ವಿದೇಶಿ ಭಕ್ತೆಯಿಂದ ಸಾಯಿಗೆ ಸ್ವರ್ಣ ಕಿರೀಟ

0
424

ರಾಷ್ಟ್ರೀಯ ಪ್ರತಿನಿಧಿ ವರದಿ
ವಿದೇಶ ಭಕ್ತೆಯೊಬ್ಬರು ಶಿರಡಿ ಸಾಯಿಬಾಬಾಗೆ ಚಿನ್ನದ ಕಿರೀಟವನ್ನು ನೀಡಿದ್ದಾಳೆ. 72 ವರ್ಷದ ಇಟಲಿಯ ಸೆಲಿನಿ ಡೊಲಾರಸ್ (ಸಾಯಿ ದುರ್ಗಾ) ಎಂಬ ಮಹಿಳೆ ಸುಮಾರು 28 ಲಕ್ಷ ರೂ. ಮೌಲ್ಯದ 855 ಗ್ರಾಂ ತೂಕದ ರತ್ನ ಖಚಿತವಾದ ಚಿನ್ನದ ಕಿರೀಟವನ್ನು ಗುರುವಾರ ಕಾಣಿಕೆಯಾಗಿ ದೇಗುಲಕ್ಕೆ ಅರ್ಪಿಸಿದ್ದಾರೆ.
 
 
 
ಸಾಯಿ ದುರ್ಗಾ ಅವರು ಕಳೆದ 9 ವರ್ಷಗಳಿಂದ ಸಾಯಿಬಾಬಾ ಅವರ ಅನುಯಾಯಿಯಾಗಿದ್ದು, ಪ್ರತೀ ತಿಂಗಳೂ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಇದಕ್ಕೂ ಮುನ್ನ ಇವರು 25 ಲಕ್ಷ ರೂ. ಮೌಲ್ಯದ ಚಿನ್ನದ ಲೇಪನವಿರುವ ದಾರದಲ್ಲಿ ಪೋಣಿಸಿದ 2 ರುದ್ರಾಕ್ಷಿ ಮಾಲೆಯನ್ನು ಕಾಣಿಕೆಯಾಗಿ ನೀಡಿದ್ದರು ಎಂದು ಶ್ರೀ ಸಾಯಿಬಾಬ ಸಂಸ್ಥಾನ ಟ್ರಸ್ಟ್ರಿ ಮೂಲಗಳು ತಿಳಿಸಿದೆ.

LEAVE A REPLY

Please enter your comment!
Please enter your name here