ವಿಜಯದಶಮಿ ಆಚರಣೆ

0
341

ಪುತ್ತೂರು ಪ್ರತಿನಿಧಿ ವರದಿ
ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಕಳೆದ ಶುಕ್ರವಾರ ಕಾಲೇಜು ಸಭಾಂಗಣದಲ್ಲಿ ವಿಜಯದಶಮಿ ಕಾರ್ಯಕ್ರಮವನ್ನು ಆಚರಿಸಲಾಯಿತು.
 
 
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ನಾ.ಸೀತಾರಾಮ್ ,ನಿರ್ದೇಶಕರು ವಿವೇಕಾನಂದ ವಿದ್ಯಾವರ್ಧಕ ಸಂಘ (ರಿ.)ಪುತ್ತೂರು, ಮಂಗಳೂರು ವಿಭಾಗ ಕಾರ್ಯವಾಹ, ಇವರು ಬೌದ್ಧಿಕ್ ನೀಡಿದರು. ಅಧ್ಯಕ್ಷರಾಗಿ ಕಾಲೇಜಿನ ಆಡಳಿತ ಮಂಡಳಿ ಸದಸ್ಯರಾದ ಡೀಕಯ್ಯ ಪೆರೋಡಿ ವಿಶ್ವ ಹಿಂದೂ ಪರಿಷತ್ ಪ್ರಮುಖರು ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಕೃಷ್ಣಮೂರ್ತಿ ಕೆ.ಜಿ.ಉಪಸ್ಥಿತರಿದ್ದರು.
 
 
ಅತಿಥಿಗಳು ಮಾತನಾಡುತ್ತಾ ಪ್ರಸ್ತುತ ಸಮಾಜ ಸತ್ಯದ ಶೋಧನೆಗಾಗಿ ತೊಡಗಬೇಕು ಏಕೆಂದರೆ ಇಂದು ಗೊತ್ತು ಗುರಿಯಿಲ್ಲದೆ ಎಲ್ಲಾ ವ್ಯಕ್ತಿಗಳು ಹಾಸಿಗೆಗಿಂತ ಉದ್ದಕ್ಕೇ ಕಾಲುಚಾಚುವಂತ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಕಠಿಣ ಸಾಧನೆಯಿಂದ ಶ್ರಮಿಸಬೇಕು, ಜೀವನದಲ್ಲಿ ಕೇವಲ ಹಣ ಸಂಪಾದನೆ ಮಾತ್ರ ಮುಖ್ಯವಲ್ಲ ಬದಲಾಗಿ ಗುಣ ಮುಖ್ಯ , ಕೇವಲ ಹಣದ ಆಸೆಗಾಗಿ ಸಮಾಜದ ಹಿತವನ್ನು ಬಲಿಕೊಡಬಾರದು. ಆದ್ದರಿಂದ ಸಮಾಜದಲ್ಲಿ ನೈಜ ಸತ್ಯದ ಶೋಧನೆ ಹಾಗೂ ಸಾಧನೆಗಳಿಗೆ ಒತ್ತು ನೀಡಬೆಂದರು. ಹಿಂದುತ್ವ ಎನ್ನುವುದು ಆಡಂಭರದ ಅಸ್ಮಿತೆಯಾಗಿ ಉಳಿಯದೆ ಅಭಿವೃದ್ಧಿ ಪಥದಲ್ಲಿ ಸದಾ ಗುರುತಿಸುವಂತಾಗಬೇಕು ಎಂದು ಅಭಿಪ್ರಯಿಸಿದರು.
 
 
ಡೀಕಯ್ಯ ಪೆರೋಡಿ ಮಾತನಾಡುತ್ತಾ ವಿಜಯದಶಮಿ ಹಬ್ಬ ಹೇಗೆ ಒಂದು ಜನರನ್ನು ಒಟ್ಟುಗೂಡಿಸಿ ಒಂದು ಸಂಘ ರಚಿಸಲು ಕಾರಣವಾಯಿತೋ , ಹಾಗೆಯೇ ಎಲ್ಲರೂ ದೇಶದ ಏಕತೆಯತ್ತ ಹೋರಾಡುವತ್ತ ಕರೆಯಿತ್ತರು. ಗಿರೀಶ್ ವೈಯುಕ್ತಿಕ ಗೀತೆಯನ್ನು ಹಾಡಿದರು, ಸಭಾಗತರ ಪರಿಚಯವನ್ನು ಪ್ರಶಾಂತ್ ನೀಡಿದರು. ಕಾರ್ಯಮವನ್ನು ಸುಜಿತ್ ನೆರವೇರಿಸಿದರು.

LEAVE A REPLY

Please enter your comment!
Please enter your name here