ವಿಧಾನ ಸಭಾಧ್ಯಕ್ಷರಾಗಿ ಕೋಳಿವಾಡ್ ಆಯ್ಕೆ

0
219

 
ಬೆಂಗಳೂರು ಪ್ರತಿನಿಧಿ ವರದಿ
ಕರ್ನಾಟಕ ವಿಧಾನ ಸಭೆಯ ನೂತನ ಸಭಾಧ್ಯಕ್ಷರಾಗಿ ಹಾವೇರಿ ಜಿಲ್ಲೆ ರಾಣಿಬೆನ್ನೂರು ವಿಧಾನ ಸಭಾ ಕ್ಷೇತ್ರದ ಶಾಸಕ ಕೆ. ಬಿ. ಕೋಳಿವಾಡ್ ಅವರು ವಿಧಾನ ಸಭೆಯಲ್ಲಿಂದು ಅವಿರೋಧವಾಗಿ ಆಯ್ಕೆಯಾದರು.
 
 
ಇಂದು ಮುಂಜಾನೆ ವಿಧಾನ ಸಭೆಯ ಎರಡನೇ ದಿನದ ಕಾರ್ಯಕಲಾಪ ಆರಂಭಗೊಳ್ಳುತ್ತಿದ್ದಂತೆಯೇ ಹಂಗಾಮಿ ಸಭಾಧ್ಯಕ್ಷ ಎನ್. ಹೆಚ್. ಶಿವಶಂಕರರೆಡ್ಡಿ ವಿಧಾನ ಸಭಾಧ್ಯಕ್ಷರ ಚುನಾವಣಾ ಪ್ರಕ್ರಿಯೆ ಆರಂಭಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಧಾನ ಸಭಾ ಅಧ್ಯಕ್ಷರ ಸ್ಥಾನಕ್ಕೆ ಕೆ. ಬಿ. ಕೋಳಿವಾಡ್ ಅವರ ಹೆಸರನ್ನು ಸೂಚಿಸಿದರು. ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಟಿ. ಬಿ. ಜಯಚಂದ್ರ ಅವರು ಕೆ.ಬಿ. ಕೋಳಿವಾಡ್ ಅವರ ಹೆಸರನ್ನು ಅನುಮೋದಿಸಿದರು.
 
 
ನಂತರ ಹಂಗಾಮಿ ಸಭಾಧ್ಯಕ್ಷ ಎನ್. ಹೆಚ್. ಶಿವಶಂಕರರೆಡ್ಡಿ ಅವರು ಕೆ. ಬಿ. ಕೋಳಿವಾಡ್ ಅವರು ವಿಧಾನ ಸಭಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಪ್ರಕಟಿಸಿದರು.

LEAVE A REPLY

Please enter your comment!
Please enter your name here