ವಿದ್ಯಾನಿಧಿ ಸಹಾಯ

0
284

 
ವರದಿ : ರವೀಂದ್ರ ಭಟ್ಟ ಸೂರಿ
ಕೆಕ್ಕಾರು ಮುಕ್ರಿ ಸಮಾಜದ 60 ವಿದ್ಯಾರ್ಥಿಗಳಿಗೆ 3 ಲಕ್ಷ ರೂಪಾಯಿ ವಿದ್ಯಾ ಸಹಾಯ ನಿಧಿಯನ್ನು ಕೆಕ್ಕಾರಿ ಶ್ರೀ ರಘೂತ್ತಮ ಮಠದಲ್ಲಿ ಶ್ರೀ ರಾಮಚಂದ್ರಾಪುರ ಮಠದ ವಿದ್ಯಾ ವಿಭಾಗದ ವತಿಯಿಂದ ರಾಘವೇಶ್ವರ ಶ್ರೀಗಳು ವಿತರಿಸಿದರು.
 
 
ವಿದ್ಯಾ ವಿಭಾಗ ಹಾಗೂ ಇಮಾಮಿ ಫೌಂಡೇಶನ್ ಇವರ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು ಸೂರ್ಯ ಇಂಥವರಿಗೆ ಮಾತ್ರ ಬೆಳಕು ಕೊಡುತ್ತೇನೆಂದು ಹೇಳುವುದಿಲ್ಲ, ಗೋವು ಎಲ್ಲರಿಗೂ ಹಾಲು ಕೊಡುತ್ತದೆ, ನದಿ ಎಲ್ಲಿಗೂ ನೀರು ಕೊಡುತ್ತದೆ, ವೃಕ್ಷ ಎಲ್ಲರಿಗೂ ನೆರಳು ಹಣ್ಣು ಕೊಡುತ್ತದೆ. ರಾಮಚಂದ್ರಾಪುರ ಮಠ ಇವೆಲ್ಲದರಂತೆ ಇಲ್ಲಿನ ಕಾರುಣ್ಯಕ್ಕೆ ಆಶೀರ್ವಾದಕ್ಕೆ ಗಡಿ ಎಂಬುದಿಲ್ಲ. ಅದು ಎಲ್ಲರಿಗೂ ಲಭ್ಯ. ಯಾರಿಗೆ ಯಾವ ಮಠದ ಯಾವ ಮಟ್ಟದ ಆಶೀರ್ವಾದವೂ ಪ್ರಾಪ್ತವಾಗಿರಲಿಲ್ಲವೋ ಅವರಿಗೆ ನಮ್ಮ ಆಶೀರ್ವಾದ ಸಿಕ್ಕಿದೆ. ಶಂಕರಾಚಾರ್ಯ ಪೀಠದ ಆಶೀರ್ವಾದದ ಜೊತೆಗೆ ಸಹಾಯವು ದೊರಕಿರುವುದರಿಂದ ನಿಮ್ಮ ಜೀವನವಿಂದು ಪಾವನವಾಯಿತು.
 
 
ಮುಕ್ರಿ ಸಮಾಜದ ಮಕ್ಕಳು ಶ್ರೀ ಮಠದ ಮಕ್ಕಳು. ಇವರು ಬೇರೆಯವರಿಗೆ ನೀಡುವಂತಾಗಬೇಕು ಎಂಬುದು ನಮ್ಮ ಅಪೇಕ್ಷೆ ಎಂದರು. ಎಂ. ಕೆ. ಹೆಗಡೆ ಸಭಾ ಪೂಜೆ ನೆರವೇರಿಸಿದರು. ವಿದ್ಯಾ ವಿಭಾಗದ ಶ್ರೀ ಕಾರ್ಯದರ್ಶಿ ಶಾರದಾ ಜಯಗೊಂವಿಂದ ಪ್ರಾಸ್ತಾವಿಕ ನುಡಿಗಳನ್ನಾಡಿದರು.
 
 
ಎನ್. ಆರ್. ಮುಕ್ರಿ ಅನಿಸಿಕೆ ವ್ಯಕ್ತಪಡಿಸಿದರು. ರವೀಂದ್ರ ಭಟ್ಟ ಸೂರಿ ನಿರೂಪಿಸಿದರು. ಸದ್ಗುರು ಮಹಿಳಾ ಸ್ವಸಹಾಯ ಸಂಘ ಹಂದಿಗೋಣ ವತಿಯಿಂದ ಗುರು ಕಾಣಿಕೆ ಮತ್ತು ಬತ್ತಿ ಸಮರ್ಪಿಸಲಾಯಿತು. ಕುಮಟಾ ಹೊನ್ನಾವರ ಮಂಡಲದ ಸೇವಾ ಬಿಂದುಗಳು ಮುಕ್ರಿ ಸಮಾಜದ ಸಾವಿರಕ್ಕೂ ಮಿಕ್ಕಿದ ಗುರು ಭಕ್ತರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here