ವಿದ್ಯಾರ್ಥಿ ಸಂಘದ ಉದ್ಘಾಟನೆ

0
245

ಪುತ್ತೂರು ಪ್ರತಿನಿಧಿ ವರದಿ
ವಿವೇಕಾನಂದ ಕಾನೂನು ಕಾಲೇಜಿನಲ್ಲಿ 2016-17 ನೇ ಸಾಲಿನ ವಿದ್ಯಾರ್ಥಿ ಸಂಘ ಹಾಗೂ ಕ್ರೀಡಾ ಮತ್ತು ಸಾಂಸ್ಖೃತಿಕ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮವು ಮಂಗಳವಾರ ಜರುಗಿತು.
 
 
ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪುತ್ತೂರಿನ ವಕೀಲರು ಹಾಗೂ ‘ಪುಡಾ’ ದ ಮಾಜಿ ಅಧ್ಯಕ್ಷರಾದ ಬೆಟ್ಟ ಪಿ.ಈಶ್ವರ ಭಟ್ ಅವರು ವಿದ್ಯಾರ್ಥಿ ಶಕ್ತಿ ಅನಾವರಣಗೊಳ್ಳಬೇಕಾದರೆ ಸಾಂಘಿಕ ಪ್ರಯತ್ನ ನಡೆಯಬೇಕು.ಸಮಾಜದಲ್ಲಿ ಬೇರೆ ಬೇರೆ ಕ್ಷೇತ್ರದಲ್ಲಿ ಆಸಕ್ತಿಯನ್ನು ಬೆಳೆಸಿದರೆ ಮಾತ್ರ ಯುವ ಸಮಾಜದ ಸದ್ಬಳಕೆಯಾಗುವುದು ಸಾಧ್ಯ. ವಕೀಲಿ ವೃತ್ತಿ ಇತ್ತೀಚೆಗೆ ಬಹಳ ಸ್ಪರ್ಧಾತ್ಮಕವಾಗಿದೆ ಇಲ್ಲಿ ಉತ್ತಮ ನ್ಯಾಯವಾದಿಯಾಗಿ ನ್ಯಾಯಾಂಗ ಸೇವೆ ಸಲ್ಲಿಸಲು ಅನೇಕ ಅವಕಾಶಗಳಿವೆ ಹಾಗೂ ಬಹಳಷ್ಟು ಸವಾಲುಗಳಿವೆ ಇದರ ಸಾಧನೆಗಾಗಿ ಶ್ರದ್ಧೆ , ಪರಿಶ್ರಮ ಹಾಗೂ ಪ್ರಾಮಾಣಿಕ ಪ್ರಯತ್ನದ ಅಗತ್ಯವಿದೆಯೇ ಹೊರತು ಬಹುಮಹಡಿ ಕಟ್ಟಡಗಳನ್ನೊಳಗೊಂಡ ಕಾನೂನು ವಿದ್ಯಾಲಯಗಳಲ್ಲವೆಂದಲ್ಲ , ಹೀಗಾಗಿ ಸಮಾಜದಲ್ಲಿರುವ ಅನ್ಯಾಯವನ್ನು ಸರಿಪಡಿಸುವ ಜವಬ್ದಾರಿ ನಮ್ಮಲ್ಲಿದೆ. ಈ ನಿಟ್ಟಿನಲ್ಲಿ ಕಾನೂನು ವಿದ್ಯಾರ್ಥಿಗಳು ಪ್ರತ್ನಿಸಬೇಕೆಂದರು. ತರಬಹುದಾಗಿದೆ ಎಂದರು.
 
 
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರಾದ ಗಣೇಶ್ ಜೋಶಿ ಬಿ. ಮಾತನಾಡಿ ಜೀವನದಲ್ಲಿ ವಿದ್ಯಾರ್ಥಿಗಳು ಕಲಿಕೆಯ ಗುಣಮಟ್ಟವನ್ನು ಏರಿಸಿ ಏಕತೆಯಿಂದ ಒಗ್ಗೂಡಿಕೊಂಡು, ನಿರಂತರ ಪರಿಶ್ರಮ , ಸಾಧನೆಗಳನ್ನು ಮಾಡಬೇಕಾದ ಅನಿವಾರ್ಯತೆ ಇದೆ ಎಂದರು.
ವೇದಿಕೆಯಲ್ಲಿ ಆಡಳಿತ ಮಂಡಳಿ ಸಂಚಾಲಕರಾದ ವಿಜಯನಾರಾಯಣ ಕೆ. ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಹೇಮಲತಾ , ಕಾರ್ಯದರ್ಶಿ ಮನೋಜ್ ಕುಮಾರ್ ಹಾಗೂ ಜೊತೆ ಕಾರ್ಯದರ್ಶಿ ಸುಪ್ರೀತಾ ಉಪಸ್ಥಿತರಿದ್ದರು. ಬಳಿಕ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರಮಾಣವಚನವನ್ನು ಕಾಲೇಜಿನ ಪ್ರಾಂಶುಪಾಲರಾದ ಕೆ.ಜಿ.ಕೃಷ್ಣಮೂರ್ತಿ ಬೋಧಿಸಿದರು.
 
 
ಶ್ರೀ ಕೃಷ್ಣ ಜನ್ಮಾಷ್ಟಮಿ ಯಂದು ನಡೆಸಿದ ಸ್ಫರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಣೆ ನಡೆಸಲಾಯಿತು. ಪ್ರಾರ್ಥನೆಯನ್ನು ವಿದ್ಯಾರ್ಥಿನಿಯರು ನರವೇರಿಸಿದರು, ಸ್ವಾಗತವನ್ನು ವಿದ್ಯಾರ್ಥಿ ಸಂಘದ ನಾಯಕಿ ಹೇಮಲತಾ ನೆರವೇರಿಸಿದರು. ಕಾರ್ಯದರ್ಶಿಯಾದ ಮನೋಜ್ ಕುಮಾರ್ ವಂದಣಾರ್ಪಣೆಗೈದರು. ಕಾರ್ಯಕ್ರಮವನ್ನು ಪ್ರಶಾಂತ್ ನಿರೂಪಿಸಿದರು. ತದನಂತರ ಪ್ರತಿಭಾ ಪ್ರದರ್ಶನ ನಡೆಯಿತು. ಇದರಲ್ಲಿ ಪ್ರಥಮ ಸ್ಥಾನವನ್ನು ತೃತೀಯ ಬಿ.ಎ.,ಎಲ್.ಎಲ್.ಬಿ, ದ್ವಿತೀಯ ಬಹುಮಾನವನ್ನು ಅಂತಿಮ ವರ್ಷದ ಬಿ.ಎ.,ಎಲ್.ಎಲ್.ಬಿ , ಹಾಗೂ ತೃತೀಯ ಬಹುಮಾನವನ್ನು ಎರಡನೇ ವರ್ಷದ ಎಲ್.ಎಲ್.ಬಿ.ಗಳಿಸಿದರು.

LEAVE A REPLY

Please enter your comment!
Please enter your name here