ವಿದ್ಯಾಪೀಠದಲ್ಲಿ `ಶಾಸನ ತಂತ್ರ'ದ ಡಿಜಿಟಲ್ ಕಾರ್ಯಾಗಾರ

0
141

ಶ್ಯಾಮ್ ಪ್ರಸಾದ್, ಬದಿಯಡ್ಕ
ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಮುಳ್ಳೇರಿಯ ಹವ್ಯಕ ಮಂಡಲದ ದಕ್ಷಿಣ ಭಾಗದ 8 ವಲಯಗಳ ಗುರಿಕ್ಕಾರರು ಹಾಗೂ ಪದಾಧಿಕಾರಿಗಳಿಗೆ ಡಿಜಿಟಲ್ ಕಾರ್ಯಾಗಾರವು ಆದಿತ್ಯವಾರ ಬದಿಯಡ್ಕ ಶ್ರೀಭಾರತೀ ವಿದ್ಯಾಪೀಠದಲ್ಲಿ ನಡೆಯಿತು.
 
 
 
 
ಶ್ರೀ ಮಠದ `ಶಾಸನ ತಂತ್ರ’ದ ವ್ಯವಸ್ಥೆ, ವ್ಯವಹಾರದ ಕುರಿತು ವಿವರಣೆಯನ್ನು ನೀಡಲಾಯಿತು. ಶ್ರೀ ಮಠದ ಶಿಷ್ಯಂದಿರಾದ ಮಂಗಳೂರಿನ ಸರಗ್ ಸೋಫ್ಟ್ ಟೆಕ್ನೋಲಜೀಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಎಂ.ಡಿ. ಪ್ರದೀಪ್ ಶಂಕರ್, ಸಿ.ಇ.ಒ. ಪ್ರಮೋದ್ ಕುಮಾರ್, ಸದಸ್ಯರುಗಳಾದ ಕೇಶವ ಪ್ರಕಾಶ್, ನಂದಕಿಶೋರ್ ತರಗತಿಯನ್ನು ನಡೆಸಿಕೊಟ್ಟರು.
 
 
 
8 ವಲಯಗಳ ಗುರಿಕ್ಕಾರರು, ವಿವಿಧ ವಿಭಾಗಗಳ ಸಂಚಾಲಕರು ಮಾಹಿತಿಯನ್ನು ಪಡೆದುಕೊಂಡರು. ಮಹಾಮಂಡಲದ ಗೋವಿಂದ ಭಟ್ ಬಳ್ಳಮೂಲೆ, ಮುಳ್ಳೇರಿಯ ಮಂಡಲ ಉಪಾಧ್ಯಕ್ಷ ಕುಮಾರ ಸುಬ್ರಹ್ಮಣ್ಯ ಪೈಸಾರಿ, ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಸರ್ಪಮಲೆ, ಗೀತಾ ಮುಳ್ಳೇರಿಯ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here