ಬೆಂಗಳೂರು ಪ್ರತಿನಿಧಿ ವರದಿ
ಬೆಂಗಳೂರು ವಿಶ್ವವಿದ್ಯಾಲಯದಿಂದ ಮತ್ತೊಂದು ಯಡವಟ್ಟು ನಡೆದಿದೆ. ಪಾಸಿಂಗ್ ಮಾರ್ಕ್ಸ್ ನಿಗದಿ ಮಾಡುವಲ್ಲಿ ವಿವಿ ಯಡವಟ್ಟು ಮಾಡಿದೆ.
ವಿವಿ ಪಾಸಿಂಗ್ ಮಾರ್ಕ್ಸ್ 35ರ ಬದಲು 40 ಅಂಕಗಳನ್ನು ನಿಗದಿ ಮಾಡಿದೆ. ಸ್ನಾತಕೋತ್ತರ ಪದವಿ ಅಂಕಪಟ್ಟಿ ಮುದ್ರಣ ವೇಳೆ ಲೋಪ ಕಂಡುಬಂದಿದೆ.
ಇದರಿಂದ ಬೆಂಗಳೂರು ವಿವಿ ಮೌಲ್ಯಮಾಪನ ವಿಭಾಗದಿಂದ 2014-15ನೇ ಸಾಲಿನ ಅಂಕಪಟ್ಟಿ ವಾಪಸಾತಿಗೆ ಸುತ್ತೋಲೆ ಹೊರಡಿಸಿದೆ. ಜುಲೈ 31ರೊಳಗೆ ಅಂಕಪಟ್ಟಿ ವಾಪಸ್ ನೀಡುವಂತೆ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಸೂಚನೆ ನೀಡಿದೆ.
2014-15ರ ಮೊದಲ ಸೆಮಿಸ್ಟರ್ ಮತ್ತು 2 ನೇ ಸೆಮಿಸ್ಟರ್ ಅಂಕಪಟ್ಟಿ ವಾಪಸ್ ಮಾಡಲು ಸೂಚನೆ ನೀಡಲಾಗಿದೆ. ನಿಂಗೇಗೌಡ ಅವರು ವಿವಿ ಮೌಲ್ಯಮಾಪನ ವಿಭಾಗ ಕುಲಸಚಿವರಾಗಿದ್ದ ವೇಳೆ ಈ ಅವಾಂತರ ಸಂಭವಿಸಿದೆ.
ಈಗ ಯಡವಟ್ಟು ಸರಿಪಡಿಸಲು ಹಾಲಿ ಕುಲಸಚಿವರಾದ ಸುರೇಶ್ ನಾಡಗೌಡರು ಸುತ್ತೋಲೆ ಹೊರಡಿಸಿದ್ದಾರೆ.