ವಿದ್ಯಾರ್ಥಿಗಳಿಗೆ ಪುರಸ್ಕಾರ

0
335

ವರದಿ: ಶ್ಯಾಮ್ ಪ್ರಸಾದ್
ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಮುಳ್ಳೇರಿಯ ಮಂಡಲದ ಎಣ್ಮಕಜೆ ವಲಯ ಸಭೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಸಮಾರಂಭವು ಆದಿತ್ಯವಾರ ಬಜಕ್ಕೂಡ್ಲು ಅಮೃತಧಾರಾ ಗೋಶಾಲೆಯ ಧರ್ಮಮಂದಿರದಲ್ಲಿ ನಡೆಯಿತು.
 
 
 
ಧ್ವಜಾರೋಹಣ, ಶಂಖನಾದ, ಗುರುವಂದನೆಯೊಂದಿಗೆ ಸಭೆ ಆರಂಭವಾಯಿತು. ವಲಯ ಅಧ್ಯಕ್ಷ ಶಿವಪ್ರಸಾದ ವರ್ಮುಡಿ ಪ್ರಸ್ತಾವನೆಗೈದರು. 2015-16ನೇ ಸಾಲಿನ ಪರೀಕ್ಷೆಗಳಲ್ಲಿ ಉನ್ನತ ಸಾಧನೆಗೈದ ವಿದ್ಯಾರ್ಥಿಗಳನ್ನು ಸ್ಮರಣಿಕೆ ನೀಡುವ ಮೂಲಕ ಗುರುತಿಸಲಾಯಿತು. ಗೋಕರ್ಣ ಮಹಾಮಂಡಲದ ಧರ್ಮಕರ್ಮ ವಿಭಾಗದ ಪ್ರಧಾನ ವೇ.ಮೂ. ಕೇಶವಪ್ರಸಾದ ಕೂಟೇಲು ವೇದನಿಧಿ ಹಾಗೂ ಧರ್ಮಕಾರ್ಯದ ಬಗ್ಗೆ ವಿವರಿಸಿದರು. ವಲಯ ಉಸ್ತುವಾರಿ ಜ್ಯೋತಿಷಿ ಗಣೇಶ ಮಾಡಾವು ಸಮಾಜದ ಕರ್ತವ್ಯಗಳ ಬಗ್ಗೆ ಮಾರ್ಗದರ್ಶನ ನೀಡಿದರು.
 
 
 
ವಲಯ ದಿಗ್ದರ್ಶಕ ಹಾಗೂ ಮಂಡಲ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆ ಗೋಕಿಂಕರ ಯಾತ್ರೆಯ ವಿವರಗಳನ್ನಿತ್ತು ಯಶಸ್ಸಿಗೆ ಸಹಕರಿಸಬೇಕೆಂದು ಕರೆಯಿತ್ತರು. ಮಹಾಮಂಡಲ ಸನ್ನಿಧಿ ಸಂಸ್ಥೆಗಳ ಪ್ರಧಾನ ಬಿ.ಜಿ.ರಾಮ ಭಟ್ಟರು ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದರು. ಉಪಾಧ್ಯಕ್ಷ ಗಣೇಶ್ ಕುಮಾರ್ ಕುಂಚಿನಡ್ಕ ಧನ್ಯವಾದವನ್ನಿತ್ತರು. ಶಾಂತಿಮಂತ್ರ, ಶಂಖನಾದ, ಧ್ವಜಾವತರಣದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು

LEAVE A REPLY

Please enter your comment!
Please enter your name here