ವಿಪಕ್ಷಗಳ ಕರಾಳ ದಿನ ಆಚರಣೆ

0
343

ನವದೆಹಲಿ ಪ್ರತಿನಿಧಿ ವರದಿ
500 ಮತ್ತು 1000ರೂ. ಮುಖಬೆಲೆಯ ನೋಟುಗಳು ಬ್ಯಾನ್ ಆಗಿ ಒಂದು ತಿಂಗಳಾದ ಹಿನ್ನೆಲೆಯಲ್ಲಿ ನೋಟ್ ಬ್ಯಾನ್ ಕ್ರಮವನ್ನು ಖಂಡಿಸಿ ನವದೆಹಲಿಯ ಸಂಸತ್ ಭವನದ ಗಾಂಧಿ ಪ್ರತಿಮೆ ಬಳಿ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ ನಡೆಯುತ್ತಿದೆ.
 
 
 
ನೋಟ್ ಬ್ಯಾನ್ ವಿರುದ್ಧ ಕಾಂಗ್ರೆಸ್ ಸಿಡಿದೆದ್ದಿದ್ದಾರೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ವಿಪಕ್ಷಗಳ ನಾಯಕರು ಕೈಗೆ ಕಪ್ಪುಪಟ್ಟಿ ಕಟ್ಟಿಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆಯಲ್ಲಿ ಕಾಂಗ್ರೆಸ್, ಟಿಎಂಸಿ, ಜೆಡಿಯು ಪಕ್ಷಗಳ ಸಂಸದರು ಭಾಗಿಯಾಗಿದ್ದಾರೆ.
 
 
ನೋಟ್ ಬ್ಯಾನ್ ಮಾಡಿ 1 ತಿಂಗಳಾದರೂ ಕ್ರಮಕೈಗೊಂಡಿಲ್ಲ. ಪ್ರಧಾನಿ ಸಂಸತ್ ಗೆ ಆಗಮಿಸದೇ ನುಣುಚಿಕೊಳ್ಳುತ್ತಿದ್ದಾರೆ. ಸಂಸತ್ ಕಲಾಪಕ್ಕೆ ಪ್ರಧಾನಿ ಆಗಮಿಸಿ ಹೇಳಿಕೆ ನೀಡಲಿ ಎಂದು ರಾಹುಲ್ ದೆಹಲಿಯಲ್ಲಿ ಆಗ್ರಹಿಸಿದ್ದಾರೆ.
 
 
ಯಾವುದೇ ತಜ್ಞರ ಜೊತೆ ಚರ್ಚಿಸದೇ ನೋಟ್ ಬ್ಯಾನ್ ಮಾಡಲಾಗಿದೆ. ನೋಟ್ ಬ್ಯಾನ್ ನಿಂದ ದೇಶದ ಘನತೆಗೆ ಧಕ್ಕೆಯಾಗಿದೆ. ಅಲ್ಲದೆ ನೋಟ್ ಬ್ಯಾನ್ ನಿಂದ ಬಡವರಿಗೆ ಸಾಕಷ್ಟು ತೊಂದರೆಗಳು ಆಗಿದೆ. ಬಡವರು ಕಷ್ಟ ಪಡುತ್ತಿದ್ದರೆ, ಪ್ರಧಾನಿ ನಗುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
 
 
ರಾಜ್ಯಸಭೆಯಲ್ಲೂ ನೋಟ್ ಬ್ಯಾನ್ ಗದ್ದಲ
ಇತ್ತ ರಾಜ್ಯಸಭೆಯಲ್ಲಿ ನೋಟ್ ಬ್ಯಾನ್ ಗದ್ದಲ ಮುಂದುವರಿದಿದೆ. ಆಡಳಿತ-ಪ್ರತಿಪಕ್ಷಗಳ ನಡುವೆ ಗದ್ದಲ ಉಂಟಾಗಿದೆ. ಸದನದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಪ್ರತಿಪಕ್ಷಗಳು ಆಗ್ರಹಿಸುತ್ತಿದೆ.
ಸದನದಲ್ಲಿ ಕಾಂಗ್ರೆಸ್ ವರ್ತನೆಗೆ ಕಾಂಗ್ರೆಸ್ ಪಕ್ಷ ತಮಾಷೆ ಮಾಡುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ವಾಗ್ದಾಳಿ ನಡೆಸಿದ್ದಾರೆ.

LEAVE A REPLY

Please enter your comment!
Please enter your name here