ವಿತ್ತ ಸಚಿವರಿಂದ ಸುದ್ದಿಗೋಷ್ಣಿ

0
223

ನವದೆಹಲಿ ಪ್ರತಿನಿಧಿ ವರದಿ
ತೊಂದರೆಗಳ ನಡುವೆಯೂ ಜನ ನೋಟ್ ಗಳ ಬ್ಯಾನ್ ಕ್ರಮವನ್ನು ಸ್ವಾಗತಿಸಿದ್ದಾರೆ. ಉದ್ದದ ಕ್ಯೂ ನಿಲ್ಲುವ ಸ್ಥಿತಿಯಿದ್ದರೂ ಜನ ಸಹಕರಿಸಿದ್ದಾರೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
 
 
ದೇಶದಲ್ಲಿ 500 ಮತ್ತು 1000ರೂ. ಮುಖಬೆಲೆಯ ನೋಟುಗಳ ಬ್ಯಾನ್ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಕೇಂದ್ರ ಸರ್ಕಾರ ಕ್ರಮಕ್ಕೆ ಜನರ ಜತೆಗೆ ಬ್ಯಾಂಕ್ ಸಿಬ್ಬಂದಿ ಸಹ ಉತ್ತಮವಾಗಿ ಸಹಕರಿಸುತ್ತಿದ್ದಾರೆ. ರಜೆಯೂ ತೆಗೆದುಕೊಳ್ಳದೇ ಹಗಲು-ರಾತ್ರಿ ಕೆಲಸ ಮಾಡುತ್ತಿದ್ದಾರೆ.
 
 
ಕೇಂದ್ರ ಹಣಕಾಸು ಸಚಿವರ ಸುದ್ದಿಗೋಷ್ಠಿಯ ಪ್ರಮುಖ ಅಂಶಗಳು:
500ರೂ., 1000ರೂ. ನೋಟುಗಳ ಬದಲಿಗೆ ಹೊಸ ನೋಟುಗಳು ಬಂದಿದೆ. ಆರಂಭದಲ್ಲಿ ಇದರಿಂದ ಜನರಿಗೆ ತೊಂದರೆಯಾಗಬಹುದು. ಬ್ಯಾಂಕ್ ಗಳಿಗೆ ಸಾರ್ವಜನಿಕರು ತೆರಳುವುದರಿಂದ ರಷ್ ಆಗಲಿದೆ. ಈ ಕಾರ್ಯಾಚರಣೆ ಈಗ ಪ್ರಾರಂಭವಾಗಿದೆ. ಇದರ ಬಗ್ಗೆ ಜನರು ತಿಳಿದುಕೊಳ್ಳಬೇಕಾಗಿದೆ. ಬ್ಯಾಂಕ್ ಗಳು ಹಣದ ಬಗ್ಗೆ ನಮಗೆ ಅಂಕಿ ಅಂಶ ನೀಡುತ್ತಿದೆ.
ಕಪ್ಪುಹಣದ ವಿರುದ್ಧ ಇದೊಂದು ಬಹುದೊಡ್ಡ ಕಾರ್ಯಾಚರಣೆಯಾಗಿದೆ. ಇದಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಎಂದು ವಿತ್ತ ಸಚಿವರು ಹೇಳಿದ್ದಾರೆ.
 
 
 
ಒಟ್ಟು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಶೇ.20 ಇತರೆ ಬ್ಯಾಂಕ್ ಗಳಲ್ಲಿ ವ್ಯವಹಾರ ನಡೆಯುತ್ತಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನೋಟು ವಿನಿಮಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಐದು ಬಗೆಯ ಹಣ ವಿನಿಮಯಕ್ಕೆ ಅವಕಾಶ ನೀಡಲಾಗಿದೆ. ಹಣವನ್ನು ಡೆಪಾಸಿಟ್ ಮಾಡುವ ಅವಕಾಶ ನೀಡಲಾಗಿದೆ. ಹಣ ಡೆಪಾಸಿಟ್ ಮಾಡಿ ಹಣ ವಾಪಸ್ ಪಡೆದುಕೊಳ್ಳುವ ಅವಕಾಶ ನೀಡಲಾಗಿದೆ. ಪೋಸ್ಟ್ ಆಫೀಸ್ ಗಳಲ್ಲೂ ಹಣ ವಿನಿಮಯಕ್ಕೆ ಅವಕಾಶ ನೀಡಲಾಗಿದೆ.
 
