ವಿದ್ಯಾಪೀಠದಲ್ಲಿ ದಂತ ಚಿಕಿತ್ಸಾ ಶಿಬಿರ

0
283

ವರದಿ: ಶ್ಯಾಮ್ ಪ್ರಸಾದ್ ಬದಿಯಡ್ಕ
ಗ್ರಾಮೋತ್ಥಾನ ಸೇವಾ ಸೆಂಟರ್ ಬದಿಯಡ್ಕದ ಪ್ರಾಯೋಜಕತ್ವದಲ್ಲಿ ದಂತ ಸುರಕ್ಷತೆಯ ಕುರಿತು ಜಾಗೃತಿ ಮೂಡಿಸುವ ಶಿಬಿರವನ್ನು ಬುಧವಾರ ಆಯೋಜಿಸಲಾಗಿತ್ತು.
 
 
 
ಮಂಗಳೂರಿನ ಎ.ಬಿ.ಶೆಟ್ಟಿ ಮೆಮೋರಿಯಲ್ ಇನಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ ಇಲ್ಲಿಯ ವೈದ್ಯರ ತಂಡದ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
 
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಮಾತನಾಡಿ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಇಂತಹ ಶಿಬಿರಗಳು ಮಕ್ಕಳನ್ನು ಮತ್ತು ಪೋಷಕರನ್ನು ಜಾಗೃತಿಗೊಳಿಸಲು ಸಹಕಾರಿ. ಮಂಗಳೂರಿನ ಈ ವೈದ್ಯರ ತಂಡದವರಿಂದ ಇಂತಹ ಜಾಗೃತಿ ಕಾರ್ಯಾಗಾರಗಳು ಹಾಗೂ ತಪಾಸಣಾ ಶಿಬಿರಗಳು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಲಭಿಸಲು ಸಾಧ್ಯವಾಯಿತು ಎಂದರು.
 
 
 
ಡಾ| ರಾಜೇಂದ್ರ ಪ್ರಸಾದ್ ಮಾತನಾಡಿ ಚಿಕ್ಕ ಅವಧಿಯಲ್ಲಿ ಚೊಕ್ಕಟವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿದ ಶಾಲಾ ವ್ಯವಸ್ಥಾಪಕ ಮಂಡಳಿ ಹಾಗೂ ಅಧ್ಯಾಪಕ ವೃಂದವನ್ನು ಅಭಿನಂದಿಸುತ್ತಾ ಉತ್ಸಾಹಿ ಮಕ್ಕಳ ಸಹಕಾರ ನಮಗೆ ಸ್ಪೂರ್ತಿ ನೀಡಿತು. ಮುಂದಿನ ದಿನಗಳಲ್ಲಿ ಪಾಲಕರಿಗೂ ಸೇರಿದಂತೆ ಪೂರ್ಣ ದಂತ ಚಿಕಿತ್ಸೆಯನ್ನು ನೀಡಲು ನಾವು ಬದ್ಧ ಎಂದರು.
 
 
 
ಶಿಬಿರದ ಸಂಯೋಜಕರಾಗಿ ಧನಂಜಯ ಮಧೂರು ಮತ್ತು ವೆಂಕಟ್ ರಾಮ ಮಂಗಳೂರು ಹಾಗೂ 13 ಮಂದಿ ವೈದ್ಯರ ತಂಡ ಉಪಸ್ಥಿತರಿದ್ದರು. 10ನೇ ತರಗತಿಯ ಕು| ಆಶ್ವಿಜಾ ಪಿ.ಎಸ್. ಕಾರ್ಯಕ್ರಮ ನಿರೂಪಿಸಿದರು. 9ನೇ ತರಗತಿಯ ಅಖಿಲಾ ಪೈ ಸ್ವಾಗತಿಸಿ 10ನೇ ತರಗತಿಯ ಶ್ರೀಕೃಷ್ಣ ಶರ್ಮ ಧನ್ಯವಾದವನ್ನಿತ್ತರು.

LEAVE A REPLY

Please enter your comment!
Please enter your name here