ವಿದೇಶಿ ನೋಟುಗಳ ಕಳ್ಳಸಾಗಣೆ ಜಾಲ ಪತ್ತೆ

0
50


ವಿದೇಶಿ ನೋಟುಗಳನ್ನು ಆಹಾರ ಪದಾರ್ಥಗಳೊಳಗೆ ಇಟ್ಟು ಸಾಗಿಸುವ ನೂತನ ಕುತಂತ್ರದ ಜಾಲ ಪತ್ತೆಯಾಗಿದೆ. ಈ ರೀತಿಯ ಪ್ರಕರಣವು ದಿಲ್ಲಿನ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿದೆ.

ಭಾರೀ ಬೇಡಿಕೆ ಇರುವ ವಿದೇಶಿ ನೋಟುಗಳನ್ನು ಕಡಲೆಕಾಯಿ ಸಿಪ್ಪೆ, ಬಿಸ್ಕೇಟು ಹಾಗೂ ಬೇಯಿಸಿದ ಮಾಂಸಗಳ ಮುದ್ದೆಗಳ ಒಳಗೆ ಇಟ್ಟು ಸಾಗಿಸುವ ಜಾಲವನ್ನು ಕೇಂದ್ರಿಯ ಕೈಗಾರಿಕಾ ಭದ್ರತಾ ಪಡೆಯ ಸಿಬ್ಬಂದಿಗಳು ಪತ್ತೆ ಮಾಡಿದ್ದಾರೆ.


ಈ ಸಂಬಂಧ ಸಿಐಎಸ್ ಎಫ್ ಸಿಬಂದಿಗಳು ವಿಮಾನ ನಿಲ್ದಾಣದ ಟರ್ಮಿ ನಲ್ 3ರಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಮುರತ್ ಅಲಿ ಎಂಬಾತನನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತನಿಂದ 45 ಲಕ್ಷ ರೂ. ಮೌಲ್ಯ ವಿದೇಶಿ ಕರೆನ್ಸಿಯನ್ನು ವಶಪಡಿಸಿಕೊಂಡು, ಆತನನ್ನು ಬಂಧಿಸಿ, ವಿಚಾರಣೆಗ ಒಳಪಡಿಸಲಾಗಿದೆ.

LEAVE A REPLY

Please enter your comment!
Please enter your name here