ವಿದ್ಯಾರ್ಥಿ ಸಂಘ ಉದ್ಘಾಟನೆ

0
153

 
ವರದಿ: ನಾಗಣ್ಣ ಡಿ.ಎ ಉಜಿರೆ
‘ಇಂದು ದೇಶದ ವಿವಿಧ ರಂಗಗಳಲ್ಲಿ ಸುವ್ಯವಸ್ಥೆ ಗಗನ ಕುಸುಮವಾಗಿದೆ. ಪ್ರಾಮಾಣಿಕತೆ ಎಂಬುದು ಮರೀಚಿಕೆಯಾಗಿದೆ. ಪಾರದರ್ಶಕತೆಯನ್ನು ಕಾಣಲು ಸಾಧ್ಯವಾಗದಂತಾಗಿದೆ. ಇಂಥ ಸಂದರ್ಭದಲ್ಲಿ ಪ್ರಸ್ತುತ ವಿದ್ಯಾರ್ಥಿಗಳು ನಾಯಕತ್ವ ಕೌಶಲ ಹಾಗೂ ಆದರ್ಶಗಳನ್ನು ಮೈಗೂಡಿಸಿಕೊಂಡು ಸುಭದ್ರ ದೇಶವನ್ನು ಕಟ್ಟುವ ನೆಲೆಗಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಾಗಿದೆ’ ಎಂದು ಬೆಳ್ತಂಗಡಿಯ ವಾಣಿ ಪಿಯು ಕಾಲೇಜಿನ ಪ್ರಾಂಶುಪಾಲ ಡಿ. ಯದುಪತಿಗೌಡ ಹೇಳಿದರು.
 
 
ಅವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಿಯು ವಸತಿ ಕಾಲೇಜಿನ 2016-17 ನೇ ಸಾಲಿನ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಮಾತನಾಡುತ್ತಾ ‘ಪ್ರಸ್ತುತ ಯುವಕರ ಮುಂದೆ ಆಕರ್ಷಣೆಗೊಳಗಾಗುವ ಹಲವಾರು ಸಂಗತಿಗಳಿವೆ. ಅಂಥಹವುಗಳಲ್ಲಿ ಉತ್ತಮವಾದವುಗಳನ್ನು ಆರಿಸಿಕೊಂಡು ತಮ್ಮ ಬದುಕನ್ನು ರೂಪಿಸಿಕೊಳ್ಳಬೇಕು’ ಎಂದು ಕರೆಕೊಟ್ಟರು.
 
 
ಕಾರ್ಯಕ್ರಮದಲ್ಲಿ ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಪ್ರಸ್ತುತ ಬೆಂಗಳೂರಿನಲ್ಲಿ ಅನಲಾಗ್ ಡಿಸೈನಿಂಗ್ ಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ರಾಜೇಶ್ ಎಂ ಆನಂದ್ ಅವರು ಉಪಸ್ಥಿತರಿದ್ದು ಕಾಲೇಜಿನ ತಮ್ಮ ಅನುಭವಗಳನ್ನು ಸ್ಮರಿಸಿಕೊಳ್ಳುತ್ತಾ ‘ಶಿಸ್ತುಬದ್ಧ ಜೀವನಕ್ರಮದಿಂದ ಉತ್ತಮ ಹಂತ ತಲುಪಲು ಸಾಧ್ಯವಾಗುತ್ತದೆ’ ಎಂದು ತಮ್ಮನ್ನೇ ಉದಾಹರಿಸಿದರು.
 
 
 
 
ಪ್ರಾಂಶುಪಾಲ ಪ್ರೊ. ಟಿ. ಕೃಷ್ಣಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿ ನಾಯಕರುಗಳಿಗೆ ಶುಭ ಹಾರೈಸಿದರು. ಹಿಂದಿ ಉಪನ್ಯಾಸಕ ಸುನಿಲ್ ಪಂಡಿತ್ ಅತಿಥಿಗಳನ್ನು ಸ್ವಾಗತಿಸಿ ಪರಿಚಯಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ರಕ್ಷಿತ್ ಎಚ್.ಎಸ್ ವಂದಿಸಿದರು. ಜೀವಶಾಸ್ತ್ರ ಉಪನ್ಯಾಸಕಿ ವಿದ್ಯಾಪ್ರಭು ಕಾರ್ಯಕ್ರಮ ನಿರ್ವಹಿಸಿದರು.
 

LEAVE A REPLY

Please enter your comment!
Please enter your name here