ಬ್ಯಾಂಕಿಂಗ್ ವ್ಯವಸ್ಥೆ ಜನರ ಸೇವೆ ಎಷ್ಟು ಮಾಡುತ್ತಿದೆ ಎಂದು ಈಗ ಗೊತ್ತಾಗುತ್ತಿದೆ. ಸ್ಟೇಟ್ ಬ್ಯಾಂಕ್ ಹಾಗೂ ಇತರೆ ಬ್ಯಾಂಕ್ ಗಳ ಬಗ್ಗೆ ವ್ಯವಹಾರದ ಬಗ್ಗೆ ಗೊತ್ತಾಗುತ್ತದೆ. ಸ್ಟೇಟ್ ಬ್ಯಾಂಕ್ ಒಂದರಲ್ಲಿ 47,868 ಕೋಟಿ ಜಮೆ ಆಗಿದೆ. ಜನರು ಬ್ಯಾಂಕಿಂಗ್ ವ್ಯವಸ್ಥೆಯ ಒಂದು ಭಾಗವಾಗುತ್ತಿದೆ. ಬ್ಯಾಂಕ್ ನಲ್ಲಿ ಡೆಪಾಸಿಟ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಕೋಟ್ಯಂತರ ರೂಪಾಯಿ ಲೆಕ್ಕಾದಲ್ಲಿ ಜನ ಡೆಪಾಸಿಟ್ ಮಾಡುತ್ತಿದ್ದಾರೆ, ಡ್ರಾ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಜನರ ರಷ್ ಕಡಿಮೆಯಾಗಲಿದೆ.
 
 
ಹೊಸ ನೋಟು ಘೋಷಣೆ ಬಗ್ಗೆ ಗೌಪ್ಯವಾಗಿಡಲಾಗಿತ್ತು. ಎಡಿಎಂ ಮೆಷೀನ್ ಗಳಲ್ಲಿ ಮೊದಲೇ ಹಣ ಜಮಾ ಮಾಡಿರಲಿಲ್ಲ. ಗೌಪ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಹೀಗೆ ಮಾಡಲಾಗಿತ್ತು.
 
 
ಸ್ಟೇಟ್ ಬ್ಯಾಂಕ್ ಒಂದರಲ್ಲಿ ಇಂದು ಮಧ್ಯಾಹ್ನ 12.15 ಗಂಟೆಯವರೆಗೆ 2.28 ಲಕ್ಷ ವ್ಯವಹಾರ ನಡೆದಿದೆ. 57370 ಕೋಟಿ ರೂ. ಹಣ ಎಸ್ ಬಿಐ ನಲ್ಲಿ ಜಮೆಯಾಗಿದೆ. 81 ಲಕ್ಷ ಜನರು ನೋಟುಗಳನ್ನು ಬದಲಿಸಿಕೊಂಡಿದ್ದಾರೆ. 22 ಲಕ್ಷ ಜನ ಎಟಿಎಂ ಮೂಲಕ ವ್ಯವಹಾರ ನಡೆಸಿದ್ದಾರೆ. ಕೇವಲ ಎರಡೂ ಕಾಲು ದಿನಗಳಲ್ಲಿ ಈ ಪ್ರಮಾಣದ ವ್ಯವಹಾರ ನಡೆದಿದೆ. ಡಿಸರ್ವ್ ಬ್ಯಾಂಕ್, ಬ್ಯಾಂಕ್ ಚೆಸ್ಟ್ ಗಳಲ್ಲಿ ಸಾಕಷ್ಟು ಹಣವಿದೆ.
 
 
ಕೆಲವರು ಈ ಬಗ್ಗೆ ರಾಜಕೀಯ ಮಾಡಲು ಮುಂದಾಗಿದ್ದಾರೆ. ಆರ್ಥಿಕ ವ್ಯವಸ್ಥೆಯನ್ನು ಸ್ವಚ್ಛ ಮಾಡಲು ಸರ್ಕಾರ ಮುಂದಾಗಿದೆ. ಕಾಂಗ್ರೆಸ್ ತಮ್ಮ ಹಣಕ್ಕೆ ನಾವ್ಯಾಕೆ ಕ್ಯೂ ನಿಲ್ಲಬೇಕು ಅಂತಾ ಕೇಳುತ್ತಿದೆ. ಆದರೆ ನಿಮ್ಮ ಹಣಕ್ಕೆ ತೆರಿಗೆ ಪಾವತಿಸಿದ್ದೀರಾ ಇಲ್ಲವೆ ಗೊತ್ತಾಗಬೇಕಲ್ಲ ಎಂದು ಅರುಣ್ ಜೇಟ್ಲಿ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ನೋಟುಗಳ ವಿನಿಮಯಕ್ಕೆ ಡಿಸೆಂಬರ್ 30ರವರೆಗೆ ಅವಕಾಶ ನೀಡಲಾಗಿದೆ. ಹೀಗಾಗಿ ನೋಟು ವಿನಿಮಯಕ್ಕೆ ಯಾವುದೇ ಅತುರಬೇಡ ಎಂದು ವಿತ್ತ ಸಚಿವರು ದೇಶದ ಜನರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.
 
