ವಿಚಾರ ಸಂಕಿರಣ

0
616

ನಮ್ಮ ಪ್ರತಿನಿಧಿ ವರದಿ
ಮುನಿಯಾಲು ಆಯುರ್ವೇದ ಕಾಲೇಜಿನಲ್ಲಿ ದಿನಾಂಕ 10/12/2016ರಂದು ಒಂದು ದಿನದ ವಿಚಾರ ಸಂಕಿರಣ ಋಷ್ಯರ್ಚವನ್ನು ಯಶಸ್ವಿಯಾಗಿ ನೆರವೇರಿಸಲಾಯಿತು. ಇದರಲ್ಲಿ ಆಯುರ್ವೇದ ಕ್ಷೇತ್ರದಲ್ಲಿ ಸಂಶೋಧನೆ ಎಂಬ ವಿಷಯದ ಬಗ್ಗೆ ತಜ್ಞ ವೈದ್ಯರು ವೈಜ್ಞಾನಿಕ ಪ್ರಬಂಧಗಳನ್ನು ಮಂಡಿಸಿದರು.ಮೊದಲು ದೀಪ ಪ್ರಜ್ವಲನದೊ0ದಿಗೆ ಕಾರ್ಯಕ್ರಮ ಆರಂಭವಾಗಿ ವಿಶೇಷಜ್ಞರುಗಳಾದ ಮೈಸೂರು ಸರಕಾರಿ ಆಯುರ್ವೇದ ಮಹಾವಿದ್ಯಾಲಯದ ಸಂಹಿತಾ ಸಿದ್ಧಾಂತ ವಿಭಾಗದ ಮುಖ್ಯಸರಾದ ಡಾ. ಶ್ರೀವತ್ಸ ಇವರು ಆಯುರ್ವೇದದಲ್ಲಿ ಉಲ್ಲೇಖಿಸಿರುವ ಪ್ರಾಚೀನ ಸಂಶೋಧನಾ ಪದ್ಧತಿಗಳ ಬಗ್ಗೆ ಬೆಳಕು ಚೆಲ್ಲಿದರು. ಕೊಪ್ಪಳ ಆಯುರ್ವೇದ ಕಾಲೇಜಿನ ಸ್ನಾತಕೋತ್ತರ ವಿಭಾಗದ ಮುಖ್ಯಸರಾಗಿರುವ ಡಾ. ಆಕಾಶ್ ಕೆಂಭಾವಿ ಇವರು ಆಯುರ್ವೇದದಲ್ಲಿ ಸಂಶೋಧನೆ ಹೇಗೆ ಮಾಡಬೇಕೆಂದು ಮಾರ್ಗದರ್ಶನ ನೀಡಿದರು.
 
 
 
ದ್ರವ್ಯಗುಣ ವಿಭಾಗದ ತಜ್ಞರಾಗಿರುವ ಡಾ. ಶೀಧರ ಬಾಯಿರಿಯವರು ಆಯುರ್ವೇದದಲ್ಲಿ ದ್ರವ್ಯಾನುಸಂಧಾನ ಎಂಬ ವಿಷಯದ ಬಗ್ಗೆ ಪ್ರಬಂಧ ಮಂಡಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಮಣಿಪಾಲ ವಿಶ್ವ ವಿದ್ಯಾಲಯದ ಸಂಖ್ಯಾಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ. ಬೀನು ವಿ.ಎಸ್. ಇವರು ವೈದ್ಯಕೀಯ ಸಂಶೋಧನೆಯಲ್ಲಿ ಸಂಖ್ಯಾಶಾಸ್ತ್ರದ ಬಳಕೆ ಮತ್ತು ಮಹತ್ವದ ಬಗ್ಗೆ ವಿವರಿಸಿದರು. ಸಂಸ್ಥೆಯ ಪ್ರಾಂಶುಪಾಲರಾದ ಡಾ. ಸತ್ಯನಾರಾಯಣ, ಸ್ನಾತಕೋತ್ತರ ವಿಭಾಗದ ಅಧ್ಯಕ್ಷರಾದ ಡಾ. ರವಿಶಂಕರ್ ಶೆಣೈ, ನಿರ್ದೇಶಕರಲ್ಲೊಬ್ಬರಾದ ಶ್ರೀಮತಿ ಹೆಮಲತಾ ಶೆಟ್ಟಿಯವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ವಿವಿಧ ಸ್ನಾತಕೋತ್ತರ ಆಯುರ್ವೇದ ಕಾಲೇಜುಗಳ ಆಯ್ದ 80 ಪ್ರತಿನಿಧಿಗಳು ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here