ವಿದ್ಯಾರ್ಥಿಗಳ ಧ್ವನಿಯನ್ನು ದಮನಿಸಲು ಯತ್ನ: ಎಸ್ ಐ ಓ ದ.ಕ. ಜಿಲ್ಲಾಧ್ಯಕ್ಷ

0
294

ಬಂಟ್ವಾಳ ಪ್ರತಿನಿಧಿ ವರದಿ
ಇಂದು ನಮ್ಮ ದೇಶದಲ್ಲಿ ತಮಗಾಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಿದರೆ ಅದನ್ನು ಅಪರಾಧವಾಗಿ ಪರಿಗಣಿಸುತ್ತಿರುವ ಅಧಿಕಾರದಲ್ಲಿರುವ ಸರಕಾರ ಹಾಗೂ ಕೆಲ ಸ್ಥಾಪಿತ ಹಿತಾಸಕ್ತಿಗಳು, ಅದನ್ನು ನೆಪವಾಗಿಟ್ಟುಕೊಂಡು ವಿದ್ಯಾರ್ಥಿಗಳ ಧ್ವನಿಯನ್ನು ಅಡಗಿಸಲು ವ್ಯವಸ್ಥಿತವಾಗಿ ಷಡ್ಯಂತ್ರ ರೂಪಿಸಲಾಗುತ್ತಿದೆ ಎಂದು ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ (ಎಸ್ ಐ ಓ) ದ.ಕ‌.‌ ಜಿಲ್ಲಾಧ್ಯಕ್ಷ ತಲ್ಹಾ ಇಸ್ಮಾಯೀಲ್ ತಿಳಿಸಿದರು.
 
 
 
ಅವರು ದೆಹಲಿಯ ಜವಾಹರ್ ಲಾಲ್ ನೆಹರೂ ವಿವಿಯ ವಿದ್ಯಾರ್ಥಿಯಾದ ನಜೀಬ್ ಅಹ್ಮದ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬಂಟ್ವಾಳ ತಾಲೂಕು ಎಸ್ ಐ‌ ಓ ವತಿಯಿಂದ ಕೈಕಂಬ ಜಂಕ್ಷನ್ ಹಾಗೂ ಬಿ.ಸಿ.ರೋಡ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆ ಹಾಗೂ ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
 
 
 
ನಜೀಬ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಲಿಘಢ್ ಮುಸ್ಲಿಂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ರೈಲು ರೂಕೋ ಪ್ರತಿಭಟನೆ ನಡೆಸಿದರೆಂಬ ಕಾರಣಕ್ಕಾಗಿ ಬಂಧಿಸಲಾಯಿತು. ನ್ಯಾಯಯುತ ಬೇಡಿಕೆಯನ್ನು ಪೂರೈಸಲು ಆಗ್ರಹಿಸಿ ಪ್ರತಿಭಟನೆ ಮಾಡಿದ ಜೆಎನ್ ಯು ವಿನ ಹಲವು ವಿದ್ಯಾರ್ಥಿಗಳನ್ನು ಕುಲಪತಿ ಅಮಾನತು ಮಾಡಿದ್ದಾರೆ. ಇದನ್ನೆಲ್ಲಾ ಗಮನಿಸುವಾಗ ವಿದ್ಯಾರ್ಥಿಗಳ ಮೇಲೆ ನಡೆಯುವ ಯಾವುದೇ ರೀತಿಯ ದೌರ್ಜನ್ಯ, ಹಿಂಸೆಗಳನ್ನು ಪ್ರಶ್ನಿಸಿಬಾರದೆಂದು ಪರೋಕ್ಷವಾಗಿ ಎಚ್ಚರಿಕೆ ನೀಡುತ್ತಿರುವ ಸರಕಾರವು, ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ವಿದ್ಯಾರ್ಥಿಗಳ ಬಗ್ಗೆ ಯಾವುದೇ ಕಾಳಜಿ ವಹಿಸದವರು ಕುಲಪತಿಯಂತಹ ಸ್ಥಾನಕ್ಕೆ ಅರ್ಹರಲ್ಲ. ಅವರು ಆ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
 
 
 
ಟೀ-ಶರ್ಟ್ ನಲ್ಲಿ ಪ್ರಾತ್ಯಕ್ಷಿಕೆ:
ಇದೇ ವೇಳೆ ಎಸ್ ಐ ಓ ಕಾರ್ಯಕರ್ತರು ಟೀ-ಶರ್ಟಿನಲ್ಲಿ Again We Ask Where Is Najeeb? Bring Back Najeeb ಎಂಬ ಅಕ್ಷರಗಳ ಪ್ರಾತ್ಯಕ್ಷಿಕೆಯು ಕೈಕಂಬ ಜಂಕ್ಷನ್ ಹಾಗೂ ಬಿ.ಸಿ.ರೋಡ್ ನಲ್ಲಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಎಸ್ ಐ ಓ‌ ಪಾಣೆಮಂಗಳೂರು ಶಾಖೆಯ ಅಧ್ಯಕ್ಷ ತಮೀಝ್ ಅಲಿ ಕಾರಾಜೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here