ರಾಜ್ಯ

ವಿದ್ಯಾವಂತರಾದರೆ ಸಾಲದು; ಸಂಸ್ಕಾರವಂತರಾಗಿ: ಅಮರ್ ಕೋಟೆ

ಮೂಡಬಿದಿರೆ: ವಿದ್ಯಾವಂತರಾದರೆ ಸಾಲದು, ಸಂಸ್ಕಾರವಂತರಾಗಿ ಸಮಾಜದಲ್ಲಿ ಜವಾಬ್ದಾರಿಯುತವಾಗಿ ನಡೆಯುವ ಕಾರ್ಯ ಅಷ್ಟೇ ಮುಖ್ಯ ಎಂದು ಜವನೆರ್ ಬೆದ್ರ ಸಂಘಟನೆಯ ಸ್ಥಾಪಕಾಧ್ಯಕ್ಷ ಅಮರ್ ಕೋಟೆ ಅಭಿಪ್ರಾಯ ಪಟ್ಟರು.
ತಮ್ಮ ತಮ್ಮ ಮನೆ, ವಠಾರ, ಪರಿಸರದಲ್ಲಿ ಕಸ ಹಾಕುವ ಮೂಲಕ ಪರಿಸರ ಮಾಲಿನ್ಯಕ್ಕೆ ಯಾರೆಲ್ಲಾ ಕಾರಣೀಕರ್ತರಾಗುತ್ತಾರೋ ಅವರೆಲ್ಲರೂ ಅವಿದ್ಯಾವಂತರು ಹಾಗೂ ಸಂಸ್ಕಾರ ಹೀನರು ಎಂದರೆ ತಪ್ಪಲ್ಲ ಎಂದವರು ಉಗ್ರವಾಗಿ ಠೀಕಿಸಿದರು.
ಪರಿಸರವನ್ನು ಸ್ವಚ್ಛವಾಗಿಡುವುದು ಪ್ರತಿಯೊಬ್ಬನ ಆದ್ಯ ಕರ್ತವ್ಯ. ಕಸ ಹೆಕ್ಕುವವರು ಇದ್ದಾರೆ ಎಂಬ ಕಾರಣಕ್ಕಾಗಿ ಕಸ ಎಸೆಯುವುದು ಸರಿಯಲ್ಲ. ನಮ್ಮ ಪರಿಸರ ಸ್ವಚ್ಛವಾಗಿದ್ದಲ್ಲಿ ಮಾನಸಿಕ ಹಾಗೂ ಸಾಮಾಜಿಕ ಸ್ವಾಸ್ಥ್ಯ ನಿರ್ಮಾಣವಾಗುತ್ತದೆ ಎಂಬ ಪ್ರಾಥಮಿಕ ಪರಿಜ್ಞಾನ ಪ್ರತಿಯೊಬ್ಬರಲ್ಲಿ ಮೂಡುವಂತಾಗಬೇಕು ಎಂದವರು ಅಭಿಪ್ರಾಯಿಸಿದರು.
ಮೂಡಬಿದಿರೆಯ ಒಂಟಿಕಟ್ಟೆ ಪರಿಸರದಲ್ಲಿ ಭಾನುವಾರ ಜವನೆರ್ ಬೆದ್ರ ಸಂಘಟನೆಯ 41ನೇ ವಾರದ ಸ್ವಚ್ಛತಾ ಅಭಿಯಾನ ನಡೆಯಿತು. ಮದ್ಯದ ಬಾಟಲಿಗಳು, ಪ್ಲಾಸ್ಟಿಕ್ ಲೋಟ, ಕಪ್, ತಟ್ಟೆಗಳು ಅಪಾರ ಪ್ರಮಾಣದಲ್ಲಿ ಸಂಗ್ರಹವಾಯಿತು. ಜವನೆರ್ ಬೆದ್ರ ಸಂಘಟನೆಯ ಸದಸ್ಯರು ಬೆಳಗ್ಗೆ ಉತ್ಸಾಹದಿಂದ ಪಾಲ್ಗೊಂಡು ಸ್ವಚ್ಛತಾ ಅಭಿಯಾನ ನಡೆಸಿದರು.
ಬಾಕ್ಸ್
ಯಾವೊಂದು ಆಮಿಷಕ್ಕೂ ಒಳಗಾಗದೆ ಜವನೆರ್ ಬೆದ್ರ ಸಂಘಟನೆ ಕಳೆದ 40ವಾರಗಳಿಂದ ಮೂಡಬಿದಿರೆಯ ವಿವಿಧ ಕಡೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ ಪರಿಕಲ್ಪನೆಯನ್ನು ಸಾಕಾರಗೊಳಿಸುವ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ. ಪರಿಸರದಲ್ಲಿರುವ ಮಾಲಿನ್ಯ ಕಾರಕ ವಸ್ತುಗಳನ್ನು ಸಂಗ್ರಹಿಸಿ ಸ್ವಚ್ಛತೆಯ ಪಾಠವನ್ನು ಮಾಡುತ್ತಿದೆ. ಹಲವು ಕಡೆಗಳಲ್ಲಿ ಸ್ವಚ್ಛತೆ ನಡೆಸಿ ಜಾಗೃತಿ ಫಲಕ ಅಳವಡಿಸುವ ಮೂಲಕ ಜನಜಾಗೃತಿ ಮೂಡಿಸುತ್ತಿದೆ.

ನಮ್ಮೊಡನೆ ಕೈಜೋಡಿಸಿ

ಸ್ವಚ್ಛತೆಯ ವಿಚಾರದಲ್ಲಿ ರಾಜಕೀಯ ಮಾಡಬೇಡಿ. ಯಾರೆಲ್ಲಾ ಆಸಕ್ತರಿದ್ದಾರೋ ಅವರೆಲ್ಲರೂ ನಮ್ಮೊಡನೆ ಕೈಜೋಡಿಸಿ. ಸಂಘಟಿತ ಪ್ರಯತ್ನದ ಮೂಲಕ ಮೂಡಬಿದಿರೆಯನ್ನು ಸ್ವಚ್ಛ ನಗರವನ್ನಾಗಿ ಪರಿವರ್ತಿಸೋಣ
ಅಮರ್ ಕೋಟೆ, ಸ್ಥಾಪಕಾಧ್ಯಕ್ಷ, ಜವನೆರ್ ಬೆದ್ರ ಸಂಘಟನೆ.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.

Comment here