ವಿದೇಶಿ ಪ್ರಜೆ ಬಂಧನ

0
192

ನವದೆಹಲಿ ಪ್ರತಿನಿಧಿ ವರದಿ
ಅಪಘಾತವೆಸಗಿ ಪರಾರಿಯಾಗುತ್ತಿದ್ದ ವಿದೇಶಿಗನ ಬಂಧನವಾಗಿದೆ. ದೆಹಲಿ ವಿಮಾನ ನಿಲ್ದಾಣದಲ್ಲಿ ಇಸ್ರೇಲ್ ಪ್ರಜೆಯ ಬಂಧನವಾಗಿದೆ. ಇಸ್ರೇಲ್ ಮೂಲದ ಓರಿಯಾ ಸ್ಲೋಮೋ(23) ಬಂಧಿತನಾದ ವ್ಯಕ್ತಿಯಾಗಿದ್ದಾನೆ. ಉತ್ತರಕನ್ನಡ ಜಿಲ್ಲೆಯ ಯಲ್ಲಾಫುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
 
 
ಜನವರಿ 18ರಂದು ಅರೆಬೈಲು ಘಟ್ಟದ ಸಮೀಪ ಅಪಘಾತ ಸಂಭವಿಸಿತ್ತು. ಅತಿ ವೇಗವಾಗಿ ಬೈಕ್ ಓಡಿಸಿ ಮತ್ತೊಂದು ಬೈಕ್ ಗೆ ಡಿಕ್ಕಿಯಾಗಿತ್ತು. ಅಪಘಾತದಲ್ಲಿ ಬೈಕ್ ಸವಾರ ಮಾಣಿ ಕುಣಬಿ ದುರ್ಮರಣ ಹೊಂದಿದ್ದ. ಈ ಸಂಬಂಧ ಯಲ್ಲಾಪುರ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.
 
 
ಆದರೆ ಅಪಘಾತವೆಸಗಿದ ಆರೋಪಿ ಸ್ನೇಹಿತೆ ಜತೆ ದೆಹಲಿ ಮೂಲಕ ಇಸ್ರೇಲ್ ಗೆ ಪರಾರಿಯಾಗಲು ಯತ್ನಿಸಿದ್ದ. ಈ ವೇಳೆ ಪೊಲೀಸರ ತಂಡ ಏರ್ ಪೋರ್ಟ್ ನಲ್ಲೇ ಆರೋಪಿಯನ್ನು ಬಂಧಿಸಿದ್ದಾರೆ. ಪಿಎಸ್ ಐ ಶ್ರೀಧರ್ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದ್ದಾರೆ.

LEAVE A REPLY

Please enter your comment!
Please enter your name here