 
ಎಟಿಎಂ ಗಳನ್ನು ಮೊದಲೇ ಸರಿಪಡಿಸಿಕೊಳ್ಳಬೇಕಿತ್ತು. ಹೀಗೆಂದು ಹಲವು ಮುಖಂಡರು ಹೇಳುತ್ತಿದ್ದಾರೆ. ಕೆಲವರು ಅತ್ಯಂತ ಬಾಲಿಶ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ವಿಪಕ್ಷಗಳಿಗೆ ಟಾಂಗ್ ನೀಡಿದ್ದಾರೆ.
ನಿನ್ನೆ ಉಪ್ಪು ಕೊರತೆಯಾಗಿದೆ ಎಂದು ವದಂತಿ ಹಬ್ಬಿಸಲಾಗಿತ್ತು. ಇದೊಂದು ಆರ್ಥಿಕ ಸ್ಥಿತಿಯನ್ನು ಸ್ವಚ್ಛ ಮಾಡುವ ಕ್ರಿಯೆಯಾಗಿದೆ. ಎಲ್ಲೆಲ್ಲಿ ಗುಪ್ತಚರ ಮಾಹಿತಿ ಸಿಗುತ್ತೆ, ಕಾನೂನು ಬಾಹಿರ ಹಣ ಕಂಡುಬಂದರೆ ಕ್ರಮಕೈಗೊಳ್ಳಲಾಗುತ್ತದೆ. ಅಲ್ಲದೆ ಚಿನ್ನ ಖರೀದಿಗೆ ಮುಂದಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಇದಕ್ಕೆ ಚಿನ್ನದ ಮಳಿಗೆಗಳಿಂದ ಸ್ಟಾಕ್ ಬಗ್ಗೆ ಮಾಹಿತಿ ಕೇಳಿದ್ದೇವೆ.
 
 
ಎಲ್ಲಾ ಕಡೆ ಪರಿಸ್ಥಿತಿ ಶಾಂತಿಯುತವಾಗಿದೆ. ಕೆಲವೆಡೆ ಜನಧನ್ ಅಕೌಂಟ್ ಗೆ ಹಣ ತುಂಬಲಾಗುತ್ತದೆ ಎನ್ನಲಾಗಿದೆ. ಇಂಥಾ ಕೆಲಸ ಕೂಡಾ ಕಾನೂನು ಬಾಹಿರವಾಗಿದೆ. ಎಟಿಎಂ ತುಂಬಲು ಸ್ವಲ್ಪ ಕಾಲಾವಕಾಶ ಬೇಕು. ಹೊಸ ನೋಟುಗಳ ಕಾರ್ಯಾಚರಣೆಗೆ ಹೊಸ ತಂತ್ರಜ್ಞಾನ ಬೇಕಾಗಿದೆ. ನಕಲಿ ನೋಟುಗಳ ಬಗ್ಗೆ ಸರ್ಕಾರದ ಇಲಾಖೆಗಳು ನಿಗಾ ಇಡಲಿದೆ. ಕಾನೂನುಬಾಹಿರ ಉದ್ದೇಶಗಳಿಗೆ ಹಣ ಬಳಕೆ ಬಗ್ಗೆಯೂ ನಿಗಾ ಇಡಲಿದೆ. 2000ರೂ.ನೋಟುಗಳಲ್ಲಿ ಜಿಪಿಎಸ್ ಇದೆ ಎಂದು ವದಂತಿ ಹಬ್ಬಲಾಗಿದೆ. ಇವತ್ತು ಕೆಲವರಿಗೆ ಈ ಬಗ್ಗೆ ಗೊತ್ತಿತ್ತು ಎಂದು ವದಂತಿ ಹರಡಲಾಗುತ್ತಿದೆ. ಜನರು ಇಂಥಾ ವದಂತಿಗಳನ್ನು ನಂಬಬಾರದು.

LEAVE A REPLY

Please enter your comment!
Please enter your name here