ್ಲಿ ಪ್ರಧಾನಿ ಬೃಹತ್ ರ್ಯಾಲಿ ನಡೆಸಿದ್ದಾರೆ. ಬಳಿಕ ಜಾನ್ ಪುರ್ ನಲ್ಲಿ ಮೋದಿ ಭಾಷಣ ಮಾಡುತ್ತಾ, ಸೇನೆಯ ಮಹತ್ವದ ಕಾರ್ಯಾಚರಣೆಗ ಬಗ್ಗೆ ವಿಪಕ್ಷಗಳಿಗೆ ಸಂಶಯ ಇದೆ. ಸೇನೆಯ ಬಗ್ಗೆ ಸಂಶಯ ವ್ಯಕ್ತಪಡಿಸುವುದು ನಾಚಿಕೆಯ ವಿಷಯವಾಗಿದೆ ಎಂದಿದ್ದಾರೆ.
 
 
ಉತ್ತರಪ್ರದೇಶದಲ್ಲಿ ಬಿಜೆಪಿ ಸರ್ಕಾರ ರಚಿಸಲಿದೆ. ಅಧಿಕಾರಕ್ಕಾಗಿ ವಿಪಕ್ಷಗಳು ಒಂದಾಗಿದೆ. ಉತ್ತರಪ್ರದೇಶದಲ್ಲಿ ತಂತಿ ಇದೆ. ಆದರೆ ವಿದ್ಯುತ್ ಇಲ್ಲ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಅಖಿಲೇಶ್, ರಾಹುಲ್ ಗಾಂಧಿ, ಮಾಯಾವತಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

LEAVE A REPLY

Please enter your comment!
Please enter your name here