ಪ್ರಮುಖ ಸುದ್ದಿವಾರ್ತೆವಿದೇಶ

ವಿತ್ತ ಸಚಿವರ ಸಂಪತ್ತಿನಲ್ಲಿ ಇಳಿಕೆ: ಪ್ರಧಾನಿ ಸಂಪತ್ತಿನಲ್ಲಿ ಏರಿಕೆ

ವರದಿ:ಲೇಖಾ
2015-16ರ ಹಣಕಾಸು ವರ್ಷದಲ್ಲಿ ಕೇಂದ್ರ ವಿತ್ತ ಸಚಿವ ಅರುಣ್‌ ಜೇಟ್ಲಿ ಅವರ ಸಂಪತ್ತಿನ ಮೌಲ್ಯ 6.02 ಕೋಟಿ ರೂ. ಕಡಿಮೆಯಾಗಿದ್ದು (ಶೇ.8.9) 60.99 ಕೋಟಿ ರೂ.ಗಳಿಗೆ ಇಳಿದಿದೆ. 2015-15ರಲ್ಲಿ ಜೇಟ್ಲಿ ಅವರ ಸಂಪತ್ತಿನ ಮೌಲ್ಯ 67.01 ಕೋಟಿ ರೂ.ಗಳಿತ್ತು ಎಂಬುದನ್ನು ಅಧಿಕೃತ ಅಂಕಿ ಅಂಶಗಳು ತಿಳಿಸಿವೆ.
 
 
2013-14ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಂಪತ್ತಿನ ಮೌಲ್ಯ 1.26 ಕೋಟಿ ರೂ.ಗಳಿತ್ತು. 2014-15ರಲ್ಲಿ ಅದು 15 ಲಕ್ಷ ರೂ. ಜಾಸ್ತಿಯಾಗಿ 1.41 ಕೋಟಿ ರೂ.ಗಳಿಗೆ ಏರಿದೆ. ಮೋದಿ ಅವರ ಸಂಪತ್ತಿನಲ್ಲಿ ಅವರ ಗಾಂಧಿನಗರ ಆಸ್ತಿ ಸೇರಿದ್ದು ಅದರ ಮೌಲ್ಯವೇ 1 ಕೋಟಿ ರೂ. ಇದೆ.
 
 
ವಿತ್ತ ಸಚಿವ ಅರುಣ್‌ ಜೇತ್ಲಿ ಅವರ ವಸತಿ ಮತ್ತು ವಾಣಿಜ್ಯ ಆಸ್ತಿ ಪಾಸ್ತಿಗಳ ಮಾರುಕಟ್ಟೆ ಮೌಲ್ಯ 2015ರ ಹಣಕಾಸು ವರ್ಷದಲ್ಲಿ ಇದ್ದಷ್ಟೇ 2106ರಲ್ಲೂ ಇದೆ. ಆದರೆ ಬ್ಯಾಂಕ್‌ ಖಾತೆಗಳಲ್ಲಿನ ಅವರ ಹಣ, ಕೈಯಲ್ಲಿನ ನಗದು ಮತ್ತು ಕಡಿಮೆಯಾಗಿರುವ ಅವರ ಒಡೆತನದ ವಾಹನಗಳ ಸಂಖ್ಯೆಯಿಂದಾಗಿ ಅವರ ಸಂಪತ್ತು ಕಡಿಮೆಯಾಗಿದೆ.
 
 
2013-14ರಲ್ಲಿ ಜೇಟ್ಲಿ ಅವರ 2 ಕೋಟಿ ರೂ.ಗಳ ಹೂಡಿಕೆಯನ್ನು ಮಾಡಿದ್ದರು. ಆ ಬಳಿಕ ಅವರು ಯಾವುದೇ ಹಣ ಹೂಡಿಕೆ ಮಾಡಿಲ್ಲ. 2015ರಲ್ಲಿ ಜೇತ್ಲಿ ಬಳಿ ಇದ್ದ ಹಣ 95.30 ಲಕ್ಷ ರೂ; 2016ರಲ್ಲಿ ಅದು 65.29 ಲಕ್ಷ ರೂ.ಗಳಿಗೆ ಇಳಿದಿದೆ. ಅವರ ಪಿಪಿಎಫ್ ಖಾತೆಯಲ್ಲಿ 2015ರಲ್ಲಿ 22.18 ಲಕ್ಷ ರೂ.ಗಳಿದ್ದರೆ 2016ರಲ್ಲಿ ಇದು 25.69 ಲಕ್ಷ ರೂ.ಗಳಿಗೆ ಏರಿದೆ.
 
 
ಜೇಟ್ಲಿ ಅವರ ಚರಾಸ್ತಿ 2015ರಲ್ಲಿ 9.10 ಕೋಟಿ ರೂ. ಇತ್ತು; 2016ರಲ್ಲಿ ಇದು 9.34 ಕೋಟಿ ರೂ.ಗಳಾಗಿವೆ. 2015ರಲ್ಲಿ ಜೇತ್ಲಿ ಅವರು ತಮ್ಮ 75 ಲಕ್ಷ ರೂ. ಮೌಲ್ಯದ ಆಸ್ತಿಪಾಸ್ತಿಗೆ ಬಹಿರಂಗಪಡಿಸದ ಮುಂಗಡವನ್ನು ಕೊಟ್ಟಿದ್ದಾರೆ; 2016ರಲ್ಲಿ 75.6 ಲಕ್ಷ ರೂ. ಮೌಲ್ಯದ ಆಸ್ತಿಗೆ ಮುಂಗಡ ಕೊಟ್ಟಿದ್ದಾರೆ.
 
 
ವಿತ್ತ ಸಚಿವರ ಒಡೆತನದಲ್ಲಿ , ದಿಲ್ಲಿ, ಹರಿಯಾಣದ ಗುರುಗ್ರಾಮ, ಪಂಜಾಬ್‌ನ ಅಮೃತಸರ ಮತ್ತು ಗುಜರಾತ್‌ ನ ಗಾಂಧಿನಗರದಲ್ಲಿ ಒಟ್ಟು ಆರು ಬಂಗಲೆಗಳಿವೆ; ಮಾತ್ರವಲ್ಲದೆ ನಗರದ ಉದ್ದಗಲದಲ್ಲೂ ಅವರಿಗೆ ವಾಣಿಜ್ಯ ಸೊತ್ತುಗಳಿವೆ ಎಂದು ಅಂಕಿ ಅಂಶಗಳು ತಿಳಿಸಿವೆ.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here